newsics.com | ನ್ಯೂಸಿಕ್ಸ್
ಇಂದು ಜುಲೈ 22 ರ, ಬುಧವಾರ, ದ್ವಿದ್ವಾದಶ ದೃಷ್ಟಿ ಯೋಗ, ಸಾಧ್ಯ ಯೋಗ, ಶುಭ ಯೋಗ ಸೇರಿದಂತೆ ಅನೇಕ ಯೋಗಗಳು ರೂಪಗೊಳ್ಳುತ್ತಿವೆ. ಇದರಿಂದಾಗಿ ಈ ದಿನದ ಮಹತ್ವ ಇನ್ನಷ್ಟು ಹೆಚ್ಚಾಗಲಿದೆ.
ಕೆಲವು ರಾಶಿಗಳು ಈ ಶುಭ ಯೋಗಗಳ ಲಾಭವನ್ನು ಪಡೆಯಲಿದ್ದಾರೆ.ಈ ರಾಶಿಯವರ ಕೆಲಸ ಮತ್ತು ವ್ಯಾಪಾರದಲ್ಲಿ ವೃದ್ದಿಯೊಂದಿಗೆ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಇಂದು ಬುಧ, ಮಂಗಳನ ನಡುವೆ 30 ಡಿಗ್ರಿ ಅಂತರದಿಂದ ದ್ವಿದ್ವಾದಶ ದೃಷ್ಟಿ ಯೋಗ ನಿರ್ಮಾಣವಾಗಲಿದೆ.
ಕೆಲವು ಪರಿಹಾರಗಳನ್ನು ನೀವು ಅನುಸರಿಸುವುದರಿಂದ ನಿಮ್ಮ ಜಾತಕದಲ್ಲಿ ಬುಧ ಗ್ರಹದ ಸ್ಥಾನವು ಬಲಗೊಳ್ಳುತ್ತದೆ ಮತ್ತು ಗಣೇಶನ ಕೃಪೆಗೆ ನೀವು ಪಾತ್ರರಾಗಬಹುದು. ಇದರಿಂದಾಗಿ ನಿಮ್ಮ ಕಷ್ಟಗಳೆಲ್ಲವೂ ದೂರವಾಗಿ, ನಿಮ್ಮ ಕೆಲಸಗಳನ್ನು ಸುಲಭವಾಗಿ ಪೂರ್ಣಗೊಳಿಸುವಿರಿ.
ವೃಷಭ ರಾಶಿಗೆ ಸೇರಿದ ಜನರಿಗೆ ಬಹಳ ಶುಭ ಮತ್ತು ಪ್ರಯೋಜನಕಾರಿಯಾದ ದಿನವಾಗಿರುವುದು. ಶುಭ ಯೋಗದ ಪ್ರಭಾವದಿಂದಾಗಿ ನಿಮ್ಮ ಆತ್ಮವಿಶ್ವಾಸ ಬಹಳಷ್ಟು ವೃದ್ದಿಯಾಗಲಿದೆ. ಇದರಿಂದಾಗಿ ನಿಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಇನ್ನಷ್ಟು ಬಲಗೊಳ್ಳುವುದು. ಶುಭ ಯೋಗಗಳ ಪ್ರಭಾವದಿಂದಾಗಿ ಬಹಳ ಸಮಯದಿಂದ ಅಪೂರ್ಣಗೊಂಡಂತಹ ವೃಷಭ ರಾಶಿಗೆ ಸೇರಿದ ಕೆಲಸಗಳೆಲ್ಲವೂ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ಹಾಗೆ ಮನೆಗೆ ಸಂಬಂಧಿಸಿದ ವಿಚಾರ ಅಥವಾ ಕೆಲಸದ ಸ್ಥಳದಲ್ಲಿ ಉತ್ತಮ ಅವಕಾಶಗಳ ಪ್ರಾಪ್ತಿಯಾಗುವ ಯೋಗ ನಿರ್ಮಾಣಗೊಳ್ಳುವುದು.
