Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಹೆಂಡತಿಯನ್ನೇ ₹50,000ಕ್ಕೆ ಮಾರಿದ ಗಂಡ : ನಾಪತ್ತೆ ಕೇಸ್ ಬೆನ್ನತ್ತಿದ ಪೊಲೀಸರಿಗೆ ಕಾದಿತ್ತು ಶಾಕ್!
ದೇಶಪ್ರಮುಖ

ಹೆಂಡತಿಯನ್ನೇ ₹50,000ಕ್ಕೆ ಮಾರಿದ ಗಂಡ : ನಾಪತ್ತೆ ಕೇಸ್ ಬೆನ್ನತ್ತಿದ ಪೊಲೀಸರಿಗೆ ಕಾದಿತ್ತು ಶಾಕ್!

Share
2 Min Read
SHARE

newsics.com/ನ್ಯೂಸಿಕ್ಸ್

ಹಣಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎನ್ನುವುದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇಲ್ಲೊಬ್ಬ ಪಾಪಿ ಪತಿರಾಯ ಹಣಕ್ಕಾಗಿ ತನ್ನ ಹೆಂಡತಿಯನ್ನೇ ಮಾರಿದ್ದಾನೆ. ಹೌದು ಗುಜರಾತ್‌ನ ಪಾಲನ್‌ಪುರದಲ್ಲಿ ನಡೆದಿರುವ ಈ ಒಂದು ಭಯಾನಕ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ.

ಪತ್ನಿಯನ್ನೇ ಪತಿಯೊಬ್ಬ ಕೇವಲ 50,000 ರೂಪಾಯಿಗೆ ಮಾರಾಟ ಮಾಡಿದ್ದು, ಮತ್ತೊಂದು ಮದುವೆಯಾಗುವ ಆಸೆಗೆ ಬಿದ್ದ ಪತಿ, ಸ್ನೇಹಿತರೊಂದಿಗೆ ಸೇರಿ ಪತ್ನಿಯನ್ನೇ ಮಾನವ ಕಳ್ಳಸಾಗಣೆಗೆ ದೂಡಿದ್ದಾನೆ.

ಇಷ್ಟೇ ಅಲ್ಲದೆ, ಮಾರಾಟವಾದ ಬಳಿಕ ಆ ಮಹಿಳೆ ಸತತ 10 ದಿನಗಳ ಕಾಲ ಸಾಮೂಹಿಕ ಅತ್ಯಾ*ಚಾರ ಹಾಗೂ ನರಕಯಾತನೆಗೆ ಒಳಗಾಗಿದ್ದಾಳೆ. ಸದ್ಯ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದು, ಪತಿ ಸೇರಿದಂತೆ 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಮೇ 11 ರಂದು ಪಾಲನ್‌ಪುರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪತಿಯೇ ಬಂದು, ನನ್ನ ಪತ್ನಿ ಮೇ 10 ರಿಂದ ಯಾರಿಗೂ ಹೇಳದೆ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದನು. ಆದರೆ, ಮಹಿಳೆಯ ಬಳಿ ಮೊಬೈಲ್ ಫೋನ್ ಇಲ್ಲದ ಕಾರಣ ಪೊಲೀಸರಿಗೆ ಪತಿಯ ನಡವಳಿಕೆಯ ಮೇಲೆ ಅನುಮಾನ ವ್ಯಕ್ತವಾಗಿತ್ತು.

ಪೊಲೀಸರು ತೀವ್ರ ವಿಚಾರಣೆ ಆರಂಭಿಸುತ್ತಿದ್ದಂತೆ ಹೆದರಿದ ಪತಿ ಅಲ್ಲಿಂದ ಪರಾರಿಯಾಗಿದ್ದನು. ತದನಂತರ ಪೊಲೀಸರು ತಾಂತ್ರಿಕ ಕಣ್ಗಾವಲು  ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಸಲಿ ಕರಾಳ ಕಥೆ ಬಯಲಾಗಿದೆ.

ಪೊಲೀಸ್ ತನಿಖೆಯ ಪ್ರಕಾರ, 30 ವರ್ಷದ ಆರೋಪಿ ಪತಿಗೆ ತನ್ನ 26 ವರ್ಷದ ಪತ್ನಿಯ ಮೇಲೆ ಜಿಗುಪ್ಸೆ ಉಂಟಾಗಿತ್ತು. ಅವಳನ್ನು ಮನೆಯಿಂದ ಹೊರಹಾಕಿ, ಮತ್ತೊಬ್ಬ ಮಹಿಳೆಯನ್ನು ಮನೆಗೆ ಕರೆತರಲು ಸಂಚು ರೂಪಿಸಿದ್ದನು. ಇದಕ್ಕಾಗಿ ತನ್ನ ಇಬ್ಬರು ಸ್ನೇಹಿತರ ಸಹಾಯ ಪಡೆದ ಆತ, ಮದುವೆಯ ವ್ಯವಸ್ಥೆ ಮಾಡುವ ನೆಪದಲ್ಲಿ ಪತ್ನಿಯನ್ನು ಬೇರೆ ಕಡೆಗೆ ಸಾಗಿಸಲು ಯೋಚಿಸಿದ್ದನು. ಮೇ 10 ರಂದು ಸ್ನೇಹಿತರು ಮಹಿಳೆಯನ್ನು ರಿಕ್ಷಾದಲ್ಲಿ ಫ್ಲಾಟ್‌ವೊಂದಕ್ಕೆ ಕರೆದೊಯ್ದು, ಅಲ್ಲಿ ಆಕೆಯ ಮೇಲೆ ಮೊದಲ ಬಾರಿಗೆ ಸಾಮೂಹಿಕವಾಗಿ ಅತ್ಯಾ*ಚಾರ ಎಸಗಿದ್ದಾರೆ.

