KGF actress Mouni Roy ಕೆಜಿಎಫ್ ನಟಿ ಮೌನಿ ರಾಯ್- ಉದ್ಯಮಿ ಸೂರಜ್ ನಂಬಿಯಾರ್ ನಡುವೆ ಬಿರುಕು! ವಿಚ್ಛೇದನ ಘೋಷಿಸಿದ ಜೋಡಿ

newsics.com/ನ್ಯೂಸಿಕ್ಸ್ ಬಾಲಿವುಡ್‌ನ ಜನಪ್ರಿಯ ನಟಿ ಮೌನಿ ರಾಯ್ (Mouni Roy) ಮತ್ತು ಉದ್ಯಮಿ ಸೂರಜ್ ನಂಬಿಯಾರ್ (Suraj Nambiar) ಅವರ ಸಂಸಾರದಲ್ಲಿ ಬಿರುಕು ಮೂಡಿದೆ. ಹಾಗಾಗಿ ತಮ್ಮ ನಾಲ್ಕು ವರ್ಷಗಳ ವೈವಾಹಿಕ ಜೀವನವನ್ನು ಕೊನೆಗೊಳಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ವಿಚ್ಛೇದನದ ಬಗ್ಗೆ ಗುರುವಾರ (ಮೇ 14) ಅಧಿಕೃತವಾಗಿ ಘೋಷಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ‌ ಜಂಟಿ ಹೇಳಿಕೆ ನೀಡಿರುವ ದಂಪತಿ, ‘ನಾವು ಪರಸ್ಪರ ಒಪ್ಪಿಗೆಯೊಂದಿಗೆ ಬೇರೆಯಾಗುತ್ತಿದ್ದೇವೆ’ ಎಂದು ಖಚಿತಪಡಿಸಿದ್ದಾರೆ. ಕೆಲವು ದಿನಗಳಿಂದ ಜನರಿಗೆ ಮೂಡಿದ್ದ ಅನುಮಾನ ಕಡೆಗೂ ನಿಜವಾಗಿದೆ. ತಮ್ಮ ವೈಯಕ್ತಿಕ … Continue reading KGF actress Mouni Roy ಕೆಜಿಎಫ್ ನಟಿ ಮೌನಿ ರಾಯ್- ಉದ್ಯಮಿ ಸೂರಜ್ ನಂಬಿಯಾರ್ ನಡುವೆ ಬಿರುಕು! ವಿಚ್ಛೇದನ ಘೋಷಿಸಿದ ಜೋಡಿ