newsics.com/ನ್ಯೂಸಿಕ್ಸ್
ಮಂಗಳೂರು : ಪ್ರಸಿದ್ಧ ಉದ್ಯಮಿಗೆ ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಝಾಮ್ ಇಬ್ರಾಹಿಂ ಹಾಗೂ ಜಿತೇಶ್ ಎಂಬುವವರು ಹನಿಟ್ರ್ಯಾಪ್ ಮಾಡಿದ ಆರೋಪ ಕೇಳಿ ಬಂದಿದ್ದು, ತನಿಖೆ ವೇಳೆ ಸ್ಪೋಟಕ ಮಾಹಿತಿ ಬಯಲಾಗಿದೆ.
ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಝಾಮ್ ಹಾಗೂ ಜಿತೇಶ್ ಎಂಬುವವರಿಂದ ಭಾರೀ ಹನಿಟ್ರ್ಯಾಪ್ ನಡೆದಿರೋದು ಬೆಳಕಿಗೆ ಬಂದಿದೆ. 2024ರಲ್ಲೇ ಪ್ರಸಿದ್ಧ ಉದ್ಯಮಿಗೆ ಹನಿಟ್ರ್ಯಾಪ್ ಖೆಡ್ಡಾ ತೋಡಿದ್ದ ಜಿತೇಶ್, ಉದ್ಯಮಿಯ ಅಶ್ಲೀಲ ಫೋಟೋ, ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಆಟ ಶುರು ಮಾಡಿದ್ದನಂತೆ.
ಖ್ಯಾತ ಉದ್ಯಮಿಯ ಅಶ್ಲೀಲ ಫೋಟೋ, ವಿಡಿಯೋ ಇಟ್ಕೊಂಡು ಬ್ಲ್ಯಾಕ್ ಮೇಲ್ ಮಾಡ್ತಿದ್ದ ಕೈ ಮುಖಂಡರು, ಹಣ ಕೊಡದಿದ್ರೆ ಆತನ ಪತ್ನಿಗೆ ವಿಡಿಯೋ ತೋರಿಸೋದಾಗಿ ಬೆದರಿಕೆ ಹಾಕಿದ್ರಂತೆ. ಮೊದಲಿಗೆ ಜಿತೇಶ್ 35 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ. ಮರ್ಯಾದೆಗೆ ಹೆದರಿ ಚೆಕ್ ಮೂಲಕ ಜಿತೇಶ್ಗೆ ಉದ್ಯಮಿ ಹಣ ನೀಡಿದ್ದರಂತೆ.
ಮತ್ತೆ ಮತ್ತೆ ಹಣಕ್ಕೆ ಜಿತೇಶ್ ಬೇಡಿಕೆ ಇಟ್ಟಾಗ ಯುವ ಕಾಂಗ್ರೆಸ್ ಮುಖಂಡ ನಿಝಾಮ್ಗೆ ಉದ್ಯಮಿಯೇ ಮಾಹಿತಿ ನೀಡಿದ್ದರಂತೆ. ಆದ್ರೆ ಉದ್ಯಮಿಯ ಸಹಾಯಕ್ಕೆ ಬಾರದ ಕಾಂಗ್ರೆಸ್ ಮುಖಂಡ ನಿಝಾಮ್, ಜಿತೇಶ್ ಜೊತೆ ಸೇರಿ ಉದ್ಯಮಿಗೆ ಇನ್ನಷ್ಟು ಬ್ಲ್ಯಾಕ್ಮೇಲ್ ಮಾಡಿದ್ದಾನೆ. ಉದ್ಯಮಿಯಿಂದ ನಿಜಾಮ್ ಮತ್ತೆ ಕೋಟಿ ಕೋಟಿ ಲೂಟಿ ಮಾಡಿದ್ದು, ಈವರೆಗೆ ಬರೋಬ್ಬರಿ 2 ಕೋಟಿ 77 ಲಕ್ಷ ದೋಚಿ ಭಾರೀ ಬ್ಲ್ಯಾಕ್ ಮೇಲ್ ಮಾಡಿದ್ದಾರೆ.
ಜಿತೇಶ್ ಆತ್ಮಹತ್ಯೆ ಕಥೆ ಕಟ್ಟಿ ಉದ್ಯಮಿ ಬಳಿ ನಿಝಾಮ್ ಇಬ್ರಾಹಿಂ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಸದ್ಯ ಹನಿಟ್ರ್ಯಾಪ್ ಕೇಸ್ನಲ್ಲಿ ನಿಝಾಮ್ ಮತ್ತು ಜಿತೇಶ್ ಇಬ್ಬರನ್ನ ಪೊಲೀಸರು ಬಂಧಿಸಿದ್ದು, ತನಿಖೆ ವೇಳೆ ಉದ್ಯಮಿ ಬ್ಲ್ಯಾಕ್ ಮೇಲ್ ಎಳೆದ ರೋಚಕ ಆತ್ಮಹತ್ಯೆ ಕಥೆ ಬಯಲಾಗಿದೆ.
Vasthu Tips ಮನೆಯ ಈ ದಿಕ್ಕಿಗೆ ಕಸದ ಬುಟ್ಟಿ ಇಟ್ರೆ ಧನ ನಷ್ಟ ಗ್ಯಾರಂಟಿ