newsics.com/ನ್ಯೂಸಿಕ್ಸ್
ಪ್ರಕೃತಿಯ ದೈತ್ಯ ಮರವೊಂದು ಕೊನೆಯುಸಿರೆಳೆಯಲು ಬಿಕ್ಕುತ್ತಿದೆ. ಮಡಗಾಸ್ಕರ್‌ನ ‘ಕಾಡಿನ ತಾಯಿ’ ಎಂದೇ ಕರೆಯುವ ಬೃಹತ್ ಮರವೊಂದು ಕಣ್ಮರೆಯಾಗುತ್ತಿದೆ.
ಈ ಮರ ನೂರು ಇನ್ನೂರು ವರ್ಷದ್ದಲ್ಲ, ಒಂದು ಎರಡು ಶತಮಾನದ್ದಲ್ಲ, ಬರೋಬ್ಬರಿ ಹನ್ನೆರಡು ಶತಮಾನಗಳ ಕಾಲ, ಅಂದರೆ ಸುಮಾರು ಒಂದು ಸಾವಿರ ವರ್ಷಗಳ ಕಾಲ ಬದುಕಿ, ಜೀವಿ ವೈವಿದ್ಯಕ್ಕೆ ಆಸರೆಯಾಗಿ ಅದೆಷ್ಟೋ ಕಥೆಗಳನ್ನು ತನ್ನ ಎದೆಯಲ್ಲಿಟ್ಟುಕೊಂಡು ಬದುಕಿದ್ದ , ಈ ಭೂಮಿಯ ಅತಿ ದೊಡ್ಡ ಬಾವೊಬ್ಯಾಬ್‌ಗಳಲ್ಲಿ ಒಂದಾದ ತ್ಸಿಟಕಾಕಂತ್ಸಾ ಈಗ ನಿಧಾನವಾಗಿ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ.
ಅಕ್ಟೋಬರ್ 2025ರಲ್ಲಿ ಮೊದಲ ಬಾರಿಗೆ ಮರದಿಂದ ಕೊಳೆಯುವಿಕೆಯ ಭಯಂಕರ ವಾಸನೆ ಹೊರಹೊಮ್ಮಿತು. ಬುಡದಲ್ಲಿ ಕಪ್ಪು ದ್ರವ ಸುರಿಯುತ್ತಿತ್ತು. ಇತ್ತೀಚೆಗೆ ಅದು ತನ್ನ ಮುಖ್ಯ ಕೊಂಬೆಗಳಲ್ಲಿ ಒಂದನ್ನು ಕಳೆದುಕೊಂಡಿದೆ.
ವಿಮಾನದಿಂದ ತೆಗೆದ ಚಿತ್ರಗಳಲ್ಲಿ ಕಾಂಡದ ಮೇಲ್ಭಾಗದಲ್ಲಿ ದೊಡ್ಡ ರಂಧ್ರ ಕಂಡುಬಂದಿದೆ. 2025ರ ಆರಂಭದಲ್ಲಿ ಬಂದ ಉಷ್ಣವಲಯದ ಬಿರುಗಾಳಿ ಜೂಡ್ ಆ ರಂಧ್ರವನ್ನು ನೀರಿನಿಂದ ತುಂಬಿಸಿ, ಮರದ ಒಳಗಿನ ತಿರುಳನ್ನು ಕೊಳೆಯುವಂತೆ ಮಾಡಿರಬಹುದು ಎಂದು ಸಂಶೋಧಕರು ಊಹಿಸುತ್ತಿದ್ದಾರೆ. ಆದರೆ ಬಾವೊಬ್ಯಾಬ್‌ಗಳು ಒಂದೇ ದಿನ ಕಣ್ಮರೆಯಾಗುವುದಿಲ್ಲ. ಅವು ನಿಧಾನವಾಗಿ, ಛಿದ್ರವಾಗಿ, ಭೂಮಿಗೆ ಮರಳುತ್ತವೆ. ತಜ್ಞರ ಪ್ರಕಾರ, ಈ ದೈತ್ಯವು ಇನ್ನು 2 ರಿಂದ 3 ವರ್ಷಗಳಲ್ಲಿ ಸಂಪೂರ್ಣವಾಗಿ ಕಣ್ಮರೆಯಾಗಬಹುದು. ಇದು ಕೇವಲ ಒಂದು ಮರದ ಸಾವಲ್ಲ.
ಇದು ಲಕ್ಷಾಂತರ ವರ್ಷಗಳ ಮಡಗಾಸ್ಕರ್‌ನ ಅನನ್ಯ ಜೀವವೈವಿಧ್ಯತೆಗೆ, ಸ್ಥಳೀಯ ಸಂಸ್ಕೃತಿಗೆ ಮತ್ತು ಪ್ರಕೃತಿಯ ಸ್ಮಾರಕಕ್ಕೆ ಆಗುತ್ತಿರುವ ದೊಡ್ಡ ನಷ್ಟ. ‘ಕಾಡಿನ ತಾಯಿ’ ಈಗ ತನ್ನ ಕೊನೆಯ ದಿನಗಳನ್ನು ಬದುಕುತ್ತಿದ್ದಾಳೆ.
Bigg Boss Kannada ನೀವೂ ಬಿಗ್ ಬಾಸ್ ಹೋಗಬೇಕಾ : ಆಡಿಷನ್ ವಿಡಿಯೋ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