DK Shivakumar Oath ನಾಳೆ ಡಿ.ಕೆ. ಶಿವಕುಮಾರ್ ಪಟ್ಟಾಭಿಷೇಕ : ಲೋಕಭವನದಲ್ಲಿ ಭರ್ಜರಿ ಸಿದ್ಧತೆ

newsics.com/ನ್ಯೂಸಿಕ್ಸ್ ಬೆಂಗಳೂರು: ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನಾಳೆ ಅಧಿಕಾರ ಸ್ವೀಕರಿಸಲಿದ್ದಾರೆ. ನಾಳೆ ಸಂಜೆ 4:05ಕ್ಕೆ ರಾಜಧಾನಿಯ ಲೋಕಭವನದಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಅವರು ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಡಿಕೆಶಿ ಅವರ ಪಟ್ಟಾಭಿಷೇಕದ ಹಿನ್ನೆಲೆಯಲ್ಲಿ ಲೋಕಭವನದಲ್ಲಿ ಯುದ್ಧೋಪಾದಿಯಲ್ಲಿ ಸಿದ್ಧತೆಗಳು ಆರಂಭವಾಗಿವೆ. ಲೋಕಭವನ ಹಾಗೂ ವಿಧಾನಸೌಧದ ಸುತ್ತಮುತ್ತಲ ಪ್ರದೇಶಗಳಲ್ಲಿ ಡಿ.ಕೆ. ಶಿವಕುಮಾರ್ ಅವರ ಬೃಹತ್ ಕಟೌಟ್‌ಗಳು ಮತ್ತು ಬ್ಯಾನರ್‌ಗಳನ್ನು ಅಳವಡಿಸಲಾಗಿದ್ದು, ಇಡೀ ಪರಿಸರ ಹಬ್ಬದ ವಾತಾವರಣವನ್ನು ನೆನಪಿಸುತ್ತಿದೆ. ರಾಜ್ಯದ … Continue reading DK Shivakumar Oath ನಾಳೆ ಡಿ.ಕೆ. ಶಿವಕುಮಾರ್ ಪಟ್ಟಾಭಿಷೇಕ : ಲೋಕಭವನದಲ್ಲಿ ಭರ್ಜರಿ ಸಿದ್ಧತೆ