newsics.com/ನ್ಯೂಸಿಕ್ಸ್
ಬೆಂಗಳೂರು: ಸಿದ್ದರಾಮ್ಯಯ ರಾಜೀನಾಮೆ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಇಂದು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಡಿ.ಕೆ.ಶಿವಕುಮಾರ್ ಜತೆ 13 ಜನ ಶಾಸಕರು ಸಚಿವರಾಗಿ ಪದಗ್ರಹಣ ಮಾಡಲಿದ್ದಾರೆ. ಡಾ.ಜಿ.ಪರಮೇಶ್ವರ್ ಉಪಮುಖ್ಯಮಂತ್ರಿಯಾಗಲಿದ್ದಾರೆ.
ಈಗಾಗಲೇ ಕಾಂಗ್ರೆಸ್‌ನ ಹಿರಿಯ ನಾಯಕರುಗಳಿಗೆ ಖಾತೆ ಹಂಚಿಕೆಯನ್ನು ಫೈನಲ್ ಮಾಡಲಾಗಿದೆ. ಆ ಪೈಕಿ ಯಾವ್ಯಾವ ಸಚಿವರಿಗೆ ಯಾವ್ಯಾವ ಖಾತೆ ಸಿಗಲಿದೆ ಅನ್ನೋದರ ಕುರಿತು ಕಾಂಗ್ರೆಸ್ ನಾಯಕರು ಅಂತಿಮ ಪಟ್ಟಿ ಸಿದ್ಧವಾಗಿದೆ.
ನೂತನ ಸಚಿವರು ಮತ್ತು ಸಂಭಾವ್ಯ ಖಾತೆ ವಿವರ:
ಡಾ.ಜಿ.ಪರಮೇಶ್ವರ- ಉಪಮುಖ್ಯಮಂತ್ರಿ, ಕಂದಾಯ ಇಲಾಖೆ ಸಚಿವ
ಪ್ರಿಯಾಂಕ್ ಖರ್ಗೆ- ಗೃಹ ಇಲಾಖೆ ಮತ್ತು ಐಟಿ ಬಿಟಿ ಖಾತೆ
ಡಾ. ಯತೀಂದ್ರ ಸಿದ್ದರಾಮಯ್ಯ – ನಗರಾಭಿವೃದ್ದಿ, ಹಿಂದುಳಿದ ವರ್ಗ
ಕೃಷ್ಣ ಭೈರೇಗೌಡ- ಜಿಬಿಎ ಮತ್ತು ಹಣಕಾಸು ಸಾಧ್ಯತೆ
ಯು ಟಿ ಖಾದರ್ – ಆರೋಗ್ಯ ಇಲಾಖೆ
ಸತೀಶ್ ಜಾರಕಿಹೊಳಿ – ಲೋಕೋಪಯೋಗಿ ಇಲಾಖೆ
ಎಂ.ಬಿ ಪಾಟೀಲ್- ಭಾರಿ ಮತ್ತು ಮಧ್ಯಮ ಕೈಗಾರಿಕೆ
ಕೆಜೆ ಜಾರ್ಜ್ – ಇಂಧನ ಖಾತೆ
ಕೆಎಚ್. ಮುನಿಯಪ್ಪ – ಆಹಾರ ಮತ್ತು ನಾಗರಿಕ ಸರಬರಾಜು
ಮೂಲಗಳ ಪ್ರಕಾರ ಸಿಎಂ ಸೇರಿ ಒಟ್ಟು 14 ಮಂದಿ ಇಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು, ಜಾತಿವಾರು ಪ್ರಾತಿನಿಧ್ಯದ ಅಡಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನವನ್ನು ವಿಂಗಡಿಸಿದೆ. ಆ ಪೈಕಿ ದಲಿತ ಸಮುದಾಯಕ್ಕೆ 3 ಸಚಿವ ಸ್ಥಾನ, ಲಿಂಗಾಯತ ಸಮುದಾಯಕ್ಕೆ 3 ಸಚಿವ ಸ್ಥಾನ, ಒಕ್ಕಲಿಗ ಸಮುದಾಯಕ್ಕೆ (ಡಿಕೆ ಶಿವಕುಮಾರ್ ಸೇರಿ) 3 ಸಚಿವ ಸ್ಥಾನ, ಕುರುಬ ಸಮುದಾಯಕ್ಕೆ 2 ಸ್ಥಾನ ಪರಿಶಿಷ್ಟ ಪಂಗಡ, ಮುಸ್ಲಿಂ ಸಮುದಾಯ ಮತ್ತು ಕ್ರಿಶ್ಚಿಯನ್ ಸಮುದಾಯಕ್ಕೆ ತಲಾ 1 ಸಚಿವ ಸ್ಥಾನವನ್ನು ನೀಡಲಾಗಿದೆ. ಮೊದಲ ಹಂತದಲ್ಲಿ ಮಹಿಳೆಯರಿಗೆ ಯಾವುದೇ ಪ್ರಾತಿನಿಧ್ಯ ನೀಡಲಾಗಿಲ್ಲ.