newsics.com
ಹಾಸನ : ವರ್ಷಕ್ಕೊಮ್ಮೆ ದರ್ಶನ ನೀಡುವ ಜಿಲ್ಲೆಯ ಅಧಿದೇವತೆ ಶ್ರೀ ಹಾಸನಾಂಬ ದೇವಾಲಯದ ಬಾಗಿಲನ್ನು ನಾಳೆಯಿಂದ ನವೆಂಬರ್ 3ರವರೆಗೆ ತೆರೆದಿರುತ್ತದೆ.
ಹಾಸನಾಂಬ ದೇವಾಲಯಕ್ಕೆ ವರ್ಷದಿಂದ ವರ್ಷಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರತಿ ವರ್ಷ 9-12 ದಿನ ಮಾತ್ರ ದರ್ಶನ ನೀಡುವ ಪ್ರತೀತಿ ಹೊಂದಿರುವ ಹಾಸನಾಂಬ ದೇವಿ ನಾಡಿನಲ್ಲೆ ವಿಶೇಷ ಎನ್ನಬಹುದು.
ಹಾಸನ ನಗರದ ಅನುಪಮ ಪ್ರಭಾವದ ಶಕ್ತಿದೇವತೆ, ಸಪ್ತ ಮಾತೃಕೆಯರಲ್ಲಿ ಒಬ್ಬಳಾದ ನಗರದ ಗ್ರಾಮದೇವತೆ ಹಾಸನಾಂಬ ದೇವಿಯ ಸ್ಥಳ ಮಹಾತ್ಮೆ. ದೇವಿಯ ಮಹಿಮೆಯನ್ನು ಅಪಾರವಾಗಿ ನಂಬುವ ಭಕ್ತ ಸಮೂಹವಿಲ್ಲಿದ್ದು, ನಂಬಿಕೆ, ಭಕ್ತಿ, ಮಹಿಮೆಗಳೆ ಇಲ್ಲಿನ ವೈಶಿಷ್ಟ್ಯವಾಗಿದೆ. ದೇವಾಲಯದ ಬಾಗಿಲು ಮುಚ್ಚುವ ಸಮಯದಲ್ಲಿ ದೇವಿಯ ಎದುರು ಇಡಲಾಗುವ ನೈವೇಧ್ಯವು ಮತ್ತೇ ಮುಂದಿನ ವರ್ಷ ಇದೇ ಸಮಯದಲ್ಲಿ ಬಾಗಿಲು ತೆರೆದಾಗ ತಾಜಾ ಆಗಿ ಹಾಗೂ ದೇವರ ಎದುರಿನಲ್ಲಿರುವ ದೀಪವು ವರ್ಷವೀಡಿ ಉರಿಯುತ್ತಲೇ ಇರುತ್ತದೆ ಎಂಬ ಪ್ರತೀತಿ ಇದೆ.