Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > CJI in London ಲಂಡನ್‌ನಲ್ಲಿ ಸಿಜೆಐ ಸೂರ್ಯಕಾಂತ್‌ ಭಾಷಣಕ್ಕೆ ಅಡ್ಡಿ: ಹೈಕಮಿಷನ್ ತೀವ್ರ ಆಕ್ರೋಶ
ದೇಶಪ್ರಮುಖವಿದೇಶ

CJI in London ಲಂಡನ್‌ನಲ್ಲಿ ಸಿಜೆಐ ಸೂರ್ಯಕಾಂತ್‌ ಭಾಷಣಕ್ಕೆ ಅಡ್ಡಿ: ಹೈಕಮಿಷನ್ ತೀವ್ರ ಆಕ್ರೋಶ

Share
2 Min Read
SHARE

newsics.com/ನ್ಯೂಸಿಕ್ಸ್

ಲಂಡನ್‌ನಲ್ಲಿ ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಕೆಲವರು ಗದ್ದಲ ಸೃಷ್ಟಿಸಿ, ಅಡ್ಡಿಪಡಿಸಿರುವ ಘಟನೆ ನಡೆದಿದೆ. ಈ ವರ್ತನೆಯನ್ನು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ (ರಾಯಭಾರ ಕಚೇರಿ) ತೀವ್ರವಾಗಿ ಖಂಡಿಸಿದೆ.

ಇದು ಸಭ್ಯತೆಯಿಂದ ಕೂಡಿದ ನಡವಳಿಕೆಯಲ್ಲ. ಗೌರವಾನ್ವಿತ ಕಾರ್ಯಕ್ರಮಗಳಲ್ಲಿ ಇಂತಹ ವರ್ತನೆಗಳನ್ನು ಒಪ್ಪಲು ಸಾಧ್ಯವಿಲ್ಲ. ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಶಾಂತಿಯುತ ಮತ್ತು ಗೌರವಾನ್ವಿತ ರೀತಿಯಲ್ಲಿ ವ್ಯಕ್ತಪಡಿಸಬೇಕು ಎಂದು ಹೈಕಮಿಷನ್ ತನ್ನ X ಖಾತೆಯಲ್ಲಿ ತಿಳಿಸಿದೆ.

ಜೂನ್ 4 ರಂದು ಲಂಡನ್‌ನ ಬರ್ಕ್‌ಬೆಕ್ ಕಾಲೇಜಿನಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ‘ಕೃತಕ ಬುದ್ಧಿಮತ್ತೆ (AI) ಮತ್ತು ಅಂತರರಾಷ್ಟ್ರೀಯ ಕಾನೂನು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುತ್ತಿದ್ದರು. ಈ ವೇಳೆ ಪ್ರಶ್ನೋತ್ತರ ಅವಧಿಯಲ್ಲಿ ಸಾರ್ವಜನಿಕರಲ್ಲಿದ್ದ ಕೆಲವರು, ಭಾರತದಲ್ಲಿ ವಿರೋಧದ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿ ಪ್ರಶ್ನೆ ಕೇಳಲು ಆರಂಭಿಸಿದರು. ಅಲ್ಲದೆ, ನ್ಯಾಯಮೂರ್ತಿಗಳು ಇತ್ತೀಚೆಗೆ ನೀಡಿದ್ದ ಕಾಕ್ರೋಚ್ ಹೇಳಿಕೆಯ ಕುರಿತೂ ಪ್ರಶ್ನಿಸಲು ಯತ್ನಿಸಿದರು.

