Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health ಬಿಸಿ ಚಹಾ ಜೊತೆ ಸಿಗರೇಟ್ ಸೇದುವ ಅಭ್ಯಾಸವಿದೆಯೇ? ಇದು ಸಾವಿಗೆ ನೀವೇ ಇಡುವ ಸೈಲೆಂಟ್ ಆಹ್ವಾನ!
ಪ್ರಮುಖಆರೋಗ್ಯ

Health ಬಿಸಿ ಚಹಾ ಜೊತೆ ಸಿಗರೇಟ್ ಸೇದುವ ಅಭ್ಯಾಸವಿದೆಯೇ? ಇದು ಸಾವಿಗೆ ನೀವೇ ಇಡುವ ಸೈಲೆಂಟ್ ಆಹ್ವಾನ!

Share
2 Min Read
SHARE
newsics.com| ನ್ಯೂಸಿಕ್ಸ್

ಬೆಳಿಗ್ಗೆ ಎದ್ದ ಕೂಡಲೇ ಕೈಯಲ್ಲೊಂದು ಕಪ್ ಬಿಸಿ ಚಹಾ ಮತ್ತು ಮತ್ತೊಂದು ಕೈಯಲ್ಲಿ ಹೊಗೆಯಾಡುವ ಸಿಗರೇಟ್ ಹಿಡಿಯುವುದು ಇಂದಿನ ಯುವ ಪೀಳಿಗೆ ಹಾಗೂ ಅನೇಕರ ದೈನಂದಿನ ಫ್ಯಾಷನ್ ಮತ್ತು ಹವ್ಯಾಸವಾಗಿಬಿಟ್ಟಿದೆ. ‘ಟೀ ಜೊತೆ ಸಿಗರೇಟ್ ಇಲ್ಲದಿದ್ದರೆ ಕಿಕ್ ಸಿಗಲ್ಲ’ ಎಂದು ಯೋಚಿಸುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಕ್ಷಣಿಕಕ್ಕೆ ಮಾತ್ರ ಆನಂದ ನೀಡುವ ಈ ವಿಷಕಾರಿ ಕಾಂಬಿನೇಷನ್ ನಿಮ್ಮ ದೇಹದ ಅಂಗಾಂಗಗಳನ್ನು ಹೇಗೆ ಹಾಳುಮಾಡುತ್ತದೆ ಎಂಬ ಶಾಕಿಂಗ್ ಮಾಹಿತಿ ಸಂಶೋಧನೆಗಳಿಂದ ಬಹಿರಂಗವಾಗಿದೆ.

Contents
1. ಅನ್ನನಾಳ ಹಾಗೂ ಬಾಯಿ ಕ್ಯಾನ್ಸರ್‌ಗೆ ನೇರ ದಾರಿ2. ಹಾರ್ಟ್ ಅಟ್ಯಾಕ್ ಭೀತಿ: ಹೃದಯದ ಮೇಲೆ ಡಬಲ್ ಪ್ರೆಶರ್3. ರಕ್ತನಾಳಗಳ ಸಂಕೋಚನ, ಆಮ್ಲಜನಕದ ಕೊರತೆ4. ಗ್ಯಾಸ್ಟ್ರಿಕ್ ಅಲ್ಸರ್ ಮತ್ತು ಜೀರ್ಣಾಂಗವ್ಯೂಹದ ನಾಶ5. ರಕ್ತಹೀನತೆ ಕೊರತೆ6. ಶ್ವಾಸಕೋಶ ಸಂಪೂರ್ಣ ಬ್ಲಾಕ್

