Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ
ಕರ್ನಾಟಕದೇಶಪ್ರಮುಖ

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

Share
3 Min Read
SHARE

newsics.com | ನ್ಯೂಸಿಕ್ಸ್

ಹಾಸನ: ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡರ ಧರ್ಮಪತ್ನಿ ಚನ್ನಮ್ಮ ಅವರ ಸಮಾಧಿ ಮಾಡಿರುವ ಹರದನಹಳ್ಳಿ ಸಮೀಪದ ಮಾವಿನಕೆರೆ ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನ ಪ್ರದೇಶವನ್ನು ಧಾರ್ಮಿಕ, ಸಮಾಜ ಸುಧಾರಣೆ ಹಾಗೂ ದೇಶಕ್ಕೇ ಮಾದರಿಯಾದ ಆಕರ್ಷಣೀಯ ಪ್ರೇಕ್ಷಣೀಯ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ 300 ಕೋಟಿ ರೂ.ಅಂದಾಜಿನ ನೀಲನಕ್ಷೆ ಸಿದ್ಧವಾಗಿದೆ.

ಚನ್ನಮ್ಮ ಅವರ ಪುತ್ರ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೇ ಈ ಯೋಜನೆ ಬಗ್ಗೆ ಸುಳಿವು ನೀಡಿದ್ದು, ಚನ್ನಮ್ಮ ಅವರ 11ನೇ ದಿನದ ಕಾರ್ಯ ನಡೆಯುವ ಜು.30ರಂದು ಬೃಹತ್ ಯೋಜನೆಯ ರೂಪುರೇಷೆ ಪ್ರಕಟಿಸುವ ಸಾಧ್ಯತೆಯಿದೆ.

ಬೆಟ್ಟಕ್ಕೆ ಕೇಬಲ್ ಕಾರ್?

ಈಗ ಹೊಸದಾಗಿ ನಿರ್ಮಾಣವಾಗಿರುವ ನೀಲ ನಕ್ಷೆಯಲ್ಲಿ ಚನ್ನಮ್ಮ ಅವರ ಸಮಾಧಿಯ ಸ್ಥಳ ಸೇರಿ ಬೆಟ್ಟದ ತಪ್ಪಲನ್ನು ದೆಹಲಿಯ ರಾಜ್ ಘಾಟ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದರ ಜತೆಗೆ ಸುಮಾರು 450 ಎಕರೆಯಿರುವ ಬೆಟ್ಟದಲ್ಲಿ ಹೂವು, ಹಣ್ಣಿನ ಗಿಡಗಳನ್ನು ವಿಶೇಷವಾಗಿ ಈ ಪರಿಸರಕ್ಕೆ ಹೊಂದಿಕೊಳ್ಳುವ ನೂರಾರು ವರ್ಷ ಬಾಳುವ ಗಿಡಗಳನ್ನು ನೆಟ್ಟು ಬೆಳೆಸುವುದು, ಬೆಟ್ಟದಲ್ಲಿ ನಿತ್ಯವೂ ಅನ್ನದಾಸೋಹಕ್ಕೆ ವ್ಯವಸ್ಥೆ, ಅದಕ್ಕೆ ಬೇಕಾದ ದಾಸೋಹ ಭವನದ ನಿರ್ಮಾಣ, ಬೆಟ್ಟಕ್ಕೆ ಕೇಬಲ್ ಕಾರ್ ನಿರ್ಮಾಣವೂ ನೀಲ ನಕ್ಷೆಯಲ್ಲಿ ಸೇರಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ಚನ್ನಮ್ಮ ಅವರ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಸುಂದರ ಸ್ಮಾರಕ ನಿರ್ಮಿಸಿ ಧಾರ್ಮಿಕ ಹಾಗೂ ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ತಾಯಿಯ ಹೆಸರನ್ನು ಚಿರಸ್ಥಾಯಿಯಾಗಿಸಲು ಪುತ್ರರಾದ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಎಚ್‌.ಡಿ.ರೇವಣ್ಣ ಸೇರಿದಂತೆ ಇಡೀ ಕುಟುಂಬ ಸಂಕಲ್ಪ ಮಾಡಿದೆ.

