newsics.com
ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಅವರ ಐಷಾರಾಮಿ ಕಾರು ಕಲೆಕ್ಷನ್ ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ದುಬಾರಿ ಮತ್ತು ವಿಶೇಷ ವೈಶಿಷ್ಟ್ಯಗಳನ್ನು ಹೊಂದಿರುವ ಈ ಕಾರನ್ನು ನಟಿ ಜಾಹ್ನವಿ ಕಪೂರ್ ಖರೀದಿಸಿದ್ದಾರೆ. ಜಾನ್ವಿ ಖರೀದಿಸಿದ ದುಬಾರಿ ಕಾರಿನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗ್ತಿದೆ.

ಹೌದು, ಕೆಲವೇ ತಿಂಗಳುಗಳ ಹಿಂದೆಷ್ಟೇ ಬಹುಕೋಟಿ ಮೌಲ್ಯದ ರೇಂಜ್ ರೋವರ್ ಹೆಚ್ಎಸ್ಇ ವೆರಿಯೆಂಟ್ ಖರೀದಿಸಿದ್ದ ಜಾಹ್ನವಿ ಕಪೂರ್ ಇದೀಗ ಲೆಕ್ಸಸ್ ಐಷಾರಾಮಿ ಎಂಪಿವಿ ಮಾಲೀಕತ್ವ ಪಡೆದುಕೊಂಡಿದ್ದಾರೆ.
ಜಾಹ್ನವಿ ಕಪೂರ್ ಬಳಿ ಈಗಾಗಲೇ ರೂ. 2 ಕೋಟಿ ಮೌಲ್ಯದ ಲೆಕ್ಸಸ್ ಎಲ್ಎಕ್ಸ್ 570 ಎಸ್ ಯುವಿ, ಮರ್ಸಿಡಿಸ್ ಬೆಂಝ್ ಜಿಎಲ್ಇ 250ಡಿ, ಬಿಎಂಡಬ್ಲ್ಯು ಎಕ್ಸ್5 ಸೇರಿದಂತೆ ವಿವಿಧ ಐಷಾರಾಮಿ ಕಾರುಗಳ ಸಂಗ್ರಹವಿದ್ದು, ಇದೀಗ ರೂ. 2.50 ಕೋಟಿ ಮೌಲ್ಯದ ಲೆಕ್ಸಸ್ ಎಲ್ಎಂ 350ಹೆಚ್ ಎಂಪಿವಿ ಖರೀದಿಸಿದ್ದಾರೆ.
ಹೊಸ ಕಾರು ಟೊಯೊಟಾ ವೆಲ್ ಫೈರ್ ಮಾದರಿಯಂತೆ 5,130 ಎಂಎಂ ಉದ್ದಳತೆಯೊಂದಿಗೆ 1,890 ಎಂಎಂ ಅಗಲ ಮತ್ತು 1,945 ಎಂಎಂ ಎತ್ತರ ಹೊಂದಿದ್ದು, ಆಕರ್ಷಕ ಕ್ಯಾಬಿನ್ ಸೌಲಭ್ಯವನ್ನು ಪಡೆದುಕೊಂಡಿದೆ. 6 ಸೀಟರ್ ಮಾದರಿಗಿಂತಲೂ 4 ಸೀಟರ್ ಆವೃತ್ತಿಯು ಹೆಚ್ಚಿನ ಐಷಾರಾಮಿ ಫೀಚರ್ಸ್ ಹೊಂದಿದ್ದು, ಇದು ಡ್ರೈವರ್ ಕ್ಯಾಬಿನ್ ನಿಂದ ಹಿಂಬದಿಯ ಆಸನವನ್ನು ಪ್ರತ್ಯೇಕಿಸುವುವ ಮೂಲಕ ಬಿಸಿನೆಸ್ ಕ್ಲಾಸ್ ವಿಮಾನಯಾನದ ಅನುಭವ ನೀಡುತ್ತದೆ.