Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಭಾಸ್ ಜೊತೆ ನಟಿಸಲಿರುವ ಕಿಚ್ಚ ಸುದೀಪ್? ಸಿನಿಮಾ ಯಾವುದು?
ಪ್ರಮುಖಮನರಂಜನೆ

ಪ್ರಭಾಸ್ ಜೊತೆ ನಟಿಸಲಿರುವ ಕಿಚ್ಚ ಸುದೀಪ್? ಸಿನಿಮಾ ಯಾವುದು?

Share
2 Min Read
SHARE

ಸುದೀಪ್ , ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾಗುವ ದಶಕಕ್ಕೂ ಮೊದಲೇ ಪ್ಯಾನ್ ಇಂಡಿಯಾ ನಟ ಎನಿಸಿಕೊಂಡಿದ್ದವರು. ಅವರ ನಟನಾ ಪ್ರತಿಭೆಗೆ ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು, ತಮಿಳು ಭಾಷೆಗಳಿಂದ ದೊಡ್ಡ ಅವಕಾಶಗಳೇ ಬಂದಿದ್ದವು. ಅಮಿತಾ ಬಚ್ಚನ್ ಸೇರಿದಂತೆ ಇನ್ನೂ ಹಲವರೊಟ್ಟಿಗೆ ಸಮನಾದ ಪಾತ್ರಗಳಲ್ಲಿ ಸುದೀಪ್ ನಟಿಸಿದ್ದಾರೆ.

ಆದರೆ ಇತ್ತೀಚೆಗೆ ಸುದೀಪ್ ಅವರು ಪರಭಾಷೆ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿದ್ದಾರೆ. ಆದರೆ ಇತ್ತೀಚೆಗೆ ಸುದೀಪ್ ಅವರಿಗೆ ಮತ್ತೆ ಪರ ಭಾಷೆಗಳ ಸಿನಿಮಾಗಳಿಂದ ಆಫರ್​​ಗಳು ಬರುತ್ತಿವೆ. ಇದೀಗ ಪ್ರಭಾಸ್ ಅವರ ಸಿನಿಮಾನಲ್ಲಿ ಸುದೀಪ್ ನಟಿಸಲಿದ್ದಾರೆ ಎನ್ನಲಾಗುತ್ತಿವೆ.

ಕೆಲವು ದಿನಗಳ ಹಿಂದೆಯಷ್ಟೆ ನಟ ಸುದೀಪ್ ಅವರು ರಾಜಮೌಳಿ ನಿರ್ದೇಶಿಸಿ, ಮಹೇಶ್ ಬಾಬು ನಟಿಸುತ್ತಿರುವ ‘ವಾರಣಾಸಿ’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇದೀಗ ಸುದೀಪ್ ಅವರು ತೆಲುಗಿನ ಮತ್ತೊಬ್ಬ ಸ್ಟಾರ್ ನಟನ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸುದೀಪ್ ಅವರು ಪ್ರಭಾಸ್ ನಟನೆಯ ಹೊಸ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ರಭಾಸ್, ಪ್ರಸ್ತುತ ಫೌಜಿ, ಸ್ಪಿರಿಟ್ ಮತ್ತು ‘ಕಲ್ಕಿ 2898 ಎಡಿ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಮೂರರಲ್ಲಿ ಸುದೀಪ್ ಅವರು ‘ಸ್ಪಿರಿಟ್’ ಸಿನಿಮಾನಲ್ಲಿ ಮುಖ್ಯವಾದ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ‘ಸ್ಪಿರಿಟ್’ ಸಿನಿಮಾನಲ್ಲಿ ಸುದೀಪ್ ಅವರು ಸೈನ್ಯಾಧಿಕಾರಿ ಪಾತ್ರದಲ್ಲಿ ಕಾಣೀಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೆಲ ಸುದೀಪ್ ಅಭಿಮಾನಿಗಳು, ಪ್ರಭಾಸ್ ಹಾಗೂ ಸುದೀಪ್ ಅವರು ಸೈನ್ಯದ ಸಮವಸ್ತ್ರದಲ್ಲಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಆದರೆ ಸುದೀಪ್ ಕುರಿತಾಗಿ ಇಂಥಹಾ ಸುದ್ದಿಗಳು ಪದೇ ಪದೇ ಹರಿದಾಡುತ್ತಲೇ ಇರುತ್ತವೆ. ಈ ಬಾರಿಯೂ ಸಹ ‘ವಾರಣಾಸಿ’ ಮತ್ತು ‘ಸ್ಪಿರಿಟ್’ ಎರಡೂ ಸಿನಿಮಾಗಳಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ ಎರಡೂ ಸುದ್ದಿಗಳು ಇನ್ನೂ ಖಾತ್ರಿ ಆಗಿಲ್ಲ. ಸುದೀಪ್ ಪ್ರಸ್ತುತ ‘ಬಿಲ್ಲಾ ರಂಗ ಭಾಷಾ’ ಸಿನಿಮಾದ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದಾದ ಬಳಿಕ ಕೆಆರ್​​ಜಿ ನಿರ್ಮಾಣದ ಸಿನಿಮಾನಲ್ಲಿ ನಟಿಸಲಿದ್ದಾರೆ. ಅವರೇ ಹೇಳಿರುವಂತೆ ಅವರು ಒಟ್ಟು ನಾಲ್ಕು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಒಂದಾದ ಮೇಲೆ ಒಂದನ್ನು ಮುಗಿಸಲಿದ್ದಾರಂತೆ.