300 ಕೋಟಿ ರೂ. ವೆಚ್ಚ:
ಬೆಟ್ಟದ ತಪ್ಪಲಿನ 24 ಎಕರೆ ಪ್ರದೇಶದಲ್ಲಿ ಸುಂದರ ಸ್ಮಾರಕ ನಿರ್ಮಿಸಲು ಅಂದಾಜು 300 ಕೋಟಿ ವೆಚ್ಚದ ಯೋಜನೆ ಸಿದ್ಧವಾಗುತ್ತಿದೆ. ಜಮೀನು-ತೋಟದ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು, ಈಗಾಗಲೇ ಒಪ್ಪಂದ ಕರಾರು ಮಾಡಿಕೊಂಡು ಮುಂಗಡ ಹಣವನ್ನು ಸಹ ಸಂದಾಯ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಚನ್ನಮ್ಮ  ಶನಿವಾರ ಇಹಲೋಕ ತ್ಯಜಿಸುತ್ತಿದ್ದಂತೆ, ಮಾವಿನಕೆರೆ ಬೆಟ್ಟದ ತಪ್ಪಲಿನ ಜಮೀನು ಮಾಲೀಕರೊಂದಿಗೆ ರಾತ್ರೊರಾತ್ರಿ ಸಭೆ ನಡೆಸಿ, ತೆಂಗು, ಅಡಕೆ ತೋಟವನ್ನು ಗುಂಟೆಗೆ 2.25 ಲಕ್ಷ ರೂ. ಗದ್ದೆಗೆ 1.50 ಲಕ್ಷ ರೂ.ನಂತೆ ದರ ನಿಗದಿಪಡಿಸಲಾಗಿದೆ ಎನ್ನುತ್ತಾರೆ ರೈತರು.

ರೈತರಿಂದ ಜಾಗವನ್ನು ಸ್ವಾಧೀನಕ್ಕೆ ಪಡೆದು ಹಗಲಿರುಳು ನೂರಾರು ಕಾರ್ಮಿಕರಿಂದ ಸಮತಟ್ಟು ಮಾಡಿಸಿ ಚೆನ್ನಮ್ಮ ಅವರ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಆ ಸ್ಥಳದಲ್ಲಿ ಕಾಂಪೌಂಡ್‌ ನಿರ್ಮಾಣದ ಕೆಲಸವೂ ಆಗಿದೆ.

ಸ್ಮಾರಕ ನಿರ್ಮಾಣ ಸಂಬಂಧ ಪ್ರಸಿದ್ಧ ವಾಸ್ತುಶಿಲ್ಪಿಗಳಿಂದ 300 ಕೋಟಿ ವೆಚ್ಚದ ಯೋಜನೆ ಈಗಾಗಲೇ ರೂಪುಗೊಳ್ಳುತ್ತಿದೆ. 11ನೇ ದಿನದ ಕಾರ್ಯದ ವೇಳೆ ಸ್ಮಾರಕ ನಿರ್ಮಾಣ ಕುರಿತಂತೆ ನಾನೇ ಪ್ರಕಟಿಸುತ್ತೇನೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಇಲ್ಲಿ ಚನ್ನಮ್ಮ ಅವರ ಸ್ಮಾರಕ ಮಾತ್ರವಲ್ಲ. ತಾಯಿಯ ನಿಸ್ವಾರ್ಥ ಪ್ರೀತಿ, ಸಹನೆ, ತ್ಯಾಗ ಹಾಗೂ ಕರುಣೆ ಸಂದೇಶವನ್ನು ಸಾರುವ ಶಾಂತಿಯ ತೋಟವಾಗಿ ಕಂಗೊಳಿಸಲಿದೆ. ಇಂದಿನ ಯುವ ಜನತೆಗೆ ತಂದೆ-ತಾಯಿಯ ಮಹತ್ವದ ಬಗ್ಗೆ ತಿಳಿಸಲು ಹಾಗೂ ಸರ್ವ ಜನಾಂಗದವರೂ ಬಂದು ವೀಕ್ಷಿಸಬಹುದಾದ ಐತಿಹಾಸಿಕ ಪ್ರವಾಸಿ ಸ್ಥಳವಾಗಿ ಅಭಿವೃದ್ಧಿಪಡಿಸುವ ಕುರಿತು ಕುಟುಂಬ ತೀರ್ಮಾನಿಸಿದೆ.