ಆಗ ಕಾರ್ಯಕ್ರಮದ ಸಂಘಟಕರು ಮತ್ತು ನಿರೂಪಕರು ಮಧ್ಯಪ್ರವೇಶಿಸಿ, ಈ ಪ್ರಶ್ನೆಗಳು ಇಂದಿನ ವಿಷಯಕ್ಕೆ ಸಂಬಂಧಿಸಿದ್ದಲ್ಲ ಎಂದು ಹೇಳಿ ಆ ಪ್ರಶ್ನೆಗಳನ್ನು ಅಲ್ಲಗಳಿದರು. ಈ ಘಟನೆಯ ವಿಡಿಯೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು, ಭಾರತದಲ್ಲಿ ಸರ್ಕಾರದ ನಿಲುವುಗಳನ್ನು ವಿರೋಧಿಸುವವರನ್ನು ಹತ್ತಿಕ್ಕಲಾಗುತ್ತಿದೆ ಎಂದು ದೇಶದ ಮತ್ತು ಜಾಗತಿಕ ಕಾನೂನು ತಜ್ಞರು ಕಳವಳ ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರಶ್ನೆ ಕೇಳುತ್ತಿರುವುದು ಕಂಡುಬಂದಿದೆ. ಈ ಒಂದು ಅಸಹಿಷ್ಣುತೆ ನ್ಯಾಯಾಧೀಶರ ಭಾಷಣದಲ್ಲೂ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ ಎಂದಿದ್ದಾರೆ. ಆದರೆ ತಕ್ಷಣವೇ ನಿರೂಪಕರು, ಕ್ಷಮಿಸಿ, ಇಂದಿನ ವಿಷಯ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ್ದಾಗಿದೆ. ಹಾಗಾಗಿ ಈ ಪ್ರಶ್ನೆಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಮೈಕ್ ಕಟ್ ಮಾಡಿದ್ದಾರೆ.

ಎಐ ಬಗ್ಗೆ ಸಿಜೆಐ ಹೇಳಿದ್ದೇನು?

ಇದಕ್ಕೂ ಮುನ್ನ ಭಾಷಣ ಮಾಡಿದ್ದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, ಕೃತಕ ಬುದ್ಧಿಮತ್ತೆಯು ಆಡಳಿತ, ನ್ಯಾಯಾಂಗ ಮತ್ತು ಸಂವಹನ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸುತ್ತಿದೆ. ತಂತ್ರಜ್ಞಾನ ಎಷ್ಟೇ ಬೆಳೆದರೂ ಅದು ಸಂವಿಧಾನದ ಮೌಲ್ಯಗಳು, ಪ್ರಜಾಪ್ರಭುತ್ವ ಮತ್ತು ಮಾನವನ ಘನತೆಗೆ ಬದ್ಧವಾಗಿರಬೇಕು ಎಂದು ಒತ್ತಿ ಹೇಳಿದ್ದರು. ತಂತ್ರಜ್ಞಾನ ಮತ್ತು ಮಾನವ ಸ್ವಾತಂತ್ರ್ಯದ ನಡುವಿನ ಸಂಬಂಧವನ್ನು ಮುಂಬರುವ ದಿನಗಳು ನಿರ್ಧರಿಸಲಿವೆ ಎಂದು ಅವರು ತಿಳಿಸಿದ್ದಾರೆ.

 

https://x.com/i/status/2062880068540522850

https://x.com/i/status/2062880068540522850

ಲಂಡನ್ ವಿಶ್ವವಿದ್ಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿ ಎದುರೇ ತೀವ್ರ ವಾಗ್ವಾದ :ಭಾಷಣದ ವೇಳೆ ನಡೆದಿದ್ದೇನು?

ಕೆಟ್ಟ ಮುಹೂರ್ತದಲ್ಲಿ ಡಿಕೆ ಪ್ರಮಾಣವಚನ ಸ್ವೀಕರಿಸಿದ್ರಾ? ಕಾಂಗ್ರೆಸ್​ ಛಿದ್ರವಾಗುತ್ತಾ? ಅಧಿಕಾರಿಗಳು ಜೀವ ಕಳೆದುಕೊಳ್ತಾರಾ? ಭಯಾನಕ ಭವಿಷ್ಯವಾಣಿ ಹೇಳ್ತಿರೋದೇನು?

