newsics.com
ಹಾವೇರಿ: ಬಾಲಿವುಡ್ ನಟ ಸಲ್ಮಾನ್‌ಖಾನ್‌ಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ, ರಾಜಸ್ಥಾನ ಮೂಲದ ಬಿಕಾರಾಮ್‌ನನ್ನು ಹಾವೇರಿ ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಿಕಾರಾಮ್ ಕೂಲಿ ಕೆಲಸಕ್ಕೆಂದು ಇತ್ತೀಚೆಗಷ್ಟೇ ಅಂದರೆ ಸುಮಾರು ಒಂದೂವರೆ ತಿಂಗಳ ಹಿಂದೆ ಹಾವೇರಿ ನಗರಕ್ಕೆ ಬಂದಿದ್ದ ಎನ್ನಲಾಗಿದೆ. ಇಲ್ಲಿ ನಗರದ ಗೌಡರ ಓಣಿಯಲ್ಲಿ ಕೂಲಿಕಾರರೊಂದಿಗೆ ರೂಮ್ ಮಾಡಿಕೊಂಡಿದ್ದು, ಕಬ್ಬಿಣದ ಗ್ರಿಲ್ ಕೆಲಸ ಮಾಡಿಕೊಂಡು ಕೂಲಿಕಾರರಂತೆ ವಾಸವಾಗಿದ್ದ.
ಮುಂಬೈ ಪೊಲೀಸರ ಮಾಹಿತಿ ಮೇರೆಗೆ ಆರೋಪಿಯನ್ನು ಜಿಲ್ಲಾ ಪೊಲೀಸರು ವಶಕ್ಕೆ ಪಡೆದು ಮುಂಬೈ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ರಸ್ತೆಯಲ್ಲಿ ವ್ಲಾಗ್ ಮಾಡುತ್ತ ಸಾಗುತ್ತಿದ್ದ ಯುವತಿಯ ಎದೆ ಭಾಗ ಮುಟ್ಟಿ ಪರಾರಿಯಾದ ಹುಡುಗ! ವೈರಲ್ ವಿಡಿಯೋ ನೋಡಿ