ಅಲ್ಲಿಂದ ಮಹಿಳೆಯನ್ನು ಥರಾದ್ ಎಂಬ ಹಳ್ಳಿಯ ಒಂದು ಕುಟುಂಬಕ್ಕೆ ಮಾರಾಟ ಮಾಡಲು ಡೀಲ್ ಕುದುರಿಸಲಾಗಿತ್ತು. ಒಟ್ಟು 1.5 ಲಕ್ಷ ರೂಪಾಯಿಗೆ ಡೀಲ್ ಫಿಕ್ಸ್ ಆಗಿದ್ದು, ಅದರಲ್ಲಿ 50,000 ರೂಪಾಯಿ ಮುಂಗಡವನ್ನು ಪತಿ ಪಡೆದುಕೊಂಡಿದ್ದನು. ಥರಾದ್‌ಗೆ ಕರೆದೊಯ್ದ ಬಳಿಕ ಮಹಿಳೆಯನ್ನು ಒಂದು ಕೋಣೆಯಲ್ಲಿ ಕೂಡಿಹಾಕಿ, ಅಲ್ಲಿನ ಆರೋಪಿಗಳು ಸತತ ಒಂದು ವಾರಕ್ಕೂ ಹೆಚ್ಚು ಕಾಲ ಆಕೆಯ ಮೇಲೆ ನಿರಂತರವಾಗಿ ಅತ್ಯಾ*ಚಾರ ನಡೆಸಿದ್ದಾರೆ.

ಮೇ 21 ರಂದು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಮಹಿಳೆಯನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ. ಸದ್ಯ ಸಂತ್ರಸ್ತ ಮಹಿಳೆಗೆ ಸೂಕ್ತ ಆಪ್ತಸಮಾಲೋಚನೆ  ನಡೆಸಲಾಗಿದ್ದು, ನ್ಯಾಯಾಲಯಕ್ಕೆ ಅಗತ್ಯವಿರುವ ಎಲ್ಲಾ ಸಿಸಿಟಿವಿ ಮತ್ತು ಕಾಲ್ ರೆಕಾರ್ಡ್ಸ್ ಸಾಕ್ಷ್ಯಗಳನ್ನು ಪೊಲೀಸರು ಕಲೆಹಾಕಿದ್ದಾರೆ.

ಬೇರೆಯವರ ಮನೆಯಲ್ಲಿ ಪಾತ್ರೆ ತೊಳೆದು ಜೀವನ ಸಾಗಿಸುತ್ತಿದ್ದ ಮಹಿಳೆ ಈಗ ಶಾಸಕಿ

TAGGED:000: Shock awaits police pursuing missing person case!Husband sells wife for ₹50
Share This Article
Facebook Twitter Copy Link Print
Previous Article ಬೇರೆಯವರ ಮನೆಯಲ್ಲಿ ಪಾತ್ರೆ ತೊಳೆದು ಜೀವನ ಸಾಗಿಸುತ್ತಿದ್ದ ಮಹಿಳೆ ಈಗ ಸಚಿವೆ
Next Article ಅಪ್ರಾಪ್ತ ಬಾಲಕಿ ಮೇಲೆ ವೈದ್ಯನಿಂದಲೇ ಅತ್ಯಾಚಾರ

Popular Posts

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪ

1 Min Read

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read

ಮದುವೆ ಮಾಡಲ್ಲ, ನಾನು ಮಗಳಿಗೆ ಮದುವೆ ಮಾಡಿ ಕಳಿಸುವುದೇ ಇಲ್ಲ : ಸಾನ್ವಿ ಮದುವೆ ಬಗ್ಗೆ ಪ್ರಿಯಾ ಸುದೀಪ್ ಭಾವುಕ

1 Min Read

You Might Also Like

ಕರ್ನಾಟಕಪ್ರಮುಖ

6 ವರ್ಷದ ಬಾಲಕಿ ಕೊಲೆ ಕೇಸ್ : ಸತ್ತ ಮಗುವಿಗೆ ಸ್ನಾನ ಮಾಡಿಸಿ ರೆಡಿ ಮಾಡಿ ಆಸ್ಪತ್ರೆಗೆ ಕರೆದೋಯ್ದಿದ್ದ ತಾಯಿ, ಪ್ರಿಯಕರ

1 Min Read
ಕರ್ನಾಟಕದೇಶಪ್ರಮುಖ

ರೋಹಿಣಿ ಸಿಂಧೂರಿ- ರೂಪಾ ಮೌದ್ಗಿಲ್ ಜಗಳ ಅಂತ್ಯಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸಲಹೆ

1 Min Read
ಕರ್ನಾಟಕಪ್ರಮುಖ

ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿಯ ಮೃತದೇಹ ಪತ್ತೆ

1 Min Read
ಕರ್ನಾಟಕಪ್ರಮುಖ

Rain Alert ರಾಜ್ಯಾದ್ಯಂತ ಗುಡುಗು ಸಹಿತ ಮಳೆ : ಕರಾವಳಿ, ಮಲೆನಾಡಿಗೆ ಹೈ-ಅಲರ್ಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?