Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಊಟದ ಮಧ್ಯೆ ನೀರು ಕುಡಿದರೆ ಏನೆಲ್ಲಾ ಆಗುತ್ತದೆ ಗೊತ್ತಾ?
ಪ್ರಮುಖಆರೋಗ್ಯ

ಊಟದ ಮಧ್ಯೆ ನೀರು ಕುಡಿದರೆ ಏನೆಲ್ಲಾ ಆಗುತ್ತದೆ ಗೊತ್ತಾ?

Share
2 Min Read
SHARE

newsics.com/ನ್ಯೂಸಿಕ್ಸ್

ನಾವೆಲ್ಲರೂ ಬಾಯಾರಿಕೆಯಾದಾಗ ನೀರು ಕುಡಿಯುತ್ತೇವೆ. ಹೆಚ್ಚು ಖಾರ ತಿಂದಾಗ ನೀರು ಕುಡಿಯಬೇಕು ಎನಿಸುತ್ತದೆ. ಆದರೆ ಊಟದ ಮಧ್ಯೆ ಆಗಾಗ ನೀರು ಕುಡಿಯಬೇಕು ಎನ್ನುವ ಕೆಟ್ಟ ಅಭ್ಯಾಸ ಮಾತ್ರ ನಮ್ಮಿಂದ ದೂರವಾಗುವುದಿಲ್ಲ. ಅದೇನೋ ಗೊತ್ತಿಲ್ಲ. ಚಿಕ್ಕವಯಸ್ಸಿನಿಂದಲೂ ನಮಗೆ ಊಟದ ಮಧ್ಯೆ ಬೇಕೆಂದೇ ನೀರು ಕುಡಿಯುವ ಹವ್ಯಾಸ ಇದೆ.

ಆದರೆ ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಬೀರುವ ದುಷ್ಪರಿಣಾಮ ನಮಗೆ ಗೊತ್ತಿಲ್ಲ. ಕೆಲವರಂತೂ ಊಟದ ಮಧ್ಯೆ ಊಟಕ್ಕಿಂತ ಅತಿ ಹೆಚ್ಚು ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಆದರೆ ಊಟದ ಮಧ್ಯೆ ನೀರು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದಲ್ಲ ಅದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡಬಹುದು

ಜೀರ್ಣಕ್ರಿಯೆಯ ಮೇಲೆ ಬೀರುವ ಪ್ರಭಾವ: ನಾವು ಆಹಾರ ಸೇವಿಸಿದಾಗ ಅದನ್ನು ಜೀರ್ಣಿಸಿಕೊಳ್ಳಲು ನಮ್ಮ ಹೊಟ್ಟೆಯಲ್ಲಿ ಜಠರಾಗ್ನಿ ಅಥವಾ ಜೀರ್ಣಕಾರಿ ರಸಗಳು ಉತ್ಪತ್ತಿಯಾಗುತ್ತವೆ. ಊಟದ ಮಧ್ಯದಲ್ಲಿ ಅತಿಯಾಗಿ ನೀರು ಕುಡಿಯುವುದರಿಂದ ಈ ಜೀರ್ಣಕಾರಿ ರಸಗಳು ತೆಳುವಾಗುತ್ತವೆ. ಇದರಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಮತ್ತು ಅಸಿಡಿಟಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

 

ತೂಕ ಹೆಚ್ಚಾಗುವ ಸಾಧ್ಯತೆ: ಊಟದ ಸಮಯದಲ್ಲಿ ಹೆಚ್ಚು ನೀರು ಕುಡಿಯುವುದರಿಂದ ದೇಹದಲ್ಲಿ ಇನ್ಸುಲಿನ್ ಮಟ್ಟದಲ್ಲಿ ಏರುಪೇರಾಗಬಹುದು. ಆಹಾರ ಸರಿಯಾಗಿ ಪಚನವಾಗದಿದ್ದಾಗ, ಅದು ಕೊಬ್ಬಿನ ರೂಪದಲ್ಲಿ ದೇಹದಲ್ಲಿ ಶೇಖರಣೆಯಾಗಲು ಪ್ರಾರಂಭಿಸುತ್ತದೆ. ಇದು ಪರೋಕ್ಷವಾಗಿ ದೇಹದ ತೂಕ ಹೆಚ್ಚಾಗಲು ಕಾರಣವಾಗಬಹುದು ಎಂದು ಕೆಲವು ಸಂಶೋಧನೆಗಳು ಹೇಳುತ್ತವೆ.

