newsics.com/ನ್ಯೂಸಿಕ್ಸ್
ಲಾಹೋರ್ 1947 ಚಿತ್ರದ ಟೈಟಲ್ ಬದಲಾವಣೆ ಮಾಡಲಾಗಿದೆ. ಹೊಸ ಶೀರ್ಷಿಕೆಯನ್ನು ಚಿತ್ರತಂಡ ಘೋಷಿಸಿದೆ.ಹೊಸ ಶೀರ್ಷಿಕೆ ಏನು ಎಂಬುದನ್ನು ಚಿತ್ರತಂಡ ಬಹಿರಂಗಪಡಿಸಿದೆ. ‘ಲಾಹೋರ್ 1947’ ಬದಲು ಈಗ ‘ಬಂಟ್ವಾರಾ 1947’ ಎಂದು ಮರುನಾಮಕರಣ ಮಾಡಲಾಗಿದೆ.
ಮಂಗಳವಾರ (ಜೂನ್ 9) ಚಿತ್ರತಂಡವು ಸಿನಿಮಾದ ಮೊದಲ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಹೊಸ ಶೀರ್ಷಿಕೆ ಹಾಗೂ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ಈ ಸಿನಿಮಾಗೆ ಖ್ಯಾತ ನಿರ್ದೇಶಕ ರಾಜ್ಕುಮಾರ್ ಸಂತೋಷಿ ಅವರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ನಟ, ನಿರ್ಮಾಪಕ ಆಮಿರ್ ಖಾನ್ ಅವರು ಬಂಡವಾಳ ಹೂಡಿದ್ದಾರೆ.
ನಟ ಸನ್ನಿ ಡಿಯೋಲ್ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ‘ಬಂಟ್ವಾರಾ 1947’ ಚಿತ್ರದ ಮೋಷನ್ ಪೋಸ್ಟರ್ ಹಂಚಿಕೊಂಡಿದ್ದಾರೆ. ‘ದ್ವೇಷ ಮತ್ತು ಭಯದ ಸಮಯದಲ್ಲಿ, ಅವನು ಧೈರ್ಯವನ್ನು ಆರಿಸಿಕೊಂಡ. 2026ರ ಆಗಸ್ಟ್ 14ರಿಂದ ಚಿತ್ರಮಂದಿರಗಳಲ್ಲಿ ಬಂಟ್ವಾರಾ 1947 ಸಿನಿಮಾ ವೀಕ್ಷಿಸಿ’ ಎಂದು ಈ ಪೋಸ್ಟ್ಗೆ ಅವರು ಕ್ಯಾಪ್ಷನ್ ನೀಡಿದ್ದಾರೆ.
https://www.instagram.com/reel/DZWoKAeJ15M/?igsh=N214aTlwbmc0cjl1