newsics.com/ನ್ಯೂಸಿಕ್ಸ್
ರೈಲಿನಲ್ಲಿ ವಿನಾಕಾರಣ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳು, ಕರ್ತವ್ಯ ನಿರತ ಟಿಟಿಇ (ರೈಲ್ವೆ ಟಿಕೆಟ್ ಪರೀಕ್ಷಕ) ಮೇಲೆ ಹಲ್ಲೆ ನಡೆಸಿ, ಉಲ್ಟಾ ಅವರ ಮೇಲೆಯೇ ದೌರ್ಜನ್ಯದ ಆರೋಪ ಹೊರಿಸಿರುವ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಎಸಿ ಕೋಚ್ ಅಥವಾ ರಿಸರ್ವ್ಡ್ ಬೋಗಿಯಲ್ಲಿ ಯುವತಿಯೊಬ್ಬರು ಯಾವುದೇ ಮಾನ್ಯವಾದ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದರು. ನಿಯಮದಂತೆ ಕರ್ತವ್ಯದಲ್ಲಿದ್ದ ಟಿಟಿಇ ಬಂದು ಟಿಕೆಟ್ ಕೇಳಿದಾಗ, ಯುವತಿ ಟಿಕೆಟ್ ತೋರಿಸಲು ನಿರಾಕರಿಸಿದ್ದಾಳೆ. ಅಷ್ಟೇ ಅಲ್ಲದೆ, ಅಧಿಕಾರಿ ಬೋಗಿ ಖಾಲಿ ಮಾಡಲು ಅಥವಾ ದಂಡ ಪಾವತಿಸಲು ಕೇಳಿದಾಗ ವಿವಾದ ಶುರುವಾಗಿದೆ.
ಆಗ ಜಾಣತನ ಪ್ರದರ್ಶಿಸಲು ಯತ್ನಿಸಿದ ಯುವತಿ, ತಾನೇ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಲು ಆರಂಭಿಸಿದ್ದಾಳೆ. ವಿಡಿಯೋ ಆನ್ ಆಗುತ್ತಿದ್ದಂತೆ, ಟಿಟಿಇ ತನಗೆ ತಪ್ಪು ಜಾಗದಲ್ಲಿ ಕೈ ಮುಟ್ಟಿದ್ದಾರೆ ಅಥವಾ ಕಿರುಕುಳ ನೀಡುತ್ತಿದ್ದಾರೆ ಎಂದು ಕೂಗಾಡುತ್ತಾ ಅವರ ಮೇಲೆ ಕೈ ಮಾಡಿದ್ದಾಳೆ
ಈ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದಂತೆ ಲಕ್ಷಾಂತರ ಜನರು ಯುವತಿಯ ನಡವಳಿಕೆಯನ್ನು ಖಂಡಿಸಿದ್ದಾರೆ.
ವಾಯುವ್ಯ ಸಾರಿಗೆಗೆ ಬಿಡಿಭಾಗಗಳ ದರ ಏರಿಕೆ : ಸ್ಪೇರ್ ಪಾರ್ಟ್ಸ್ ಇಲ್ಲದೆ ರಿಪೇರಿ ಬಂದ್