newsics.com/ನ್ಯೂಸಿಕ್ಸ್
ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ ಹಾಗೂ ಪುದುಚೇರಿ ವಿಧಾನಸಭಾ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ. ಎಲ್ಲ ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದ್ದು, ಇಂದು ಮತ ಎಣಿಕೆ ಕಾರ್ಯ ಆರಂಭವಾಗಿದೆ. ತಮಿಳುನಾಡು ಕದನ ಕಣ ತೀವ್ರ ಕುತೂಹಲ ಕೆರಳಿಸಿದೆ.
https://youtube.com/shorts/1MGAmJmhYq0?si=nMc-nPA4I0KAHwKo
ತಮಿಳುನಾಡಿನಲ್ಲಿ ಬೆಳಗ್ಗೆ ಎಂಟು ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, 8.35ರ ಸಮಯಕ್ಕೆ ಡಿಎಂಕೆ 70, ಎಐಎಡಿಎಂಕೆ 7 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ನಟ ವಿಜಯ್ ಕಟ್ಟಿದ ಹೊಸ ಪಕ್ಷ ಟಿವಿಕೆ ಕೇವಲ 1 ಕ್ಷೇತ್ರದಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ.
ಒಟ್ಟು 234 ವಿಧಾನಸಭಾ ಕ್ಷೇತ್ರಗಳಿರುವ ತಮಿಳುನಾಡಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು 118 ಕ್ಷೇತ್ರಗಳನ್ನು ಗೆಲ್ಲಬೇಕಿದೆ.
ಸದ್ಯ ಅಂಚೆ ಮತ ಎಣಿಕೆಯಲ್ಲಿ ಟಿವಿಕೆ ಪಕ್ಷ ಭಾರೀ ಹಿನ್ನಡೆಯನ್ನು ಕಂಡಿದ್ದು, ಇನ್ನು ವಿಜಯ್ ಸ್ಪರ್ಧಿಸಿರುವ ಪೆರಂಬೂರಿನಲ್ಲಿ ತಾವೇ ಆರಂಭಿಕ ಹಿನ್ನಡೆಯನ್ನು ಅನುಭವಿಸಿದ್ದು, ಇದು ಪಕ್ಷಕ್ಕೆ ಭಾರೀ ಹಿನ್ನಡೆಯನ್ನು ತಂದಿದೆ.