KCET Result 2026 ಕರ್ನಾಟಕ UG-CET ಪರೀಕ್ಷೆ ಫಲಿತಾಂಶ ಪ್ರಕಟ : ಇಲ್ಲಿದೆ ಟಾಪರ್ ಗಳ ಪಟ್ಟಿ

 

TAGGED:CJI Surya Kant's speech in London disrupted: High Commission expresses deep outrage
Share This Article
Facebook Twitter Copy Link Print
Previous Article ಕೆಟ್ಟ ಮುಹೂರ್ತದಲ್ಲಿ ಡಿಕೆ ಪ್ರಮಾಣವಚನ ಸ್ವೀಕರಿಸಿದ್ರಾ? ಕಾಂಗ್ರೆಸ್​ ಛಿದ್ರವಾಗುತ್ತಾ? ಅಧಿಕಾರಿಗಳು ಜೀವ ಕಳೆದುಕೊಳ್ತಾರಾ? ಭಯಾನಕ ಭವಿಷ್ಯವಾಣಿ ಹೇಳ್ತಿರೋದೇನು?

Popular Posts

CJI in London ಲಂಡನ್‌ನಲ್ಲಿ ಸಿಜೆಐ ಸೂರ್ಯಕಾಂತ್‌ ಭಾಷಣಕ್ಕೆ ಅಡ್ಡಿ: ಹೈಕಮಿಷನ್ ತೀವ್ರ ಆಕ್ರೋಶ

2 Min Read

ಕೆಟ್ಟ ಮುಹೂರ್ತದಲ್ಲಿ ಡಿಕೆ ಪ್ರಮಾಣವಚನ ಸ್ವೀಕರಿಸಿದ್ರಾ? ಕಾಂಗ್ರೆಸ್​ ಛಿದ್ರವಾಗುತ್ತಾ? ಅಧಿಕಾರಿಗಳು ಜೀವ ಕಳೆದುಕೊಳ್ತಾರಾ? ಭಯಾನಕ ಭವಿಷ್ಯವಾಣಿ ಹೇಳ್ತಿರೋದೇನು?

2 Min Read

Ex CM Mamata ದೇವಸ್ಥಾನದಲ್ಲಿ ಮಾಜಿ‌ ಸಿಎಂ ಮಮತಾಗೆ ಕ್ಯಾರೇ ಎನ್ನದ ಜನ! ಸಾಲಲ್ಲಿ ನಿಂತು ದೇವಿ ದರ್ಶನ ಪಡೆದ ದೀದಿ! ವಿಡಿಯೋ ನೋಡಿ

1 Min Read

ಪ್ರಿಯಕರನ ಜೊತೆ ಸೇರಿ ಆರು ವರ್ಷದ ಮಗಳನ್ನು ಕೊಂದ ಹೆತ್ತ ತಾಯಿ

1 Min Read

You Might Also Like

ಕರ್ನಾಟಕದೇಶಪ್ರಮುಖ

Karnataka CET Result 2026 ಕೆಸಿಇಟಿ ಫಲಿತಾಂಶ ಪ್ರಕಟ; ಈ ಬಾರಿಯೂ ಹೆಣ್ಣು ಮಕ್ಕಳೇ ಮೇಲುಗೈ!

1 Min Read
ಕರ್ನಾಟಕದೇಶಪ್ರಮುಖ

KCET Result 2026 ಕರ್ನಾಟಕ UG-CET ಪರೀಕ್ಷೆ ಫಲಿತಾಂಶ ಪ್ರಕಟ : ಇಲ್ಲಿದೆ ಟಾಪರ್ ಗಳ ಪಟ್ಟಿ

1 Min Read
ಕರ್ನಾಟಕಪ್ರಮುಖ

ಸುರ್ಜೆವಾಲಾ ಮನವೊಲಿಕೆ ಸಕ್ಸಸ್ : ಇಂದು ಸಂಜೆ ರಾಮಲಿಂಗಾರೆಡ್ಡಿ ರಾಜಿನಾಮೆ ವಾಪಸ್ ಸಾಧ್ಯತೆ

1 Min Read
ಕರ್ನಾಟಕದೇಶಪ್ರಮುಖ

CET Result 2026: ಸಿಇಟಿ ಫಲಿತಾಂಶ ಪ್ರಕಟ; ಆನ್​ಲೈನ್​ನಲ್ಲಿ ಹೀಗೆ ಚೆಕ್​ ಮಾಡಿಕೊಳ್ಳಿ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?