ಕೆಲಸವನ್ನು ಮಾಡುತ್ತಿರುವ ವೃಷಭ ರಾಶಿಗೆ ಸೇರಿದ ಜನರಿಗೆ ಈ ಅವಧಿಯು ಬಹಳಷ್ಟು ಅನುಕೂಲಕರವಾಗಿರುವುದು. ಕೆಲಸದ ಸ್ಥಳದಲ್ಲಿ ನಮ್ಮ ಕಠಿಣ ಪರಿಶ್ರಮದಿಂದಾಗಿ ಅತ್ಯುತ್ತಮ ಫಲ ದೊರಕುವ ಸಾಧ್ಯತೆ ಹೆಚ್ಚಾಗಿರುವುದು. ಹಾಗೆ ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಪಡೆಯುವುದು. ಇದರೊಂದಿಗೆ ಮನೆಯಲ್ಲಿ ಸುಖ, ಶಾಂತಿಯ ವಾತಾವರಣವಿರುವುದು. ಜೊತೆಗೆ ನಿಮ್ಮ ಕಳೆದು ಹೋದ ಹಣವನ್ನು ನಾಳೆ ವಾಪಸ್ಸು ಪಡೆಯುವ ಸಾಧ್ಯತೆ ಹೆಚ್ಚಾಗಿರಲಿದೆ. ಇದರೊಂದಿಗೆ ನಿಮ್ಮ ಆರ್ಥಿಕ ಸ್ಥಿತಿಯ ಮೊದಲಿಗಿಂತ ಸಾಕಷ್ಟು ಬಲಗೊಳ್ಳುವುದು.
ಮಿಥುನ ರಾಶಿಗೆ ಸೇರಿದ ಜನರಿಗೆ ಈ ದಿನ ಶುಭ ಯೋಗಗಳ ಪ್ರಭಾವದಿಂದಾಗಿ ಸರ್ಕಾರಾತ್ಮಕ ಫಲಿತಾಂಶಗಳು ದೊರಕುವ ಸಂಭವ ಹೆಚ್ಚಾಗಿರುವುದು. ಈ ಸಂದರ್ಭದಲ್ಲಿ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಅಪಾರ ಲಾಭವನ್ನು ಗಳಿಸುವ ಸಂಭವವಿದೆ. ಜತೆಗೆ ನಿಮ್ಮ ಆದಾಯವನ್ನು ಹೆಚ್ಚಿಸಲು ಅನೇಕ ಮಾರ್ಗಗಳು ಗೋಚರಿಸುವುದು. ಇದರಿಂದಾಗಿ ಭವಿಷ್ಯದಲ್ಲಿ ಉಳಿತಾಯ ಮಾಡಲು ಉತ್ತಮ ಮಾರ್ಗಗಳನ್ನು ಪಡೆದುಕೊಳ್ಳುವಿರಿ. ವ್ಯಾಪಾರ ವ್ಯವಹಾರವನ್ನು ಮಾಡುವ ಮಿಥುನ ರಾಶಿಗೆ ಸೇರಿದ ಜನರು ಈ ಅವಧಿಯಲ್ಲಿ ವಿಶೇಷವಾಗಿ ಹೆಚ್ಚಿನ ಪ್ರಯೋಜನಗಳನ್ನು ಪಡೆಯುವರು.
ಜತೆಗೆ ಪಾಲುದಾರಿಕೆಗೆ ಸಂಬಂಧಿಸಿದಂತೆ ಹೊಸ ಅವಕಾಶಗಳ ಪ್ರಾಪ್ತಿಯಿಂದ ಸಾಕಷ್ಟು ಪ್ರಯೋಜನಗಳನ್ನು ಗಳಿಸುವಿರಿ. ಇದರೊಂದಿಗೆ ಮಿಥುನ ರಾಶಿಗೆ ಸೇರಿದ ಜನರು ಸರಿಯಾಗಿ ಯೋಚಿಸುವ ಮೂಲಕ ನಿಮ್ಮ ಬುದ್ಧಿವಂತಿಗೆ ಸಾಮರ್ಥ್ಯ ಮತ್ತು ತರ್ಕಶಕ್ತಿಯು ಇನ್ನಷ್ಟು ಸುಧಾರಿಸುವುದು. ಸಾಮಾಜಿಕ ಜೀವನಕ್ಕೆ ಸಂಬಂಧಿಸಿದಂತೆ ಹೊಸ ಸಂಪರ್ಕಗಳು ಮತ್ತು ಅವಕಾಶಗಳನ್ನು ಪಡೆದುಕೊಳ್ಳುವಿರಿ. ಮಿಥುನ ರಾಶಿಗೆ ಸೇರಿದ ಜನರ ಧನ, ಸಮೃದ್ಧಿ ಸಾಕಷ್ಟು ಹೆಚ್ಚಾಗಲಿದೆ. ವ್ಯಾಪಾರ, ವ್ಯವಹಾರ ಮಾಡುವ ಜನರಿಗೆ ಈ ಅವಧಿಯು ಅದ್ಭುತವಾಗಿರುವುದು. ಸಮಾಜದಲ್ಲಿ ಹೊಸ ಮತ್ತು ಪ್ರಭಾವಶಾಲಿ ವ್ಯಕ್ತಿಗಳನ್ನು ಸಂಪರ್ಕಿಸುವ ಅವಕಾಶ ದೊರಕುವುದು.
