ಪರೀಕ್ಷೆ ರದ್ದು ಹಿನ್ನೆಲೆ: ಜೀವ ಕಳೆದುಕೊಂಡ ನೀಟ್ ಆಕಾಂಕ್ಷಿ

newsics.com/ನ್ಯೂಸಿಕ್ಸ್ ಲಖಿಂಪುರ: ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ನಂತರ ಕೇಂದ್ರ ಸರ್ಕಾರ ಪರೀಕ್ಷೆಯನ್ನು ರದ್ದುಗೊಳಿಸಿದ ಕಾರಣ ಗಂಗೋತ್ರಿನಗರ ಪ್ರದೇಶದ ತನ್ನ ಮನೆಯಲ್ಲಿ 21 ವರ್ಷದ ವೈದ್ಯಕೀಯ ಆಕಾಂಕ್ಷಿಯೊಬ್ಬರು ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರಿತಿಕ್ ಮಿಶ್ರಾ ಅವರು ಮೂರನೇ ಬಾರಿ ನೀಟ್ ಪರೀಕ್ಷೆ ಬರೆದಿದ್ದರು ಮತ್ತು ಈ ಬಾರಿ ತೇರ್ಗಡೆಯಾಗುವ ವಿಶ್ವಾಸವಿತ್ತು ಎಂದು ಅವರ ತಂದೆ ಹೇಳಿದ್ದಾರೆ. ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದ್ದು, ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ … Continue reading ಪರೀಕ್ಷೆ ರದ್ದು ಹಿನ್ನೆಲೆ: ಜೀವ ಕಳೆದುಕೊಂಡ ನೀಟ್ ಆಕಾಂಕ್ಷಿ