Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Reality check ಸಾರಿಗೆ ಸಚಿವರ ಜತೆಯೂ ಕಂಡಕ್ಟರ್ ದರ್ಪ! ಮಿನಿಸ್ಟರ್‌ಗೂ ಬಿಎಂಟಿಸಿ ಸಿಬ್ಬಂದಿಯ ಅಸಲಿ ದರ್ಶನ
ಕರ್ನಾಟಕಪ್ರಮುಖವೈರಲ್

Reality check ಸಾರಿಗೆ ಸಚಿವರ ಜತೆಯೂ ಕಂಡಕ್ಟರ್ ದರ್ಪ! ಮಿನಿಸ್ಟರ್‌ಗೂ ಬಿಎಂಟಿಸಿ ಸಿಬ್ಬಂದಿಯ ಅಸಲಿ ದರ್ಶನ

Share
2 Min Read
SHARE

newsics.com | ನ್ಯೂಸಿಕ್ಸ್

ಬೆಂಗಳೂರು: ರಾಜ್ಯ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಶನಿವಾರ ರಾತ್ರಿ ಸಾರ್ವಜನಿಕರಂತೆ ಬಿಎಂಟಿಸಿ ಬಸ್‌ಗಳಲ್ಲಿ ದಿಢೀರ್ ಪ್ರಯಾಣ ಕೈಗೊಳ್ಳುವ ಮೂಲಕ ಬಿಗ್ ರಿಯಾಲಿಟಿ ಚೆಕ್ ನಡೆಸಿದ್ದಾರೆ.

ಮಾಸ್ಕ್ ಧರಿಸಿ ಯಾರಿಗೂ ಗುರುತು ಸಿಗದಂತೆ ಸಂಚರಿಸಿದ ಸಚಿವರಿಗೆ ಬಿಎಂಟಿಸಿ ಸಿಬ್ಬಂದಿಯ ಅಸಲಿ ದರ್ಶನವಾಗಿದ್ದು, ನಿಯಮ ಉಲ್ಲಂಘಿಸಿದ ಚಾಲಕ ಹಾಗೂ ನಿರ್ವಾಹಕರ ವಿರುದ್ಧ ತಕ್ಷಣದ ಕ್ರಮಕ್ಕೆ ಸೂಚಿಸಿದ್ದಾರೆ.

ರಾತ್ರಿ 7.10 ರಿಂದ 9.10 ರವರೆಗೆ ಕೇವಲ 2 ಗಂಟೆಗಳ ಅವಧಿಯಲ್ಲಿ ಜಯಮಹಲ್, ಆರ್.ಟಿ. ನಗರ, ಹೆಬ್ಬಾಳ, ಮಾನ್ಯತಾ ಟೆಕ್ ಪಾರ್ಕ್, ನಾಗವಾರ, ಹೆಣ್ಣೂರು ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಸಚಿವರು ಒಟ್ಟು 10 ಕ್ಕೂ ಹೆಚ್ಚು ಬಸ್‌ಗಳಲ್ಲಿ ಪ್ರಯಾಣಿಸಿ ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿದರು. ಮಾಸ್ಕ್ ಧರಿಸಿದ್ದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರಿಗಾಗಲಿ, ಚಾಲಕ-ಕಂಡಕ್ಟರ್‌ಗಳಿಗಾಗಲಿ ಇವರು ಸಚಿವರು ಎಂಬುದು ಪತ್ತೆಯಾಗಲಿಲ್ಲ.

100 ರೂ. ನೋಟು ನೀಡಿದ್ದಕ್ಕೆ ಸಚಿವರನ್ನೇ ಬಸ್‌ನಿಂದ ಇಳಿಸಿದ ನಿರ್ವಾಹಕ!