ಸಿಂಹ ರಾಶಿಗೆ ಸೇರಿದ ಜನರಿಗೆ ಇಂದು ಗಣೇಶನ ಕೃಪೆಯಿಂದ ಯಶಸ್ಸನ್ನು ಗಳಿಸಲು ಹೊಸ ಮಾರ್ಗಗಳು ಗೋಚರಿಸುವವು. ವೃತ್ತಿ ವ್ಯವಹಾರಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ಗಳಿಸುವಿರಿ. ಹಾಗೆ ನಿಮಗೆ ಉನ್ನತ ಪದವಿಯೊಂದಿಗೆ ಹೊಸ ಜವಾಬ್ದಾರಿ ಕೂಡ ಲಭಿಸಬಹುದಾಗಿದೆ. ಸಿಂಹ ರಾಶಿಗೆ ಸೇರಿದ ಜನರು ಅನುಕೂಲಕರ ಸಮಯವನ್ನು ಹೊಂದುವರು. ನಿಮ್ಮ ಆದಾಯವು ಸಾಕಷ್ಟು ಉತ್ತಮವಾಗಿರುವುದರೊಂದಿಗೆ ನಿಮ್ಮ ಆರ್ಥಿಕ ಸ್ಥಿತಿಯು ಕೂಡ ಬಲಗೊಳ್ಳುವುದು.
ಇದರಿಂದಾಗಿ ದೊಡ್ಡ ಖರ್ಚುಗಳಿಗೆ ಸಂಬಂಧಿಸಿದಂತೆ ಮನಸ್ಸು ಸ್ಥಿರವಾಗಿರುವುದು. ಹಾಗೆ ಸಿಂಹ ರಾಶಿಗೆ ಸೇರಿದ ಜನರು ಹೂಡಿಕೆ ಬಗ್ಗೆ ಯೋಜನೆಯನ್ನು ರೂಪಿಸುತ್ತಿದ್ದರೆ, ನಿಮಗೆ ಬಹಳ ಅನುಕೂಲಕರವಾಗಿರಲಿದೆ. ಈ ಸಂದರ್ಭದಲ್ಲಿ ಯೋಜಿಸುವುದು ಉತ್ತಮ. ನಿಮ್ಮ ನಾಯಕತ್ವ ಸಾಮರ್ಥ್ಯ ವೃದ್ಧಿಯಾಗುವುದು. ಸಮಾಜದಲ್ಲಿ ಹಾಗೂ ಮನೆಯವರಲ್ಲಿ ಗೌರವ, ಖ್ಯಾತಿಯನ್ನು ಇನ್ನಷ್ಟು ವೃದ್ಧಿಸುವುದು.
ಕುಂಭ ರಾಶಿಗೆ ಸೇರಿದ ಜನರಿಗೆ ಇಂದು ಶುಭಯೋಗಗಳ ಅನುಗ್ರಹದಿಂದಾಗಿ ಹಠಾತ್ ಆರ್ಥಿಕ ಲಾಭ ದೊರಕುವ ಸಂಭವ ಹೆಚ್ಚಾಗಿರುವುದು. ಜತೆಗೆ ನಿಮ್ಮ ಗುರಿಗಳ ಕಡೆಗೆ ಹೆಚ್ಚಿನ ಗಮನವನ್ನು ನೀಡಲು ಸಾಧ್ಯವಾಗುವುದು ಮತ್ತು ವ್ಯಾಪಾರ, ವ್ಯವಹಾರಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಉತ್ತಮ ಫಲಗಳನ್ನು ಗಳಿಸುವಿರಿ. ಜತೆಗೆ ಗಣೇಶನ ಅನುಗ್ರಹದಿಂದಾಗಿ ವ್ಯಾಪಾರ, ವ್ಯವಹಾರಕ್ಕೆ ಸಂಬಂಧಿಸಿದಂತೆ ದೊಡ್ಡ ಅವಕಾಶಗಳ ಪ್ರಾಪ್ತಿಯಾಗಲಿದೆ. ಇದರಿಂದಾಗಿ ಭಾರೀ ಧನ ಲಾಭವನ್ನು ಹೊಂದುವಿರಿ.
