newsics.com
ಮೈಸೂರು: ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರಿನಲ್ಲಿರುವ ಲೋಕಾಯುಕ್ತ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗಿದ್ದಾರೆ. ಈ ಮಧ್ಯೆ ಸಿಎಂ ಗೆ ಕೇಳಲು ಲೋಕಾಯುಕ್ತ ಸಿದ್ಧ ಮಾಡಿಕೊಂಡಿರುವ ಪ್ರಶ್ನೆಗಳ ಬಗ್ಗೆ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಸಿಎಂಗೆ ಲೋಕಾಯುಕ್ತ ಪ್ರಶ್ನೆಗಳಿವು
- 14 ನಿವೇಶನಗಳನ್ನು ನಿಮ್ಮ ಪತ್ನಿ ಮುಡಾದಿಂದ ಪಡೆದರುವುದು ನಿಮ್ಮ ಪ್ರಭಾವದಿಂದ ಎಂಬ ಆರೋಪ ಇದೆ?
- ನಿಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದೀರಾ ಎಂಬ ಆರೋಪ ಇದೆ?
- ನೀವು ಅಧಿಕಾರದಲ್ಲಿದ್ದಾಗಲೇ ನಾಲ್ಕು ಹಂತದಲ್ಲಿ ಪ್ರಭಾವ ನಡೆದಿಯೆಂತೆ?
- ಭೂಮಿ ಕಳೆದಕೊಂಡ ಬಡವಾಣೆ ಬಿಟ್ಟು ಸಮಾನಾಂತರ ಬಡವಾಣೆಯಲ್ಲಿ ಹೊರತುಪಡಿಸಿ ವಿಜಯನಗರದಲ್ಲಿ ನಿವೇಶನ ಬೇಕು ಅಂತ ಅರ್ಜಿ ಹಾಕಿದ್ರಾ?
- ವಿಜಯನಗರದಲ್ಲಿ 14 ನಿವೇಶನ ನಿಮ್ಮ ಪತ್ನಿ ಹೆಸರಿಗೆ ಬಂದಿದ್ದು ನಿಮಗೆ ಗೊತ್ತಿದ್ಯಾ? ಯಾವಾಗ ಗೊತ್ತಾಯಿತು?
- ನಿಮ್ಮ ಬಾಮೈದ ನಿಮ್ಮ ಪತ್ನಿಗೆ ಭೂಮಿಯನ್ನ ಅರಿಶಿಣ ಕುಂಕುಮಕ್ಕೆ ದಾನ ಕೊಟ್ಟಾಗ ನಿಮಗೆ ಮಾಹಿತಿ ಇತ್ತಾ?
- ಭೂಮಿಯ ವಿವಾದದ ಹಿನ್ನೆಲೆ ನಿಮಗೆ ಯಾವಾಗ ಗೊತ್ತಾಯಿತು?
- ನಿವೇಶನ ಹಂಚಿಕೆ ಮಾಡುವಾಗ ಮುಡಾ ಆಯುಕ್ತರನ್ನ ಸಂಪರ್ಕ ಮಾಡಿದ್ರಾ?
- ನಿಮ್ಮ ಪುತ್ರ ಯತೀಂದ್ರ ನಿವೇಶನ ಹಂಚಿಕೆ ಸಂಧರ್ಭದಲ್ಲಿ ಮುಡಾ ಸಭೆಗೆ ಇದ್ರು ಎಂಬ ಆರೋಪ ಇದೆ?
- ಆರ್ಥಿಕ ಲಾಭಕ್ಕಾಗಿ ಇದೇ ವಿಜಯನಗರ ವ್ಯಾಪ್ತಿಯಲ್ಲಿ 14 ನಿವೇಶನ ಪಡೆದಿದ್ದಾರೆ ಎಂಬ ಆರೋಪ ಇದೆ?
- ವೈಟ್ನರ್ ಹಿಂದಿರುವ ಪದಗಳು ಏನು?
- ನಿಮ್ಮ ಪತ್ನಿ ಪಾರ್ವತಿ ಅವರು ಕೊಟ್ಟ ಪತ್ರದಲ್ಲಿ ಇದ್ದ ಬದಲಿ ನಿವೇಶನದ ಮಾಹಿತಿ ಹೇಳಿ?
- ನೀವು ಭೂಮಿಗೆ 65 ಕೋಟಿ ಹಣ ಪರಿಹಾರಣ ಹಣ ಕೇಳಿದ್ರಿ, ಇದು ಯಾವ ಆಧಾರದ ಮೇಲೆ?
- ಒಟ್ಟಾರೆ ಪ್ರಕರಣದ ಬಗ್ಗೆ ಏನೆಲ್ಲ ಮಾಹಿತಿ ಇದೆ ಹೇಳಿ?
ಹೀಗೆ ಹಲವು ಪ್ರಶ್ನೆಗಳನ್ನು ಲೋಕಯುಕ್ತರು ಸಿದ್ಧಪಡಿಸಿ ಇಟ್ಟುಕೊಂಡಿದ್ದರು. ಇದಕ್ಕೂ ಮುನ್ನ ಕೇಸ್ ನ ವಿವರವನ್ನು ಆರೋಪಿಗೆ ತನಿಖಾಧಿಕಾರಿ ವಿವರಿಸಿದರು. ಬಳಿಕ ವಿಚಾರಣೆ ಆರಂಭಿಸಲಾಯಿತು. ಮೈಸೂರು ಲೋಕಾಯುಕ್ತದಿಂದ ಸಿಎಂ ವಿಚಾರಣೆ ಹಿನ್ನೆಲೆಯಲ್ಲಿ ಪೊಲೀಸ್ ಭಿಗಿ ಭದ್ರತೆ ಕೈಗೊಳ್ಳಲಾಗಿದೆ.