Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Interesting Facts ಎಟಿಎಂ ಕಾರ್ಡ್ ಪಿನ್ 4 ಸಂಖ್ಯೆಯದ್ದೇ ಯಾಕೆ ಇರುತ್ತೆ ಗೊತ್ತಾ? ಇದರ ಹಿಂದೆ ಇದೆ ಬಿಗ್ ಸೀಕ್ರೆಟ್
ಪ್ರಮುಖದೇಶ

Interesting Facts ಎಟಿಎಂ ಕಾರ್ಡ್ ಪಿನ್ 4 ಸಂಖ್ಯೆಯದ್ದೇ ಯಾಕೆ ಇರುತ್ತೆ ಗೊತ್ತಾ? ಇದರ ಹಿಂದೆ ಇದೆ ಬಿಗ್ ಸೀಕ್ರೆಟ್

Share
2 Min Read
SHARE

newsics.com | ನ್ಯೂಸಿಕ್ಸ್

Contents
ಆರು ಅಂಕಿಗಳ ಪಿನ್ ನಾಲ್ಕಾಗಿದ್ದು ಹೇಗೆ?ನಾಲ್ಕು ಅಂಕಿಯ ಪಿನ್ ಸುರಕ್ಷಿತವೇ?

ಬೆಂಗಳೂರು: ಇಂದಿನ ಡಿಜಿಟಲ್ ಜಗತ್ತಿನಲ್ಲಿ ಪ್ರತಿಯೊಬ್ಬರ ಜೇಬಿನಲ್ಲೂ ಎಟಿಎಂ ಕಾರ್ಡ್ ಇದ್ದೇ ಇರುತ್ತದೆ. ಹಣ ಡ್ರಾ ಮಾಡುವುದರಿಂದ ಹಿಡಿದು ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡುವವರೆಗೆ ಎಲ್ಲದಕ್ಕೂ ಇದು ಅತ್ಯಗತ್ಯ. ಆದರೆ, ಯಾವುದೇ ಬ್ಯಾಂಕ್‌ನ ಎಟಿಎಂ ಕಾರ್ಡ್ ಪಿನ್ (PIN) ಸಂಖ್ಯೆಯನ್ನು ಗಮನಿಸಿದರೆ ಅದು ಕೇವಲ ನಾಲ್ಕು ಡಿಜಿಟ್‌ಗಳನ್ನು ಮಾತ್ರ ಹೊಂದಿರುತ್ತದೆ. ಜಗತ್ತಿನಾದ್ಯಂತ ಬಳಕೆಯಲ್ಲಿರುವ ಈ ವ್ಯವಸ್ಥೆಯ ಹಿಂದೆ ಒಂದು ಸ್ವಾರಸ್ಯಕರವಾದ ಹಳೆಯ ಇತಿಹಾಸವಿದೆ.

ಸ್ಕಾಟ್‌ಲ್ಯಾಂಡ್ ಮೂಲದ ಪ್ರಸಿದ್ಧ ಸಂಶೋಧಕ ಜಾನ್ ಶೆಫರ್ಡ್ ಬ್ಯಾರನ್ ಎಂಬುವವರು ಈ ಎಟಿಎಂ ಯಂತ್ರವನ್ನು ಜಗತ್ತಿಗೆ ಪರಿಚಯಿಸಿದರು. 1967ರ ಜೂನ್ 27 ರಂದು ಲಂಡನ್‌ನಲ್ಲಿ ಮೊದಲ ಬಾರಿಗೆ ಈ ಮಿಷನ್ ಅನ್ನು ಅಳವಡಿಸಲಾಯಿತು. ಒಮ್ಮೆ ಜಾನ್ ಶೆಫರ್ಡ್ ಅವರಿಗೆ ತುರ್ತಾಗಿ ಹಣ ಬೇಕಿದ್ದಾಗ ಬ್ಯಾಂಕ್ ಮುಚ್ಚಿತ್ತು. ಆಗ ಅವರಿಗೆ ಚಾಕೊಲೇಟ್ ಕೊಡುವ ವೆಂಡಿಂಗ್ ಯಂತ್ರದ ಮಾದರಿಯಲ್ಲೇ ಹಣ ನೀಡುವ ಸಾಧನವನ್ನು ಏಕೆ ತಯಾರಿಸಬಾರದು ಎಂಬ ಯೋಚನೆ ಬಂತು. ಆ ಯೋಚನೆಯ ಫಲವೇ ಇಂದಿನ ಎಟಿಎಂ.

ಆರು ಅಂಕಿಗಳ ಪಿನ್ ನಾಲ್ಕಾಗಿದ್ದು ಹೇಗೆ?

ಆರಂಭದಲ್ಲಿ ಜಾನ್ ಶೆಫರ್ಡ್ ಅವರು ಎಟಿಎಂ ಸುರಕ್ಷತೆಗಾಗಿ ಆರು ಅಂಕಿಗಳ (6 Digit) ಪಿನ್ ಸಂಖ್ಯೆಯನ್ನು ನಿಗದಿಪಡಿಸಲು ಮುಂದಾಗಿದ್ದರು. ಆದರೆ, ಈ ಐಡಿಯಾವನ್ನು ಅವರು ತಮ್ಮ ಪತ್ನಿ ಕ್ಯಾರೋಲಿನ್ ಅವರ ಬಳಿ ಹಂಚಿಕೊಂಡಾಗ ಹೊಸ ಸಮಸ್ಯೆಯೊಂದು ಎದುರಾಯಿತು.

ಅವರ ಪತ್ನಿಗೆ ಆರು ಅಂಕಿಗಳ ದೊಡ್ಡ ನಂಬರ್ ಅನ್ನು ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟವಾಗುತ್ತಿತ್ತು. ಅವರು ಕೇವಲ ನಾಲ್ಕು ಅಂಕಿಗಳನ್ನು ಮಾತ್ರ ಸುಲಭವಾಗಿ ನೆನಪಿಡುತ್ತಿದ್ದರು. ಪತ್ನಿಯ ಈ ಮರೆಗುಳಿತನವನ್ನು ಗಮನಿಸಿದ ಜಾನ್, ಬ್ಯಾಂಕಿಂಗ್ ಸುರಕ್ಷತೆಯ ನಿಯಮವನ್ನು ತಕ್ಷಣವೇ ನಾಲ್ಕು ಅಂಕಿಗಳಿಗೆ (4 Digit) ಸೀಮಿತಗೊಳಿಸಿದರು. ಅಂದು ಪತ್ನಿಗಾಗಿ ಮಾಡಿದ ಈ ಬದಲಾವಣೆಯೇ ಇಂದು ಜಗತ್ತಿನಾದ್ಯಂತ ಸ್ಟ್ಯಾಂಡರ್ಡ್ ನಿಯಮವಾಗಿ ಮಾರ್ಪಟ್ಟಿದೆ.

ನಾಲ್ಕು ಅಂಕಿಯ ಪಿನ್ ಸುರಕ್ಷಿತವೇ?

ನಾಲ್ಕು ಅಂಕಿಗಳ ಪಿನ್ ಅನ್ನು ಹ್ಯಾಕ್ ಮಾಡುವುದು ಸುಲಭ ಎಂಬ ಆತಂಕ ತಜ್ಞರಲ್ಲಿ ಇತ್ತು. ಅದಕ್ಕಾಗಿಯೇ ಬ್ಯಾಂಕಿಂಗ್ ವಲಯದಲ್ಲಿ ಮತ್ತೊಂದು ಭದ್ರತಾ ನಿಯಮವನ್ನು ಜಾರಿಗೆ ತರಲಾಯಿತು. ಇದರ ಪ್ರಕಾರ, ಯಾವುದೇ ಎಟಿಎಂ ಯಂತ್ರದಲ್ಲಿ ಸತತವಾಗಿ 3 ಬಾರಿ ತಪ್ಪು ಪಿನ್ ನಂಬರ್ ಪ್ರಮಾದವಶಾತ್ ನಮೂದಿಸಿದರೆ, ಆ ಕಾರ್ಡ್ ತಕ್ಷಣವೇ ತಾತ್ಕಾಲಿಕವಾಗಿ ಲಾಕ್ ಆಗುತ್ತದೆ. ಈ ತಂತ್ರಜ್ಞಾನದಿಂದಾಗಿ 4 ಅಂಕಿಗಳ ಪಿನ್ ವ್ಯವಸ್ಥೆಯು ಇಂದಿಗೂ ಅತ್ಯಂತ ಸರಳ ಮತ್ತು ಸುರಕ್ಷಿತವಾಗಿ ಮುಂದುವರಿದಿದೆ.

Ram Mandir ಅಯೋಧ್ಯೆ ರಾಮಮಂದಿರ ಟ್ರಸ್ಟ್‌ ದೇಣಿಗೆ ಅಕ್ರಮ ಆರೋಪ: ಜುಲೈ 13 ರಂದು ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ

TAGGED:#ATM #Pin #digit #Newsics
Share This Article
Facebook Twitter Copy Link Print
Previous Article Crime Case ಪೋಕ್ಸೋ ಕೇಸ್ ದಾಖಲಿಸಿದ್ದಕ್ಕೆ ಒಂದೇ ಕುಟುಂಬದ ಆರು ಜನರ ಸಾಮೂಹಿಕ ಕೊ*ಲೆ
Next Article AI ಜಮಾನಾದಲ್ಲೂ ಬದಲಾಗದ ಪಠ್ಯಕ್ರಮ: ಕೆಲಸ ಸಿಗದೆ ಟೆಕ್ಕಿಗಳ ಪರದಾಟ! ವೈರಲ್ ಆಯ್ತು ಉದ್ಯಮಿಯ ಪೋಸ್ಟ್

Popular Posts

Babies ಮಕ್ಕಳಿಗೆ ಕನ್ನಡಿ ತೋರಿಸಿದ್ರೆ ಮಾತು ಬರಲ್ವಾ? ಹಿರಿಯರ ಆ ಮಾತಿನ ಹಿಂದಿರುವ ಅಸಲಿ ರಹಸ್ಯ ಮತ್ತು ವೈಜ್ಞಾನಿಕ ಸತ್ಯ ಇಲ್ಲಿದೆ

2 Min Read

Crime Case ಗುಂಡು ಹಾರಿಸಿಕೊಂಡು 24 ವರ್ಷದ ಯುವಕ ಸಾ*ವು

1 Min Read

Bollywood ಜುಲೈ 24 ಕ್ಕೆ ರಿಲೀಸ್‌ ಆಗಲಿದೆ ರಣಬೀರ್-ಯಶ್ ನಟನೆಯ ‘ರಾಮಾಯಣ’ ಟ್ರೇಲರ್

1 Min Read

Triple Crime ಮಾವ, ತಾಯಿ, ಅಜ್ಜಿಯನ್ನು ಬರ್ಬರವಾಗಿ ಕೊಂದು ತಾನೂ ಆತ್ಮಹ*ತ್ಯೆಗೆ ಶರಣಾದ ಮಗ

2 Min Read

You Might Also Like

ಪ್ರಮುಖವಿದೇಶ

Plane Crash ಭೀಕರ ವಿಮಾನ ದುರಂತ: ಸ್ವಾತಂತ್ರ್ಯ ದಿನದಂದೇ 10 ಮಂದಿ ದುರ್ಮರಣ

1 Min Read
ಪ್ರಮುಖಕರ್ನಾಟಕ

Menstrual Leave ಆರೋಗ್ಯ ಇಲಾಖೆ ಮಹಿಳೆಯರಿಗೆ ಗುಡ್ ನ್ಯೂಸ್: ಸಿಗಲಿದೆ ವರ್ಷಕ್ಕೆ 12 ದಿನ ವೇತನಸಹಿತ ಋತುಚಕ್ರದ ರಜೆ

1 Min Read
ಪ್ರಮುಖಕರ್ನಾಟಕ

Air Show ಏರೋ ಇಂಡಿಯಾ 2027 ಡೇಟ್ಸ್ ಫಿಕ್ಸ್: ಯಲಹಂಕದಲ್ಲಿ ಮತ್ತೊಮ್ಮೆ ಭರ್ಜರಿ ಏರ್ ಶೋ ಸದ್ದು

1 Min Read
ಪ್ರಮುಖಜ್ಯೋತಿಷ್ಯ

Astrology ಈ 4 ರಾಶಿಯವರು ಸಾಲದ ವ್ಯವಹಾರ ಮಾಡಿದ್ರೆ ಕೈ ಸುಟ್ಟುಕೊಳ್ಳೋದು ಗ್ಯಾರಂಟಿ! ಜ್ಯೋತಿಷ್ಯದ ಮುನ್ನೆಚ್ಚರಿಕೆ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?