newsics.com / ನ್ಯೂಸಿಕ್ಸ್
ಬೆಂಗಳೂರು: ಮಕ್ಕಳ ಆರೋಗ್ಯ, ಭದ್ರತೆ ಮತ್ತು ಶಾಲಾ ಶಿಸ್ತು ಕಾಪಾಡುವ ಉದ್ದೇಶದಿಂದ ಬೆಂಗಳೂರಿನ ಹಲವು ಪ್ರತಿಷ್ಠಿತ ಶಾಲೆಗಳು ಆನ್ಲೈನ್ ಆಹಾರ ವಿತರಣಾ ಸೇವೆಗಳಿಗೆ ಬ್ರೇಕ್ ಹಾಕಿವೆ.
ಸ್ವಿಗ್ಗಿ, ಜೊಮ್ಯಾಟೊ ಸೇರಿದಂತೆ ವಿವಿಧ ಫುಡ್ ಡೆಲಿವರಿ ಆಯಪ್ಗಳ ಮೂಲಕ ಶಾಲಾ ಆವರಣಕ್ಕೆ ಆಹಾರ ತರಿಸುವುದನ್ನು ನಿಷೇಧಿಸುವ ನಿರ್ಧಾರಕ್ಕೆ ಶಾಲಾ ಆಡಳಿತ ಮಂಡಳಿಗಳು ಮುಂದಾಗಿವೆ.
ಶಾಲೆಗಳ ಪ್ರಕಾರ, ಹೊರಗಿನಿಂದ ಬರುವ ಜಂಕ್ ಫುಡ್ಗಳಲ್ಲಿ ಹೆಚ್ಚಾಗಿ ಎಣ್ಣೆ, ಉಪ್ಪು ಮತ್ತು ಸಂರಕ್ಷಕ ಪದಾರ್ಥಗಳಿರುತ್ತವೆ. ಇಂತಹ ಆಹಾರ ಮಕ್ಕಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಕೆಲವರು ಮನೆಯ ಊಟ ತರುತ್ತಿದ್ದರೆ, ಮತ್ತೊಬ್ಬರು ಪಿಜ್ಜಾ ಅಥವಾ ಬರ್ಗರ್ಗಳನ್ನು ಆರ್ಡರ್ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಅನಗತ್ಯ ಆಕರ್ಷಣೆ ಹಾಗೂ ಅಸಮಾನತೆಯ ಭಾವನೆ ಮೂಡಬಹುದು ಎಂಬ ಅಭಿಪ್ರಾಯವನ್ನು ಶಾಲೆಗಳು ವ್ಯಕ್ತಪಡಿಸಿವೆ.
ಅಪರಿಚಿತ ಡೆಲಿವರಿ ಸಿಬ್ಬಂದಿ ನಿರಂತರವಾಗಿ ಶಾಲಾ ಆವರಣಕ್ಕೆ ಪ್ರವೇಶಿಸುವುದು ಭದ್ರತಾ ದೃಷ್ಟಿಯಿಂದ ಸೂಕ್ತವಲ್ಲ ಎನ್ನಲಾಗಿದೆ. ಜೊತೆಗೆ ಪಾರ್ಸೆಲ್ ವಿತರಣೆ ಶಾಲೆಯ ದೈನಂದಿನ ಕಾರ್ಯಚಟುವಟಿಕೆಗೂ ಅಡ್ಡಿಯಾಗುತ್ತಿದೆ.
ಪೋಷಕರು ಅನಿವಾರ್ಯ ಪರಿಸ್ಥಿತಿಯಲ್ಲಿ ಹೊರಗಿನ ಆಹಾರ ತರಿಸಿದರೂ, ಅದನ್ನು ಸಾಮಾನ್ಯ ಲಂಚ್ ಬಾಕ್ಸ್ನಲ್ಲಿ ಪ್ಯಾಕ್ ಮಾಡಿ ಕಳುಹಿಸುವಂತೆ ಸೂಚಿಸಲಾಗಿದೆ. ವಿದ್ಯಾರ್ಥಿಗಳಿಗೆ ಮಾದರಿಯಾಗುವ ಉದ್ದೇಶದಿಂದ ಶಿಕ್ಷಕರು ಮತ್ತು ಸಿಬ್ಬಂದಿಗೂ ಆನ್ಲೈನ್ ಆಹಾರ ಆರ್ಡರ್ ಮಾಡುವುದಕ್ಕೆ ನಿರ್ಬಂಧ ಹೇರಲಾಗಿದೆ.
Person dies of swine flu ರಾಜ್ಯದಲ್ಲಿ ಹಂದಿ ಜ್ವರಕ್ಕೆ ಓರ್ವ ಬಲಿ: ಯಲ್ಲಾಪುರದಲ್ಲಿ ತೀವ್ರ ಆತಂಕ
NEET PM ಏರ್ಪೋರ್ಟ್ನಲ್ಲೇ 45 ನಿಮಿಷ ಕಾದು ನೀಟ್ ಅಭ್ಯರ್ಥಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಮೋದಿ!
Gas leak at shrimp ಸೀಗಡಿ ಕಾರ್ಖಾನೆಯಲ್ಲಿ ಅನಿಲ ಸೋರಿಕೆ: 7 ಮಹಿಳಾ ಕಾರ್ಮಿಕರ ಸಾವು, 60 ಮಂದಿ ಅಸ್ವಸ್ಥ