ಈ ಮಾರಕ ವ್ಯಸನದಿಂದ ಉಂಟಾಗುವ ಪ್ರಮುಖ 6 ಅಡ್ಡಪರಿಣಾಮಗಳ ವಿವರ ಇಲ್ಲಿದೆ

1. ಅನ್ನನಾಳ ಹಾಗೂ ಬಾಯಿ ಕ್ಯಾನ್ಸರ್‌ಗೆ ನೇರ ದಾರಿ

ಕುದಿಯುವ ಬಿಸಿ ಚಹಾವನ್ನು ಕುಡಿದಾಗ ಅದು ಬಾಯಿ, ಗಂಟಲು ಮತ್ತು ಅನ್ನನಾಳದ ಸೂಕ್ಷ್ಮ ಒಳಪದರವನ್ನು ಸುಡುತ್ತದೆ. ಇತ್ತ ಸಿಗರೇಟ್‌ನಲ್ಲಿರುವ ನಿಕೋಟಿನ್ ಸೇರಿದಂತೆ ಕರಗದಿರುವ ರಾಸಾಯನಿಕಗಳು ಈಗಾಗಲೇ ಅಲ್ಲಿನ ಕೋಶಗಳನ್ನು ದುರ್ಬಲಗೊಳಿಸಿರುತ್ತವೆ. ಈ ಎರಡೂ ಒಟ್ಟಿಗೆ ಸೇರಿದಾಗ ಜೀವಕೋಶಗಳು ದಕ್ಕೆಗೊಳಗಾಗಿ ಕ್ಯಾನ್ಸರ್ ಗಡ್ಡೆಗಳು ಬೆಳೆಯುವ ಅಪಾಯ ದುಪ್ಪಟ್ಟಾಗುತ್ತದೆ.

2. ಹಾರ್ಟ್ ಅಟ್ಯಾಕ್ ಭೀತಿ: ಹೃದಯದ ಮೇಲೆ ಡಬಲ್ ಪ್ರೆಶರ್

ಚಹಾದಲ್ಲಿರುವ ‘ಕೆಫೀನ್’ ಅಂಶವು ನರಗಳನ್ನು ಉತ್ತೇಜಿಸಿ ರಕ್ತದೊತ್ತಡವನ್ನು ಹೆಚ್ಚಿಸಿದರೆ, ಸಿಗರೇಟ್‌ನ ‘ನಿಕೋಟಿನ್’ ಹೃದಯದ ಬಡಿತವನ್ನು ಅಸಹಜವಾಗಿ ಏರಿಸುತ್ತದೆ. ಈ ಪ್ರಭಾವದಿಂದ ಹೃದಯವು ಸಾಮಾನ್ಯಕ್ಕಿಂತ ಎರಡು ಪಟ್ಟು ವೇಗವಾಗಿ ರಕ್ತ ಪಂಪ್ ಮಾಡಬೇಕಾಗುತ್ತದೆ. ಇದು ದಿಢೀರ್ ಹೃದಯಾಘಾತ (Heart Attack) ಮತ್ತು ಪಾರ್ಶ್ವವಾಯು (Stroke) ಸಂಭವಿಸಲು ಪ್ರಮುಖ ಕಾರಣವಾಗುತ್ತದೆ.

3. ರಕ್ತನಾಳಗಳ ಸಂಕೋಚನ, ಆಮ್ಲಜನಕದ ಕೊರತೆ

ಸಿಗರೇಟ್‌ನಿಂದ ಹೊರಬರುವ ವಿಷಕಾರಿ ಹೊಗೆಯು ದೇಹದ ರಕ್ತನಾಳಗಳನ್ನು ಕಿರಿದಾಗುವಂತೆ (ಸಂಕುಚಿತ) ಮಾಡುತ್ತದೆ. ಇದರಿಂದ ಮೆದುಳು, ಕೈ ಮತ್ತು ಕಾಲುಗಳಿಗೆ ರಕ್ತ ಪೂರೈಕೆ ಕುಂಠಿತಗೊಂಡು, ದೇಹದ ಪ್ರತಿಯೊಂದು ಭಾಗಕ್ಕೂ ತಲುಪಬೇಕಾದ ಆಮ್ಲಜನಕ ಮತ್ತು ಅಗತ್ಯ ಪೋಷಕಾಂಶಗಳು ಸಿಗದೆ ಅಂಗಾಂಗಗಳು ನಿಷ್ಕ್ರಿಯಗೊಳ್ಳತೊಡಗುತ್ತವೆ.

