ಸಚಿವ ಡಿ. ಸುಧಾಕರ್ ವಿಧಿವಶ: ಚಿತ್ರದುರ್ಗದಲ್ಲಿ ನಾಳೆ ಸಾರ್ವಜನಿಕ ರಜೆ

ಸಚಿವ ಡಿ. ಸುಧಾಕರ್ (65) ಇಂದು ಮುಂಜಾನೆ ಬೆಂಗಳೂರಿನ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಪಕ್ಷಾತೀತವಾಗಿ ಹಲವು ನಾಯಕರು ಸುಧಾಕರ್​​ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಓರ್ವ ಸ್ನೇಹಿತನಾಗಿ ಮತ್ತು ಸಹೋದ್ಯೋಗಿಯಾಗಿ ಅವರ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ. ಚಿತ್ರದುರ್ಗದ ಉಸ್ತುವಾರಿ ಸಚಿವರೂ ಆಗಿದ್ದ ಸುಧಾಕರ್​​ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಹಿರಿಯೂರಿನ ನೆಹರು ಮೈದಾನದಲ್ಲಿ ವ್ಯವಸ್ಥೆ … Continue reading ಸಚಿವ ಡಿ. ಸುಧಾಕರ್ ವಿಧಿವಶ: ಚಿತ್ರದುರ್ಗದಲ್ಲಿ ನಾಳೆ ಸಾರ್ವಜನಿಕ ರಜೆ