ಟ್ರಸ್ಟ್‌ ರಚನೆ

ಈಗಾಗಲೇ 10 ಎಕರೆಗೂ ಹೆಚ್ಚು ಜಾಗ ಖರೀದಿಯಾಗಿದ್ದು, ಸಮಾಧಿ ಸ್ಥಳದ ಸುತ್ತಮುತ್ತ ಹತ್ತಾರು ಎಕರೆ ಖರೀದಿಸಿ ಅಲ್ಲಿ ಸ್ಮೃತಿ ವನ ನಿರ್ಮಾಣ, ಸಂಸ್ಕೃತ ಪಾಠಶಾಲೆ ಸೇರಿ ಶೈಕ್ಷಣಿಕ ಪೂರಕ ಯೋಜನೆ, ಮಾಜಿ ಪ್ರಧಾನಿ ದೇವೇಗೌಡರ ಹುಟ್ಟಿನಿಂದ ಅವರ ಹೋರಾಟ, ರಾಜಕೀಯ ಜೀವನ, ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ನಾಡಿಗೆ ನೀಡಿದ ಕೊಡುಗೆ ಸೇರಿದಂತೆ ಸಮಗ್ರ ವಿವರಗಳನ್ನೊಳಗೊಂಡ ಮ್ಯೂಸಿಯಂ, ತಪ್ಪಲಿನಲ್ಲಿರುವ ಕೆರೆಯನ್ನೂ ಅಭಿವೃದ್ಧಿಪಡಿಸಿ ಅಲ್ಲಿ ದೋಣಿ ವಿಹಾರ ಸೇರಿ ಹಲವು ಯೋಜನೆಗಳಿವೆ. ಇವೆಲ್ಲವನ್ನೂ ಹಂತ, ಹಂತವಾಗಿ ಅನುಷ್ಠಾನಗೊಳಿಸುವ ಉದ್ದೇಶವಿದ್ದು, ಅದಕ್ಕಾಗಿ ರಾಜಕೀಯ ಹೊರತಾದ ಹಾಗೂ ದೇವೇಗೌಡರ ಕುಟುಂಬದ ಹೊರತಾದ ಟ್ರಸ್ಟ್ ರಚನೆ ಮಾಡುವ ಪ್ರಯತ್ನ ನಡೆದಿವೆ ಎಂದು ತಿಳಿದುಬಂದಿದೆ.

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

 

TAGGED:#channamma #devegowda #samadhi #hassan #karnataka #news #hdkumaraswamy #newsics #kannadanews
Share This Article
Facebook Twitter Copy Link Print
Previous Article Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ
Next Article Today Gold Rates In Bangalore| ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಅಲ್ಪ ಬದಲಾವಣೆ

Popular Posts

Daily Horoscope ಇಂದಿನ ದಿನ ಭವಿಷ್ಯ – 23 ಜುಲೈ 2026

2 Min Read

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read

Today Gold Rates In Bangalore| ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಅಲ್ಪ ಬದಲಾವಣೆ

2 Min Read

You Might Also Like

ಕರ್ನಾಟಕದೇಶಪ್ರಮುಖ

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read
ಕರ್ನಾಟಕಪ್ರಮುಖ

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read
ಕರ್ನಾಟಕಕೃಷಿ

Lalabhag Flower Show | ಲಾಲ್‌ಬಾಗ್ ಪುಷ್ಪ ಪ್ರದರ್ಶನ 2026: ಗಂಗರ ವೈಭವ ಅನಾವರಣಗೊಳಿಸುವ 220ನೇ ಹೂವಿನ ಉತ್ಸವ

2 Min Read
ಜ್ಯೋತಿಷ್ಯಪ್ರಮುಖ

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?