ಮೊದಲ ‘ಗೈಡ್ ಅಸ್ತ್ರ’ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಭಾರತವು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಮೊದಲ ‘ಗೈಡ್ ಅಸ್ತ್ರ’ದ ಪರೀಕ್ಷಾರ್ಥ ಪ್ರಯೋಗ ಒಡಿಶಾದ ಕರಾವಳಿ ತೀರದಲ್ಲಿ ಯಶಸ್ವಿಯಾಗಿ ನೆರವೇರಿತು. ಮಾರ್ಗದರ್ಶನವಿಲ್ಲದ ಸಿಡಿತಲೆಗಳನ್ನು ನಿಖರ ಮಾರ್ಗದರ್ಶಿತ ಶಸ್ತ್ರಾಸ್ತ್ರಗಳಾಗಿ ಪರಿವರ್ತಿಸುವುದಕ್ಕಾಗಿ ಟ್ಯಾಕ್ಟಿಕಲ್‌ ಅಡ್ವಾನ್ಸ್ ರೇಂಜ್ ಆಂಟೇಶನ್ (TARA) ಗೈಡ್ ಅಸ್ತ್ರವನ್ನು ಅಭಿವೃದ್ಧಿಪಡಿಸಲಾಗಿದೆ. ಇದು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಭಾರತದ ಮೊದಲ ಅಸ್ತ್ರವಾಗಿದೆ’ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ‘ಒಡಿಶಾದ ಕರಾವಳಿ ತೀರದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಮತ್ತು ಭಾರತೀಯ ವಾಯುಪಡೆ(ಐಎಎಫ್) ಜಂಟಿಯಾಗಿ ಮೊದಲ ಗೈಡ್ ಅಸ್ತ್ರದ ಹಾರಾಟವನ್ನು ಯಶಸ್ವಿಯಾಗಿ ಪೂರೈಸಿತು’ … Continue reading ಮೊದಲ ‘ಗೈಡ್ ಅಸ್ತ್ರ’ ಪರೀಕ್ಷಾರ್ಥ ಪ್ರಯೋಗ ಯಶಸ್ವಿ