newsics.com
ಯುಕೆ ಸಂಸತ್ ನಲ್ಲಿ ಬಸವೇಶ್ವರರ ‘ಇವನಾರವ ಇವನಾರವ’ ವಚನ ಪಠಿಸಿ ಬೀದರ್ ನ ಆದೀಶ್ ವಾಲಿ ಕನ್ನಡ ಪ್ರೇಮ ಮೆರೆದಿದ್ದಾರೆ.
ಲಂಡನ್ ಸಂಸತ್ ನಲ್ಲಿ ಬಸವಣ್ಣವರ ವಚನ ಪಠಿಸಿದ ಯುವಕ ಬೀದರ್ ಜಿಲ್ಲೆಯರು. ಬೀದರ್‌ನ ಡಾ. ರಜನೀಶ ವಾಲಿ ಪುತ್ರ ಆದಿಶ್ ವಾಲಿ ಪಿಯುಸಿ ವರೆಗೆ ಬೀದರ್‌ನಲ್ಲಿ ಅಭ್ಯಾಸ ಮಾಡಿ ನಂತರ ಲಂಡನ್ನಲ್ಲಿರುವ ಪ್ರತಿಷ್ಠಿತ ಕೋವೆಂಟ್ರಿ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ.
ಯುಕೆ ಕೌನ್ಸಿಲ್‌ನ ಮೊದಲ ಭಾರತೀಯ ಸದಸ್ಯ
ಲಂಡನ್, ಯುಕೆ ಕೌನ್ಸಿಲ್‌ನ ಮೊದಲ ಭಾರತೀಯ ಸದಸ್ಯ ಕೂಡಾ ಆಗಿರುವ ಆದೇಶ ವಾಲಿ ವಿದೇಶದಲ್ಲಿ ಕನ್ನಡದ ಕಂಪು ಮೂಡಿಸಿದ್ದಾರೆ. ಆದೇಶ ರಜನೀಶ್ ವಾಲಿ ಇಂಗ್ಲೆಂಡಿನ ಸಂಸತ್ ಭವನದಲ್ಲಿ ಕನ್ನಡದ ಕಲರವ ಮೂಡಿಸಿದ್ದಾರೆ. ವಿಶ್ವಗುರು ಬಸವೇಶ್ವರರ ‘ಇವನಾರವ ಇವನಾರವ’ ಎಂಬ ವಚನ ಪಠಿಸಿದ್ದಾರೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದುಳಿದ ಜಿಲ್ಲೆ ಎಂದು ಹಣೆಪಟ್ಟಿ ಹೊಂದಿರುವ ಬೀದರ್ ಜಿಲ್ಲೆಯ ವಿದ್ಯಾರ್ಥಿಯೊಬ್ಬ ವಿಶೇಷ ಸಾಧನೆ ಮಾಡಿದ್ದಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.