newsics.com
ಮೈಸೂರು: ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ವಿಚಾರಣೆಎ ಪೊಲೀಸರು ಸಜ್ಜಾಗಿದ್ದಾರೆ. ತನಿಖೆಗೆ ನಾಲ್ಕು ತಂಡ ಸಜ್ಜಾಗಿದ್ದು, ಸೋಮವಾರದಿಂದಲೇ ಫೀಲ್ಡ್‌ಗೆ ಇಳಿಯಲಿವೆ. ಈ ಮಧ್ಯೆ ದೂರುದಾರ ಸ್ನೇಹಮಯಿ ಕೃಷ್ಣ ಸಿದ್ದರಾಮಯ್ಯ ವಿರುದ್ಧ ಇಡಿಗೂ ದೂರು ನೀಡಿದ್ದಾರೆ.
ಮುಡಾದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಇಡಿಗೆ 16 ಪುಟಗಳ ಇ-ಮೇಲ್ ಹಾಗೂ ಪತ್ರ ಬರೆಯುವ ಮೂಲಕ ಜಾರಿ ನಿರ್ದೇಶನಾಲಯದ ಬೆಂಗಳೂರು ನಿರ್ದೇಶಕರಿಗೆ ದೂರು ನೀಡಿದ್ದಾರೆ. ಮನಿ ಲ್ಯಾಂಡರಿಂಗ್ ಆ್ಯಕ್ಟ್ ಮೂಲಕ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. .