4. ಗ್ಯಾಸ್ಟ್ರಿಕ್ ಅಲ್ಸರ್ ಮತ್ತು ಜೀರ್ಣಾಂಗವ್ಯೂಹದ ನಾಶ

ಖಾಲಿ ಹೊಟ್ಟೆಯಲ್ಲಿ ಚಹಾ ಮತ್ತು ಸಿಗರೇಟ್ ಒಟ್ಟಿಗೆ ಸೇವಿಸುವುದರಿಂದ ಜಠರದಲ್ಲಿ ಆಮ್ಲದ (Acid) ಉತ್ಪತ್ತಿ ತೀವ್ರಗೊಳ್ಳುತ್ತದೆ. ಪರಿಣಾಮವಾಗಿ ನಿರಂತರ ಎದೆಯುರಿ, ಹುಳಿ ತೇಗು, ಗ್ಯಾಸ್ಟ್ರಿಕ್ ಸಮಸ್ಯೆ ಕಾಡಲಾರಂಭಿಸಿ, ಮುಂದುವರಿದು ಅದು ಹೊಟ್ಟೆಯ ಒಳಗೆ ಗಂಭೀರವಾದ ‘ಗ್ಯಾಸ್ಟ್ರಿಕ್ ಅಲ್ಸರ್’ (ಹುಣ್ಣು) ಸೃಷ್ಟಿ ಮಾಡುತ್ತದೆ.

5. ರಕ್ತಹೀನತೆ ಕೊರತೆ

ಅತಿಯಾಗಿ ಟೀ ಕುಡಿಯುವುದರಿಂದ ದೇಹವು ಆಹಾರದಲ್ಲಿನ ಕಬ್ಬಿಣದ ಅಂಶವನ್ನು (Iron) ಹೀರಿಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಇತ್ತ ಸಿಗರೇಟ್ ಜೀವಸತ್ವಗಳನ್ನು ನಾಶಪಡಿಸುತ್ತದೆ. ಇದು ರಕ್ತಹೀನತೆಗೆ (Anemia) ದಾರಿ ಮಾಡಿಕೊಡುವುದಲ್ಲದೆ, ದೇಹದ ರೋಗನಿರೋಧಕ ಶಕ್ತಿಯನ್ನು ಸಂಪೂರ್ಣವಾಗಿ ಕುಗ್ಗಿಸಿ ಸಣ್ಣಪುಟ್ಟ ಸೋಂಕುಗಳಿಗೂ ದೇಹ ಬೇಗನೆ ತುತ್ತಾಗುವಂತೆ ಮಾಡುತ್ತದೆ.

6. ಶ್ವಾಸಕೋಶ ಸಂಪೂರ್ಣ ಬ್ಲಾಕ್

ಧೂಮಪಾನವು ಶ್ವಾಸಕೋಶವನ್ನು ನೇರವಾಗಿ ಹಾನಿಗೊಳಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಚಹಾದ ಬಿಸಿಯೊಂದಿಗೆ ಸಿಗರೇಟ್ ಸೇದಿದಾಗ ಉಸಿರಾಟದ ನಳಿಕೆಗಳು ತೀವ್ರವಾಗಿ ಹಾನಿಗೊಳಗಾಗುತ್ತವೆ. ಇದು ಕ್ರಾನಿಕ್ ಆಬ್ಸ್ಟ್ರಕ್ಟಿಪ್ ಪಲ್ಮನರಿ ಡಿಸೀಸ್ (COPD) ಹಾಗೂ ಉಬ್ಬಸ, ದೀರ್ಘಕಾಲದ ಕೆಮ್ಮಿನಂತಹ ಅಸ್ತಮಾ ತೊಂದರೆಗಳನ್ನು ಉಲ್ಬಣಗೊಳಿಸುತ್ತದೆ.

ನೆನಪಿಡಿ, ಬದುಕು ಅತ್ಯಂತ ಅಮೂಲ್ಯವಾದದ್ದು. ಕೇವಲ ಐದು ನಿಮಿಷಗಳ ಮಜಾವನ್ನು ನೀಡುವ ಈ ಅಪಾಯಕಾರಿ ಹವ್ಯಾಸ ನಿಮ್ಮ ಆಯಸ್ಸನ್ನೇ ಕಡಿಮೆ ಮಾಡಬಹುದು. ಆರೋಗ್ಯಕರ ಜೀವನಕ್ಕಾಗಿ ಇಂದೇ ಈ ಮಾರಕ ಅಭ್ಯಾಸವನ್ನು ಬಿಟ್ಟು ಬಿಡಿ.

