newsics.com
ಬೆಂಗಳೂರು : ತಾಂತ್ರಿಕ ದೋಷದಿಂದಾಗಿ ಐಎಎಫ್‍ನ ತರಬೇತಿ ಹೆಲಿಕಾಪ್ಟರ್ ಚೆನ್ನೈ ಬಳಿಯ ಪೊಪರ್ಂದಲ್‍ನ ಗದ್ದೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಇಬ್ಬರು ಸಿಬ್ಬಂದಿ ಹಾರಾಟ ನಡೆಸುತ್ತಿದ್ದ ಹೆಲಿಕಾಪ್ಟರ್ ಸಲವಕ್ಕಂ ಪೊಲೀಸ್ ಠಾಣಾ ವ್ಯಾಪ್ತಿಯ ಪೊಪರ್ಂದಲ್ ಪ್ರದೇಶಕ್ಕೆ ಸಮೀಪಿಸಿದಾಗ ಹಠಾತ್ತನೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಪರಿಣಾಮವಾಗಿ ಪೈಲಟ್ ಗದ್ದೆಯಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ
ಅದೃಷ್ಟವಶಾತ್ ತುರ್ತು ಭೂಸ್ಪರ್ಶದ ವೇಳೆ ಯಾವುದೇ ಅನಾಹುತ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.