ಹೆಬ್ಬಾಳದಿಂದ ನಾಗಶೆಟ್ಟಿಹಳ್ಳಿಗೆ ಹೋಗುವ ಬಸ್ ಹತ್ತಿದ ಸಚಿವರು ಎರಡು ಟಿಕೆಟ್ ಕೇಳಿ 100 ರೂಪಾಯಿ ನೋಟು ನೀಡಿದ್ದಾರೆ. ಈ ವೇಳೆ ಚಿಲ್ಲರೆ ನೀಡುವಂತೆ ಕಂಡಕ್ಟರ್ ಕೇಳಿದ್ದು, ಸಚಿವರು ಚಿಲ್ಲರೆ ಇಲ್ಲ ಎಂದಿದ್ದಾರೆ. ತಕ್ಷಣವೇ ತನ್ನ ಬ್ಯಾಗ್ ತೋರಿಸಿ ನನ್ನ ಬಳಿಯೂ ಚಿಲ್ಲರೆ ಇಲ್ಲ ಎಂದು ಹೇಳಿದ ಕಂಡಕ್ಟರ್, “ಚಿಲ್ಲರೆ ಇಲ್ಲದಿದ್ದರೆ ಬಸ್‌ನಿಂದ ಕೆಳಗೆ ಇಳಿಯಿರಿ” ಎಂದು ಸಚಿವರಿಗೇ ಕಟುವಾಗಿ ಹೇಳಿದ್ದಾರೆ. ಇದಕ್ಕೆ ಸಚಿವರು ಯಾವುದೇ ಮರುಮಾತನಾಡದೆ ಸುಮ್ಮನೆ ಬಸ್‌ನಿಂದ ಕೆಳಗಿಳಿದಿದ್ದಾರೆ.

ಜಯಮಹಲ್‌ನಿಂದ ಸಾಗುತ್ತಿದ್ದ ಬಿಎಂಟಿಸಿ ಬಸ್ (ಕೆಎ 57 ಎಫ್ 3372) ಫನ್ ವರ್ಲ್ಡ್ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಕೈ ತೋರಿಸಿದರೂ ನಿಲ್ಲಿಸದೆ ಮುನ್ನಡೆದಿದೆ. ಈ ಬಸ್‌ನ ಹಿಂದಿನ ಬಸ್‌ನಲ್ಲೇ ಪ್ರಯಾಣಿಸುತ್ತಿದ್ದ ಸಚಿವರು ಇದನ್ನು ಕಣ್ಣಾರೆ ಕಂಡು, ಸಾರ್ವಜನಿಕರಿಗೆ ತೊಂದರೆ ನೀಡಿದ ಸದರಿ ಬಸ್‌ನ ನಿರ್ವಾಹಕ ದಯಾನಂದ್ ಮತ್ತು ಚಾಲಕ ಮುಸ್ತಾಕ್ ಅವರನ್ನು ತಕ್ಷಣವೇ ಅಮಾನತುಗೊಳಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಸಿಲಿಕಾನ್ ಸಿಟಿಯ ಬಿಎಂಟಿಸಿ (BMTC) ಬಸ್‌ಗಳಲ್ಲಿ ಸಾರ್ವಜನಿಕರಿಗೆ ಎದುರಾಗುತ್ತಿರುವ ಸಮಸ್ಯೆಗಳು ಹಾಗೂ ನಿರ್ವಾಹಕರ ಕಳ್ಳಾಟವನ್ನು ಬಯಲಿಗೆಳೆಯಲು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಮಾಸ್ಕ್ ಧರಿಸಿ ದಿಢೀರ್ ‘ಸ್ವಯಂ ರಿಯಾಲಿಟಿ ಚೆಕ್’ ನಡೆಸಿದ್ದಾರೆ.

ಸಚಿವರ ಈ ದಿಢೀರ್ ಭೇಟಿಯಿಂದಾಗಿ ಬಿಎಂಟಿಸಿ ಇಲಾಖೆಯ ಹಲವು ಅಕ್ರಮಗಳು ಮತ್ತು ಸಾರ್ವಜನಿಕರ ಮೇಲಿನ ದಬ್ಬಾಳಿಕೆ ರಸ್ತೆಯಲ್ಲೇ ಸಾಬೀತಾಗಿದೆ. ಬೆಂಗಳೂರಿನ ಭೂಪಸಂದ್ರದಿಂದ ಹೆಬ್ಬಾಳಕ್ಕೆ ತೆರಳುವ ಬಿಎಂಟಿಸಿ ಬಸ್‌ಗೆ ಸಚಿವ ಬೈರತಿ ಸುರೇಶ್ ಅವರು ಸಾಮಾನ್ಯ ಪ್ರಯಾಣಿಕನಂತೆ ಮಾಸ್ಕ್ ಧರಿಸಿ ಹತ್ತಿದ್ದರು.

