newsics.com
ನವದೆಹಲಿ: ಮುಂದಿನ ದಿನಗಳಲ್ಲಿ ಹಿಂದೂ ಮತ್ತು ಸಿಖ್ ಸಮುದಾಯದ ಪ್ರಯಾಣಿಕರಿಗೆ ‘ಹಲಾಲ್’ ಪ್ರಮಾಣೀಕೃತ ಆಹಾರ ವಿತರಣೆ ಮಾಡುವುದಿಲ್ಲ ಎಂದು ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಹೇಳಿದೆ.
ಇದೇ ವರ್ಷದ ಜೂನ್ 17ರಂದು ವಿರುದುನಗರದ ಕಾಂಗ್ರೆಸ್ ಸಂಸದ ಮಣಿಕಂ ಟ್ಯಾಗೋರ್, ಏರ್ ಇಂಡಿಯಾದಲ್ಲಿ ಧರ್ಮದ ಆಧಾರದ ಮೇಲೆ ಊಟವನ್ನು ಲೇಬಲ್ ಮಾಡುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಏರ್ ಇಂಡಿಯಾ ವೆಬ್ಸೈಟ್ನ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದ ಸಂಸದರು ‘ಹಿಂದೂ’ ಅಥವಾ ‘ಮುಸ್ಲಿಂ’ ಊಟ ಎಂದರೇನು ಎಂದು ಖಾರವಾಗಿ ಪ್ರಶ್ನಿಸಿದ್ದರು. ನಾಗರಿಕ ವಿಮಾನಯಾನ ಸಚಿವಾಲಯದಿಂದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದ ಕಾಂಗ್ರೆಸ್ ನಾಯಕ, ಸಂಘಿಗಳು ಏರ್ ಇಂಡಿಯಾವನ್ನು ವಶಪಡಿಸಿಕೊಂಡಿದ್ದಾರೆಯೇ? ಎಂದು ಪ್ರಶ್ನಿಸಿದ್ದರು.
ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಹಲಾಲ್ ಊಟ ರದ್ದು ಮಾಡುವ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ.
https://x.com/MeghUpdates/status/1855857353708699873?t=J_1d6i-bwIzP1M_AJG1PVw&s=19
ಅತ್ಯಾಚಾರ ಆರೋಪ: ಸುಪ್ರೀಂನಲ್ಲಿ ಪ್ರಜ್ವಲ್ ರೇವಣ್ಣ ಅರ್ಜಿ ವಜಾ, ಮಾಜಿ ಸಂಸದಗೆ ಜೈಲೇ ಗತಿ
ಪುಷ್ಪ- 2 ಸಿನಿಮಾದಲ್ಲಿ ಶ್ರೀಲೀಲಾ ಫಸ್ಟ್ಲುಕ್; ಸಮಂತಾಗಿಂತ ಹಾಟ್ ಎಂದ ಪಡ್ಡೆ ಹುಡುಗರು!