ಆಯುರ್ವೇದದ ಪ್ರಕಾರ, ಊಟಕ್ಕೆ ಮುಂಚಿತವಾಗಿ ನೀರು ಕುಡಿಯುವುದು ದೇಹವನ್ನು ನಿಶ್ಯಕ್ತಗೊಳಿಸುತ್ತದೆ ಮತ್ತು ಊಟದ ತಕ್ಷಣ ನೀರು ಕುಡಿಯುವುದು ಸ್ಥೂಲಕಾಯಕ್ಕೆ ಕಾರಣವಾಗುತ್ತದೆ. ಹಾಗಾಗಿ, ಊಟದ ಮಧ್ಯೆ ಅನಿವಾರ್ಯ ಎನಿಸಿದರೆ ಮಾತ್ರ ಕೇವಲ ಒಂದು ಅಥವಾ ಎರಡು ಸಿಪ್ ಉಗುರುಬೆಚ್ಚಗಿನ ನೀರನ್ನು ಕುಡಿಯಬಹುದು. ಇದು ಗಂಟಲಿನಲ್ಲಿ ಆಹಾರ ಸಿಲುಕಿಕೊಳ್ಳುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಉತ್ತಮ ಆರೋಗ್ಯ ಮತ್ತು ಸುಲಭ ಜೀರ್ಣಕ್ರಿಯೆಗಾಗಿ ಊಟ ಮಾಡುವ ಕನಿಷ್ಠ ಅರ್ಧ ಗಂಟೆಗೆ ಮುಂಚಿತವಾಗಿ ಅಥವಾ ಊಟ ಮುಗಿಸಿದ ಅರ್ಧ ಗಂಟೆಯ ನಂತರ ನೀರು ಕುಡಿಯುವುದು ಅತ್ಯಂತ ಸೂಕ್ತವಾದ ಕ್ರಮವಾಗಿದೆ.

Rain Alert ರಾಜ್ಯದಲ್ಲಿ ಮುಂದಿನ 3 ದಿನ ಮಳೆ : ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ

TAGGED:Do you know what happens if you drink water between meals?
Share This Article
Facebook Twitter Copy Link Print
Previous Article Rain Alert ರಾಜ್ಯದಲ್ಲಿ ಮುಂದಿನ 3 ದಿನ ಮಳೆ : ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ
Next Article ಎಲ್ಲರೂ ನನ್ನ ಬಿಟ್ಟು ಹೋದರು; ಆ ದಿನಗಳ ನೋವನ್ನು ಹಂಚಿಕೊಂಡ ನಟ ಅರ್ಜುನ್ ರಾಂಪಾಲ್

Popular Posts

CM DK Shivakumar ಸಿಎಂ ಆದ ಬಳಿಕ ಮೊದಲ ಬಾರಿಗೆ ದೆಹಲಿಗೆ ಸಿಎಂ ಡಿಕೆ ಭೇಟಿ

1 Min Read

ಜೂನ್ 13 ರಿಂದ ಪ್ರಧಾನಿ ಮೋದಿ ಯುರೋಪ್ ಪ್ರವಾಸ

1 Min Read

US-Iran ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ-ಇರಾನ್ ನಡುವೆ ಮಿಲಿಟರಿ ಸಂಘರ್ಷ

1 Min Read

ಎಲ್ಲರೂ ನನ್ನ ಬಿಟ್ಟು ಹೋದರು; ಆ ದಿನಗಳ ನೋವನ್ನು ಹಂಚಿಕೊಂಡ ನಟ ಅರ್ಜುನ್ ರಾಂಪಾಲ್

1 Min Read

You Might Also Like

ಕರ್ನಾಟಕಪ್ರಮುಖ

Rain Alert ರಾಜ್ಯದಲ್ಲಿ ಮುಂದಿನ 3 ದಿನ ಮಳೆ : ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ

0 Min Read
ಕರ್ನಾಟಕಪ್ರಮುಖ

ತಾಯಿಯಿಂದಲೇ ಮಗಳ ಕೊಲೆ ಕೇಸ್​ಗೆ ಬಿಗ್ ಟ್ವಿಸ್ಟ್

2 Min Read
ದೇಶಪ್ರಮುಖಮನರಂಜನೆ

ಸನ್ನಿ ಡಿಯೋಲ್ ನಟನೆಯ ಲಾಹೋರ್ 1947 ಚಿತ್ರದ ಟೈಟಲ್ ಬದಲಾವಣೆ

1 Min Read
ದೇಶಪ್ರಮುಖವಿದೇಶ

ನೇಪಾಳದಿಂದಲೂ ಭಾರತದ ಮಾವಿನಹಣ್ಣಿಗೆ ನಿರ್ಬಂಧ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?