ಕುಟುಂಬ ವಿಚಾರಗಳಿಗೆ ಸಂಬಂಧಿಸಿದಂತೆ ಸಂತೋಷಮಯವಾದ ವಾತಾವರಣ ನಿರ್ಮಾಣಗೊಳ್ಳುವುದು ಮತ್ತು ಸಮಾಜದಲ್ಲಿ ನಿಮ್ಮ ಗೌರವ, ಖ್ಯಾತಿ ಹಾಗೂ ಪ್ರತಿಷ್ಠೆ ವೃದ್ಧಿಯಾಗುವುದು. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಎಲ್ಲರೂ ಹೊಗಳುವರು. ಹಾಗೆ ವ್ಯಾಪಾರ, ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಯಾಣಿಸುವ ಯೋಗ ದೊರಕುವುದು. ಇದರಿಂದಾಗಿ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ನಿಮ್ಮ ಅಪೂರ್ಣ ಕೆಲಸಗಳನ್ನು ಪೂರ್ಣಗೊಳಿಸುವ ಅವಕಾಶ ಲಭಿಸುವುದು. ಜತಗೆ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಪಡೆಯುವ ಪ್ರಬಲವಾದ ಯೋಗ ನಿರ್ಮಾಣಗೊಳ್ಳುವುದು.
ಮೀನ ರಾಶಿಗೆ ಸೇರಿದ ಜನರಿಗೆ ಇಂದು ಶುಭ ಯೋಗಗಳ ನಿರ್ಮಾಣವು ಹೊಸ ಅವಕಾಶಗಳನ್ನು ಸೃಷ್ಟಿಸಲಿದ್ದು, ಪ್ರಭಾವಶಾಲಿಯಾಗಿರುವಂತೆ ಮಾಡಲಿದೆ. ಈ ಸಂದರ್ಭದಲ್ಲಿ ವ್ಯಾಪಾರ, ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಗತಿಯನ್ನು ಗಳಿಸುವ ಯೋಗ ನಿರ್ಮಾಣಗೊಳ್ಳುವುದು. ಇದರಿಂದಾಗಿ ಸಾಕಷ್ಟು ಆದಾಯವನ್ನು ಕೂಡ ಗಳಿಸುವಿರಿ ಮತ್ತು ಹೊಸ ಅವಕಾಶಗಳ ಪ್ರಾಪ್ತಿಯಾಗಲಿದೆ. ಹಣಕಾಸಿಗೆ ಸಂಬಂಧಿಸಿದಂತೆ ಮೀನ ರಾಶಿಗೆ ಸೇರಿದ ಜನರು ಉತ್ತಮ ಸಮಯವನ್ನು ಹೊಂದುವರು.
ಜತೆಗೆ ನಿಮ್ಮ ಕಳೆದುಹೋದ ಹಣವನ್ನು ವಾಪಸ್ಸು ಪಡೆಯುವ ಸಂಭವವಿದೆ. ಇದರೊಂದಿಗೆ ನಿಮ್ಮ ಸಂಬಂಧದಲ್ಲಿ ಇನ್ನಷ್ಟು ಮಾಧುರ್ಯವನ್ನು ಹೊಂದುವಿರಿ. ಜತೆಗೆ ಕುಟುಂಬ ಜೀವನದಲ್ಲಿ ಉತ್ತಮ ಸಾಮರಸ್ಯ ನಿರ್ಮಾಣಗೊಳ್ಳುವುದು. ಹಾಗೆ ಮಾನಸಿಕವಾಗಿ ಈ ಅವಧಿಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಹೊಂದುವುದರಿಂದಾಗಿ ಹೊಸ ಕೆಲಸಗಳನ್ನು ಶುರು ಮಾಡಲು ಉಪಯುಕ್ತವಾದ ಸಮಯ ದೊರಕಲಿದೆ.
Vastu Tips: ಮನೆಯ ಗೋಡೆಯ ಮೇಲೆ ಈ ಪೇಂಟಿಂಗ್ ಇದ್ದರೆ ಅದೃಷ್ಟ ನಿಮ್ಮದಾಗಬಹುದು!