newsics.com
ರಾಂಚಿ: ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ನಾಯಕ ಅಮಿತ್ ಶಾ ಅವರನ್ನು ಭೇಟಿಯಾದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಚಂಪೈ ಸೋರೆನ್ ಜೆಎಂಎಂಗೆ ರಾಜೀನಾಮೆ ನೀಡಿದ್ದಾರೆ. ಇನ್ನು ಆಗಸ್ಟ್ 30ರಂದು ಬಿಜೆಪಿಯನ್ನು ಸೇರಲಿದ್ದಾರೆ. ಜಾರ್ಖಂಡ್‌ನ ಆದಿವಾಸಿಗಳು, ಮೂಲನಿವಾಸಿಗಳು, ದಲಿತರು, ಹಿಂದುಳಿದವರು ಮತ್ತು ಸಾಮಾನ್ಯ ಜನರ ಸಮಸ್ಯೆಗಳ ಅಭಿವೃದ್ಧಿಗೆ ನನ್ನ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೋರೆನ್ ಅವರು ಪಕ್ಷದ ಈಗಿನ ಕಾರ್ಯವೈಖರಿ ಮತ್ತು ನೀತಿಗಳಿಂದ ನೊಂದಿರುವ ಕಾರಣ ನಾನು ಇಂತಹ ಕ್ರಮಕ್ಕೆ ನಿರ್ಧರಿಸಿದೆ ಎಂದು ಹೇಳಿದ್ದಾರೆ. ಪಕ್ಷದ ವರಿಷ್ಠ ಶಿಬು ಸೊರೆನ್‌ಗೆ ಬರೆದ ರಾಜೀನಾಮೆ ಪತ್ರದಲ್ಲಿ ಈ ಬಗ್ಗೆ ಉಲ್ಲೇಖಿಸಿರುವ ಅವರು, ಜೆಎಂಎಂ ಪಕ್ಷದ ಸ್ಥಿತಿಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಶಿಬು ಸೊರೆನ್ ಅವರ ಮಾರ್ಗದರ್ಶನದಲ್ಲಿ ನಾನು ಮತ್ತು ಇತರ ಪಕ್ಷದ ಕಾರ್ಯಕರ್ತರು ಹೋರಾಡಿದ ಆದರ್ಶಗಳಿಂದ ಜೆಎಂಎಂ ದೂರ ಸರಿದಿದೆ ಎಂದು ಹೇಳಿದ್ದಾರೆ.