BP, sugar medicine is cheap ಬಿಪಿ, ಶುಗರ್ ಸೇರಿ 39 ಅಗತ್ಯ ಔಷಧಗಳ ಬೆಲೆ ಇಳಿಕೆ

TAGGED:Conductor who showed arrogance to the Minister of Transport
Share This Article
Facebook Twitter Copy Link Print
Previous Article Janaki is a millionaire ಗಾನಕೋಗಿಲೆ ಜಾನಕಿಯಮ್ಮ ಬಹು ಕೋಟಿ ಒಡತಿ!
Next Article Delivery boy arrested ಒಂಟಿ‌ ಮಹಿಳೆ ಮನೆಗೆ ನುಗ್ಗಿ ಖಾಸಗಿ ಅಂಗ ಪ್ರದರ್ಶಿಸಿದ್ದ ಡೆಲಿವರಿ ಬಾಯ್ ಬಂಧನ, ವಿಡಿಯೋ ನೋಡಿ

Popular Posts

KSRTC ಬಸ್‌ನಲ್ಲಿ ಯುವತಿ ಮೈಮುಟ್ಟಿದ ಕಾಮುಕನಿಗೆ ಧರ್ಮದೇಟು, ವಿಡಿಯೋ ನೋಡಿ

2 Min Read

Viral news ಒಂದೇ ಒಂದು ಪಾನಿಪುರಿ, 9 ಆರೋಪಿಗಳು, 12 ವರ್ಷಗಳ ಕೇಸ್! ಕೊನೆಗೂ ಸಿಕ್ತು ಕ್ಲೈಮ್ಯಾಕ್ಸ್ ಟ್ವಿಸ್ಟ್!

1 Min Read

Legendary nightingale Janaki ಪಂಚಭೂತಗಳಲ್ಲಿ ಗಾನಕೋಗಿಲೆ ಜೇನುಕಂಠದ ಜಾನಕಿ ಲೀನ

2 Min Read

Health- Fatty Liver ಫ್ಯಾಟಿ ಲಿವರ್ ಸಮಸ್ಯೆ ನಿವಾರಣೆಗೆ ಹೊಸ ಔಷಧ ಸಂಶೋಧನೆ: ತಜ್ಞರು ಹೇಳಿದ್ದೇನು

2 Min Read

You Might Also Like

ಕರ್ನಾಟಕಪ್ರಮುಖವೈರಲ್

Delivery boy arrested ಒಂಟಿ‌ ಮಹಿಳೆ ಮನೆಗೆ ನುಗ್ಗಿ ಖಾಸಗಿ ಅಂಗ ಪ್ರದರ್ಶಿಸಿದ್ದ ಡೆಲಿವರಿ ಬಾಯ್ ಬಂಧನ, ವಿಡಿಯೋ ನೋಡಿ

2 Min Read
ಕರ್ನಾಟಕದೇಶಪ್ರಮುಖಮನರಂಜನೆ

Janaki is a millionaire ಗಾನಕೋಗಿಲೆ ಜಾನಕಿಯಮ್ಮ ಬಹು ಕೋಟಿ ಒಡತಿ!

2 Min Read
ಕರ್ನಾಟಕಆರೋಗ್ಯದೇಶಪ್ರಮುಖ

BP, sugar medicine is cheap ಬಿಪಿ, ಶುಗರ್ ಸೇರಿ 39 ಅಗತ್ಯ ಔಷಧಗಳ ಬೆಲೆ ಇಳಿಕೆ

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 12-07-2026, ಭಾನುವಾರ

5 Min Read

Social Networks

Facebook-f Instagram Twitter
Welcome Back!

Sign in to your account

Lost your password?