Metro station closed ವಿದ್ಯುತ್ ವ್ಯತ್ಯಯ: ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ತಾತ್ಕಾಲಿಕ ಸ್ಥಗಿತ, ಇಲ್ಲೀಗ ರೈಲು ನಿಲ್ಲಲ್ಲ

newsics.com/ನ್ಯೂಸಿಕ್ಸ್  ಬೆಂಗಳೂರು: ವಿದ್ಯುತ್ ಪೂರೈಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಬಿಎಂಆರ್‌ಸಿಎಲ್ ಈ‌ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಈ ನಿಲ್ದಾಣದಲ್ಲಿ ರೈಲುಗಳು ನಿಲ್ಲುವುದಿಲ್ಲ. ವಿದ್ಯುತ್‌ ಪೂರೈಕೆ ಪುನಃಸ್ಥಾಪನೆಯಾದ ನಂತರ ಸಾಮಾನ್ಯ ನಿಲುಗಡೆ ಮತ್ತೆ ಆರಂಭವಾಗಲಿದೆ. ಪ್ರಯಾಣಿಕರು ಸಹಕರಿಸಬೇಕು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ. ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ ಎಂದು ಹೇಳಿದ್ದಾರೆ. ಸೋಮವಾರ ಬೆಳಗ್ಗೆ ದಿಢೀರ್‌ನೆ ಈ ಸಮಸ್ಯೆ ಉಂಟಾದ್ದರಿಂದ ಕಬ್ಬನ್‌ ಪಾರ್ಕ್‌ಗೆ ಇಳಿಯಬೇಕಿದ್ದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ಒಂದೇ ಮದುವೆ … Continue reading Metro station closed ವಿದ್ಯುತ್ ವ್ಯತ್ಯಯ: ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ತಾತ್ಕಾಲಿಕ ಸ್ಥಗಿತ, ಇಲ್ಲೀಗ ರೈಲು ನಿಲ್ಲಲ್ಲ