newsics.com/ನ್ಯೂಸಿಕ್ಸ್
ಇಂಟರ್ನೆಟ್ ಜಗತ್ತಿನಲ್ಲಿ ಹಣ ಗಳಿಸಲು ಜನರು ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ ಎಂಬುದಕ್ಕೆ ಜೂನ್ 4 ರಂದು ಆರಂಭವಾದ ಪಂಪ್.ಫನ್ ಗೋ ಎಂಬ ಪ್ಲಾಟ್ಫಾರ್ಮ್ ಹೊಸ ಚರ್ಚೆಗೆ ಕಾರಣವಾಗಿದೆ. ಇನ್ನೂ, ಈ ಪ್ಲಾಟ್ಫಾರ್ಮ್ನಲ್ಲಿ ಯಾರು ಬೇಕಾದರೂ ತಮಗೆ ಇಷ್ಟವಾದ ಕೆಲಸವನ್ನ ಪೋಸ್ಟ್ ಮಾಡಬಹುದು! ಆ ಕೆಲಸವನ್ನ ಕಂಪ್ಲೀಟ್ ಮಾಡಿವರಿಗೆ ಮುಂದೆ ಹಣ ನೀಡಬೇಕು.
ಇನ್ನೂ ಈ ಆ್ಯಪ್ ಪ್ರಾರಂಭವಾದ ಕೆಲವೇ ಗಂಟೆಗಳಲ್ಲಿ ಜನರು ಕಾರಿಗೆ ಸ್ಪ್ರೇ ಪೇಂಟ್ ಮಾಡುವುದು, ಒಂದು ನಿಮಿಷದಲ್ಲಿ ಇಡೀ ಕಲ್ಲಂಗಡಿ ತಿನ್ನುವುದು, ಹಣೆಗೆ ಪರ್ಮನೆಂಟ್ ಟ್ಯಾಟೂ ಹಾಕಿಸಿಕೊಳ್ಳುವಂತಹ ಹುಚ್ಚು ಕೆಲಸಗಳನ್ನು ಮಾಡಿ ಹಣ ಪಡೆದುಕೊಂಡಿದ್ದಾರೆ.
ದಿ ಪ್ರೀಂಟ್ ವರದಿ ಮಾಡಿರುವಂತೆ, ಅತಿ ಹೆಚ್ಚು ವೈರಲ್ ಆದ ಟಾಸ್ಕ್ಗಳಲ್ಲಿ ಒಂದು ಹಣೆಗೆ ಟ್ಯಾಟೂ. ಭಾರತದ ಯುವಕನೊಬ್ಬ 3 ಸಾವಿರ ಡಾಲರ್ ಅಂದರೆ ಸುಮಾರು 2.5 ಲಕ್ಷ ರೂಪಾಯಿಗಾಗಿ ಹಣೆಯ ಮೇಲೆ ಬೌಂಟಿವರ್ಕ್ ಎಂದು ಹಚ್ಚೆ ಹಾಕಿಸಿಕೊಂಡು ವೀಡಿಯೊ ಹಂಚಿಕೊಂಡಿದ್ದಾನೆ. ಇದನ್ನು ನೋಡಿ ಇನ್ನೂ ಹಲವರು ಅದೇ ರೀತಿ ಟ್ಯಾಟೂ ಮಾಡಿಸಿಕೊಂಡಿದ್ದಾರೆ. ಒಬ್ಬರು ದೊಡ್ಡ ಅಕ್ಷರಗಳಲ್ಲಿ ಹಚ್ಚೆ ಹಾಕಿಸಿ ಇದು ಕಠಿಣ ಪರಿಶ್ರಮ ಎಂದು ಬರೆದುಕೊಂಡಿದ್ದಾರೆ. ಆದ್ರೆ, ಈ ಟ್ರೆಂಡ್ ನೋಡಿ ಸಾಮಾಜಿಕ ಜಾಲತಾಣದಲ್ಲಿ ಇದು ಹಣಕ್ಕಾಗಿ ದೇಹ ಮಾರಿಕೊಳ್ಳುವ ಪರಮಾವಧಿ ಎಂದು ಕೆಲವರು ಟೀಕೆ ಮಾಡುತ್ತಿದ್ದಾರೆ.
ಮುಂದುವರೆದು, ಇದೇ ಸಾಮಾಜಿಕ ಜಾಲತಾಣದಲ್ಲಿ ಸದ್ಯದ ಟ್ರೇಂಡ್ ಪ್ರಕಾರ ಅತಿ ದೊಡ್ಡ ಬಹುಮಾನದ ಚಾಲೆಂಚ್ ಅಂದ್ರೆ, ಓರ್ವ ಕೊಲೆಗಾರ ಕುಟುಂಬವನ್ನ ಸಂದರ್ಶನ ಮಾಡೋದು! ಹೌದು, ಸುಮಾರು 23 ಸಾವಿರ ಡಾಲರ್ಗೆ ಅಂದ್ರೆ 21 ಲಕ್ಷಕ್ಕೆ, ಲಂಡನ್ನಲ್ಲಿ ಹತ್ಯೆಯಾದ 18 ವರ್ಷದ ವಿದ್ಯಾರ್ಥಿ ಹೆನ್ರಿ ನೋವಾಕ್ನ ಕೊಲೆಗಾರ ವಿಕ್ರಮ್ ದಿಗ್ವಾನ ಕುಟುಂಬದವರನ್ನು ಕ್ಯಾಮೆರಾ ಮುಂದೆ ಸಂದರ್ಶನ ಮಾಡಬೇಕು ಎನ್ನಲಾಗಿದೆ. ಅದರಲ್ಲೂ, ಈ ಸಂದರ್ಶನ ಎಷ್ಟು ವೈರಲ್ ಆಗುತ್ತದೋ ಅಷ್ಟು ಉತ್ತಮ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
Rain Alert ರಾಜ್ಯದಲ್ಲಿ ಮುಂದಿನ 3 ದಿನ ಭಾರಿ ಮಳೆ : 5 ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಘೋಷಣೆ!