ಹಾವು ಕಚ್ಚಿ ಆರನೇ ತರಗತಿ ವಿದ್ಯಾರ್ಥಿ ಸಾವು, ಸಹೋದರಿ ಆಸ್ಪತ್ರೆಗೆ ದಾಖಲು

newsics.com ಶಿರಸಿ(ಉತ್ತರ ಕನ್ನಡ): ವಿಷಪೂರಿತ ಹಾವು ಕಚ್ಚಿ ಆರನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಮೃತಪಟ್ಟು, ಆತನ ಸಹೋದರಿ ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ಶಿರಸಿ ತಾಲೂಕಿನ ಬನವಾಸಿ ವ್ಯಾಪ್ತಿಯ ಸಹಸ್ರಳ್ಳಿಯಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ. ಸಹಸ್ರಳ್ಳಿಯ ನಿವಾಸಿ ಪುಟ್ಟಪ್ಪ ನಾಯ್ಕ ಎಂಬುವರ ಪುತ್ರ ಮಿಥುನ್ (12) ಹಾವು ಕಡಿತಕ್ಕೆ ಜೀವ ಕಳೆದುಕೊಂಡ ಬಾಲಕ. ಈತನ ತಂಗಿ ದೀಕ್ಷಾ ಪುಟ್ಟಪ್ಪ ನಾಯ್ಕ (9) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮಂಗಳವಾರ ತಡರಾತ್ರಿ ಮಿಥುನ್ ಹಾಗೂ ದೀಕ್ಷಾ ತಂದೆಯೊಂದಿಗೆ ಮಲಗಿದ್ದರು. ಬೆಳಗಿನ … Continue reading ಹಾವು ಕಚ್ಚಿ ಆರನೇ ತರಗತಿ ವಿದ್ಯಾರ್ಥಿ ಸಾವು, ಸಹೋದರಿ ಆಸ್ಪತ್ರೆಗೆ ದಾಖಲು