newsics.com
ಬೆಂಗಳೂರು: ಬಾಬುಸಾಬ್‌ಪಾಳ್ಯ ನಿರ್ಮಾಣ ಹಂತದ ಕಟ್ಟಡ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಸದ್ಯ ಕಟ್ಟಡ ಮಾಲೀಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದು ಏಳು ಅಂತಸ್ತಿನ ಕಟ್ಟಡ ನಿರ್ಮಿಸಿ ನಿಯಮ ಉಲ್ಲಂಘಿಸಿದ ಹಾಗೂ ಕಳಪೆ ಕಾಮಗಾರಿಗೆ ಕಾರಣರಾದ ಆರೋಪದ ಮೇಲೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಐವರ ಮೃತದೇಹ ಪತ್ತೆಯಾಗಿದ್ದು, ಇದೀಗ ಮತ್ತೊಂದು ಮೃತದೇಹ ಸಿಕ್ಕಿದೆ. ಈ ಮೂಲಕ ಸಾವಿನ ಸಂಖ್ಯೆ ಎಂಟಕ್ಕೇರಿದೆ. ಮೃತ ತ್ರಿಪಾಲ್‌ನ ಮೃತದೇಹವನ್ನು ಅವಶೇಷಗಳಿಂದ ಸಿಬ್ಬಂದಿಗಳು ಹೊರತೆಗೆದಿದ್ದಾರೆ. ಬಿಎನ್‌ಎಸ್, ಬಿಬಿಎಂಪಿ ಆರ್‌ಇಆರ್‌ಎ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಮಿಕ ಮೊಹಮ್ಮದ್ ಹರ್ಷದ್ ನೀಡಿರುವ ದೂರಿನ ಮೇಲೆ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರು ಕಟ್ಟಡ ಕುಸಿತ ಕೇಸ್: ಮಾಲೀಕ ಮುನಿರಾಜು ರೆಡ್ಡಿ ವಿರುದ್ಧ FIR