 

SIR from Today ರಾಜ್ಯದಲ್ಲಿ ಇಂದಿನಿಂದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ: ಮನೆ ಮನೆ ಪರೀಶೀಲನೆ, ಜನರೇನು ಮಾಡಬೇಕು?

TAGGED:#health #cigarettes #tea #lifestyle
Share This Article
Facebook Twitter Copy Link Print
Previous Article Traffic Fine ಟ್ರಾಫಿಕ್ ಫೈನ್ ಅರ್ಧಕ್ಕರ್ಧ ಕಟ್: ಸವಾರರೇ ಜುಲೈ 10ರ ಒಳಗಡೆ ಈ ಬಂಪರ್ ಆಫರ್ ಮಿಸ್ ಮಾಡ್ಕೋಬೇಡಿ!
Next Article School Students ಶಾಲಾ ಮಕ್ಕಳ ಮೊಬೈಲ್ ಗೀಳಿಗೆ ಬೀಳಲಿದೆ ಬ್ರೇಕ್, ರಾಜ್ಯಾದ್ಯಂತ ಶೀಘ್ರದಲ್ಲೇ ‘ಮೊಬೈಲ್ ಬಿಡಿ, ಪುಸ್ತಕ ಹಿಡಿ’ ಮಹಾ ಅಭಿಯಾನ ಆರಂಭ!

Popular Posts

ಬಿಜೆಪಿಯಲ್ಲಿ ‘ಆಡಿಯೋ’ ಬಾಂಬ್: ಬಿ. ವೈ. ವಿಜಯೇಂದ್ರ ಕೆಳಗಿಳಿಸಲು ಪ್ರಹ್ಲಾದ್ ಜೋಷಿ, ಬಿ.ಎಲ್. ಸಂತೋಷ್ ಗೇಮ್? ಸದ್ದು ಮಾಡ್ತಿದೆ ವೈರಲ್ ಕ್ಲಿಪ್!

1 Min Read

Chikkaballapura ಹೋಂಸ್ಟೇನಲ್ಲಿ ಯುವತಿ ಸಾವು ಪ್ರಕರಣ – ಮೃತ ಸುರಭಿಯ ಗ್ರಾಟಿಟ್ಯೂಡ್ ಜರ್ನಲ್ ಬಹಿರಂಗ

1 Min Read

Ketan agarwal ಕೇತನ್​ ಸಾವಿಗೆ ಅಪಹಾಸ್ಯ:​ ವೈದ್ಯೆಯ ಲೈಸೆನ್ಸ್ 5 ವರ್ಷ ಸಸ್ಪೆಂಡ್!

1 Min Read

Ksrtc ರಾಜ್ಯದಲ್ಲಿ ಮತ್ತೆ ಸಾರಿಗೆ ಬಸ್ ಟಿಕೆಟ್ ದರ ಏರಿಕೆ??

1 Min Read

You Might Also Like

ಕರ್ನಾಟಕದೇಶಪ್ರಮುಖ

Mumbai ಶಾಲಾ ಬಸ್‌ ಮೇಲೆ ಬಿದ್ದ ಮರ – ಓರ್ವ ವಿದ್ಯಾರ್ಥಿ ಸಾವು, 10 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

1 Min Read
Sportsಕರ್ನಾಟಕದೇಶಪ್ರಮುಖ

Hardik pandya ಮುಂಬೈ ಬಿಟ್ಟು ಬೆಂಗಳೂರಿಗೆ ಶಿಫ್ಟ್ ಆದ ಹಾರ್ದಿಕ್ ಪಾಂಡ್ಯ

1 Min Read
ದೇಶಪ್ರಮುಖವಿದೇಶ

AI ನಂಬಿ‌ ಕೆಟ್ಟ ಫೋರ್ಡ್! 350 ಅನುಭವಿ ಟೆಕ್ಕಿಗಳ ಮರುನೇಮಕ

2 Min Read
ಕರ್ನಾಟಕದೇಶಪ್ರಮುಖವಿದೇಶ

Whatsapp Username ವಾಟ್ಸ್ಯಾಪ್‌ನಲ್ಲಿ ಯೂಸರ್‌ನೇಮ್ ಫೀಚರ್: ನಿಮ್ಮ ಹೆಸರು ಈಗಲೇ ಕಾಯ್ದಿರಿಸಿಕೊಳ್ಳಿ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?