newsics.com
ಬೆಂಗಳೂರು : ಬಿಗ್ ಬಾಸ್ ಸೀಸನ್ 10ರಲ್ಲಿ ಸದ್ದು ಮಾಡಿದ್ದ ಹುಲಿ ಉಗುರಿನ ಪೆಂಡೆಂಟ್ ಪ್ರಕರಣ ಮತ್ತೊಮ್ಮೆ ಈ ಸೀಸನ್ ಅಲ್ಲೂ ಸದ್ದು ಮಾಡುವ ಸಾಧ್ಯತೆ ಇದೆ.
ಹುಲಿ ಉಗುರಿನ ಪೆಂಡೆಂಟ್ ಇದ್ದ ಆರೋಪದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನ ಬಂಧಿಸಲಾಗಿತ್ತು. ಸೆರೆವಾಸ ಅನುಭವಿಸಿದ್ದ ವರ್ತೂರು ಸಂತೋಷ್ ಅವರು ಬಿಡುಗಡೆಯಾದ ಬಳಿಕ ಮತ್ತೊಮ್ಮೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು.
ಬಿಗ್ ಬಾಸ್ ಸೀಸನ್ 11ರ ನಾಲ್ಕನೇ ಸ್ಪರ್ಧಿಯಾಗಿ ಗೋಲ್ಡ್ ಸುರೇಶ್ ಎಂಟ್ರಿ ಕೊಟ್ಟಿದ್ದಾರೆ. ಗೋಲ್ಡ್ ಸುರೇಶ್ ಅವರು ಮೈ ತುಂಬಾ ಬಂಗಾರದ ಸರವನ್ನು ಧರಿಸಿಕೊಂಡು ಬಂದಿದ್ದಾರೆ. ಕೋಟಿ, ಕೋಟಿ ಬೆಲೆ ಬಾಳುವ ಚಿನ್ನದ ಸರದಲ್ಲಿ ಹುಲಿ ಉಗುರಿನ ಮಾದರಿಯ ಪೆಂಡೆಂಟ್ ಧರಿಸಿದ್ದಾರೆ. ಹುಲಿ ಉಗುರು ವಿನ್ಯಾಸದಲ್ಲಿರುವ ಗೋಲ್ಡ್ ಪೆಂಡೆಂಟ್ ಈಗ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದೆ. ಅಸಲಿ ಹುಲಿ ಉಗುರೋ? ಫೈಬರ್ ಉಗುರೋ? ಗೊತ್ತಿಲ್ಲ. ಈ ಬಗ್ಗೆ ಅರಣ್ಯಾಧಿಕಾರಿಗಳು ತನಿಖೆ ಮಾಡಿದರೆ ಸತ್ಯಾಂಶ ತಿಳಿಯಲಿದೆ.