newsics.com/ನ್ಯೂಸಿಕ್ಸ್
ತಮಿಳು ಚಿತ್ರರಂಗದ ಖ್ಯಾತ ನಟ, ತಮಿಳುನಾಡಿನ ನೂತನ ಸಿಎಂ ವಿಜಯ್ ಅವರು ಇಂದು ಕೊಲ್ಲೂರಿಗೆ ಭೇಟಿ ನೀಡುತ್ತಿದ್ದಾರೆ. ಈಗಾಗಲೇ ಅವರು ಮಂಗಳೂರಿನ ವಿಮಾನ ನಿಲ್ದಾಣಕ್ಕೆ ವಿಜಯ್ ಬಂದಿಳಿದಿದ್ದಾರೆ. ಅಲ್ಲಿಂದ ಅವರು ಕಾರಿನ ಮೂಲಕ ಕೊಲ್ಲೂರಿಗೆ ಪ್ರಯಾಣಿಸಿದ್ದಾರೆ.
ಮಂಗಳೂರು ಏರ್‌ಪೋರ್ಟ್‌ನಲ್ಲಿ ಇಳಿದ ವಿಜಯ್ ಅವರಿಗೆ ಸ್ಪೀಕರ್ ಯುಟಿ ಖಾದರ್ ಅವರು ಅದ್ಧೂರಿ ಸ್ವಾಗತ ಕೋರಿದರು. ಆದರೆ ಈ ಬಾರಿ ಅಭಿಮಾನಿಗಳ ಗಮನ ಸೆಳೆದಿದ್ದು ಕೇವಲ ವಿಜಯ್ ಮಾತ್ರವಲ್ಲ, ಅವರು ಏರ್‌ಪೋರ್ಟ್‌ನಿಂದ ಹೊರಬಂದು ಕುಳಿತ ಆ ‘ರಾಜವೈಭೋಗ’ದ ಕಾರು ಕೂಡ!
ವಿಜಯ್ ಅವರು ಟೊಯೋಟೋ ಲ್ಯಾಂಡ್ ಕ್ರ್ಯೂಸರ್ ಹತ್ತಿ ಪ್ರಯಾಣಿಸಿದ್ದಾರೆ. ಟೊಯೋಟೋ ಲ್ಯಾಂಡ್ ಕ್ರೂಸರ್ 300 ಲಕ್ಷುರಿ ಕಾರುಗಳಲ್ಲಿ ಒಂದು. ವಿಜಯ್ ಈಗ ಕೊಲ್ಲೂರಿಗೆ ಪ್ರಯಾಣಿಸುತ್ತಿರುವ ಕಾರು ಕೂಡಾ ಇದೇ. ಹೆಚ್ಚು ಆಫ್-ರೋಡ್-ಕೇಂದ್ರಿತ GR-S ರೂಪಾಂತರ ಈ ಕಾರಿನಲ್ಲಿದೆ.
ಜಗತ್ತಿನ ಅತ್ಯಂತ ಶಕ್ತಿಯುತ ಮತ್ತು ಐಷಾರಾಮಿ ಎಸ್‌ಯುವಿಗಳಲ್ಲಿ (SUV) ಒಂದಾದ ಟೊಯೋಟಾ ಲ್ಯಾಂಡ್ ಕ್ರ್ಯೂಸರ್ 300. ಇದನ್ನು ಮಾರುಕಟ್ಟೆಯಲ್ಲಿ ‘ರಸ್ತೆಗಳ ರಾಜ’ ಎಂದು ಕರೆಯಲಾಗುತ್ತದೆ. ಜಪಾನಿ ಮೂಲದ ಈ ಕಾರು ಕೇವಲ ವೇಗಕ್ಕೆ ಮಾತ್ರವಲ್ಲ, ಅತ್ಯುನ್ನತ ಭದ್ರತೆ ಮತ್ತು ವೈಭೋಗಕ್ಕೆ ಹೆಸರುವಾಸಿ.
309hp, 3.3-ಲೀಟರ್ V6 ಡೀಸೆಲ್ ಎಂಜಿನ್ ಮತ್ತು 10-ಸ್ಪೀಡ್ ಆಟೋಮ್ಯಾಟಿಕ್ ಸಿಸ್ಟಮ್ ಕೂಡಾ ಇದೆ. 4-ಝೋನ್ ಹವಾ ನಿಯಂತ್ರಣ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 12.3-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್, ಸನ್‌ರೂಫ್, ಮುಂಭಾಗ ಮತ್ತು ಹಿಂಭಾಗದ ಸೀಟ್ ವಿಂಡೋ, ಮ್ಯಾನುವಲ್ ಸೀಟ್ ಅಡ್ಜಸ್ಟಿಂಗ್ ಇದೆ.
ಮುಂಭಾಗದ ಮಧ್ಯದ ಆರ್ಮ್‌ರೆಸ್ಟ್ ಅಡಿಯಲ್ಲಿ ಕೂಲ್ ಬಾಕ್ಸ್ ಕೂಡಾ ಇರುತ್ತದೆ. 10 ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾ ಮುಂತಾದ ವೈಶಿಷ್ಟ್ಯಗಳು ಈ ಕಾರಿನಲ್ಲಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಇದು ಅನಲಾಗ್ ಡಯಲ್‌ಗಳನ್ನು ಹೊಂದಿದೆ. ಗೇರ್ ನಾಬ್‌ಗಾಗಿ ಲೆಥೆರೆಟ್ ಫಿನಿಶ್ ಇದೆ.
ಟೊಯೋಟಾ ಲ್ಯಾಂಡ್ ಕ್ರೂಸ್ LC 300 ಬೆಲೆ ಈಗ ರೂ. 2.31 ಕೋಟಿಯಿಂದ ರೂ. 2.41 ಕೋಟಿಗಳವರೆಗೆ ಇದೆ. ಸದ್ಯ ವಿಜಯ್ ಅವರು ಇದೇ ಕಾರನ್ನು ರೆಗ್ಯುಲರ್ ಆಗಿ ಬಳಸುತ್ತಿದ್ದಾರೆ.
ಮುಖ್ಯಮಂತ್ರಿಯಂತಹ ವಿವಿಐಪಿಗಳಿಗೆ ಭದ್ರತೆ ಅತಿ ಮುಖ್ಯ. ಈ ಕಾರಿನಲ್ಲಿ 10 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಅತ್ಯಾಧುನಿಕ ಬ್ರೇಕಿಂಗ್ ಸಿಸ್ಟಮ್‌ಗಳಿವೆ.
Rice Price Hike ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ : ಅಕ್ಕಿ ದರ, ಕೆಜಿಗೆ 10 ರಿಂದ 20 ರೂ. ಹೆಚ್ಚಳ