ಇನ್ನು ‘ಸ್ಪಿರಿಟ್’ ಸಿನಿಮಾನಲ್ಲಿ ಪ್ರಭಾಸ್ ಸೈನ್ಯಾಧಿಕಾರಿ ಪಾತ್ರದಲ್ಲಿ ನಟಿಸಲಿದ್ದಾರಂತೆ. ಸಿನಿಮಾವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ನಾಯಕಿ ತೃಪ್ತಿ ದಿಮ್ರಿ. ಸಿನಿಮಾದ ಪೋಸ್ಟರ್ ಒಂದು ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ವೈರಲ್ ಆಗಿದೆ.

TAGGED:Kiccha Sudeep to act with Prabhas? Which movie?
Share This Article
Facebook Twitter Copy Link Print
Previous Article ತತ್ಕಾಲ್ ಟಿಕೆಟ್ ಕೇವಲ 1 ನಿಮಿಷದಲ್ಲಿ ಕನ್‌ಫರ್ಮ್ ಆಗಬೇಕಾ?! ಈ 4 ಸೀಕ್ರೆಟ್ ಟ್ರಿಕ್ಸ್ ಫಾಲೋ ಮಾಡಿ
Next Article ಯೂಟ್ಯೂಬ್ ನೋಡಿ ನಕಲಿ ನೋಟು ಮುದ್ರಿಸುತ್ತಿದ್ದ ದಂಪತಿ ಅರೆಸ್ಟ್

Popular Posts

ಸುಳ್ಳು ಸಾವಿನ ಸುದ್ದಿ ವೈರಲ್: ಕಿಡಿಗೇಡಿಗಳ ವಿರುದ್ಧ ದೂರು ದಾಖಲಿಸಿದ ನಟ ದೊಡ್ಡಣ್ಣ

1 Min Read

‘ಸ್ಮಾರ್ಟ್ ಆಗಿ ಪ್ಯಾಕ್ ಮಾಡಿ, ಸುರಕ್ಷಿತವಾಗಿ ಊಟ ಮಾಡಿ’: ಆರೋಗ್ಯಕರ ಲಂಚ್‌ಬಾಕ್ಸ್‌ಗೆ FSSAI ಸಲಹೆಗಳು

1 Min Read

ಭಾರತೀಯರ ಆತಿಥ್ಯಕ್ಕೆ ಸಾಟಿಯಿಲ್ಲ: ಭಾರತದಲ್ಲಿ ಒಂದು ತಿಂಗಳು ಏಕಾಂಗಿಯಾಗಿ ಸಂಚರಿಸಿದ ವಿದೇಶಿ ಯುವತಿಯ ಮನದಾಳದ ಮಾತು ವೈರಲ್

2 Min Read

ಅಮೆಜಾನ್ ಉದ್ಯೋಗಿನಿಯ ಭಾವನಾತ್ಮಕ ಕ್ಷಣ: ಪೋಷಕರಿಗೆ ಕಚೇರಿ ತೋರಿಸಿ ಕನಸು ನನಸು

1 Min Read

You Might Also Like

ಪ್ರಮುಖ

ಆರ್‌ಎಸ್‌ಎಸ್ ವಿರುದ್ಧ ಕ್ರಮ ಕೈಗೊಳ್ಳಲು ಪ್ರಿಯಾಂಕ್ ಖರ್ಗೆಗೆ ಅಧಿಕಾರವಿದೆಯೇ? ಮಹೇಶ್ ಜೇಠ್ಮಲಾನಿ ಕಾನೂನು ವಿವರಣೆ

2 Min Read
ಪ್ರಮುಖದೇಶ

Ex CM mamata ಮಮತಾ ಬ್ಯಾನರ್ಜಿ ಭದ್ರತಾ ಸಿಬ್ಬಂದಿ ಬದಲಿಸಿದ ಸುವೇಂದು ಸರ್ಕಾರ: ರಾಜಕೀಯ ಉದ್ದೇಶದ ನಡೆ ಎಂದ ಟಿಎಂಸಿ

1 Min Read
ಪ್ರಮುಖ

ಮುಂಗಾರಿಗೆ ಗ್ರಹಣ? ಉಪಗ್ರಹ ಚಿತ್ರಗಳಲ್ಲಿ ಆತಂಕಕಾರಿ ಸುಳಿವು; ಭಾರತದ ಆಕಾಶದಲ್ಲಿ ದಟ್ಟ ಮೋಡಗಳೇ ಕಾಣೆಯಾದವು.

1 Min Read
ಕರ್ನಾಟಕಪ್ರಮುಖ

ಮಕ್ಕಳು ಆಟವಾಡುವಾಗ ಗೇಟ್ ಸಮೇತ ಕುಸಿದುಬಿದ್ದ ಕಾಂಪೌಂಡ್ ಗೋಡೆ; 5 ವರ್ಷದ ಮಗು ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?