newsics.com/ನ್ಯೂಸಿಕ್ಸ್
ನವದೆಹಲಿ: ಆಸಿಡ್ ದಾಳಿಗೆ ಒಳಗಾಗಿ ಕೇವಲ ಬಾಹ್ಯವಾಗಿ ಗುರುತುಗಳು ಇಲ್ಲದಿದ್ದರೂ, ಆಂತರಿಕವಾಗಿ ಗಂಭೀರ ಗಾಯಗೊಂಡಿರುವ ಸಂತ್ರಸ್ತರಿಗೂ ವಿಕಲಚೇತನರ ಕಾಯ್ದೆಯಡಿ ಸೌಲಭ್ಯಗಳನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
https://youtube.com/shorts/1MGAmJmhYq0?si=nMc-nPA4I0KAHwKo
ಈ ಹಿಂದೆ ಆಸಿಡ್ ದಾಳಿಯಿಂದ ಮುಖ ಅಥವಾ ದೇಹ ವಿರೂಪಗೊಂಡವರಿಗೆ ಮಾತ್ರ ವಿಕಲಚೇತನ ಮಾನ್ಯತೆ ಸಿಗುತ್ತಿತ್ತು.ಆದರೆ ಈಗ ಆಸಿಡ್ ಕುಡಿಸಿರುವುದು ಅಥವಾ ಇತರ ಕಾರಣಗಳಿಂದ ಆಂತರಿಕ ಅಂಗಾಂಗಗಳಿಗೆ ಹಾನಿಯಾದ ಸಂತ್ರಸ್ತರಿಗೂ ‘ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆ-2016’ (RPwD Act) ಅಡಿಯಲ್ಲಿ ರಕ್ಷಣೆ ನೀಡಲು ನ್ಯಾಯಾಲಯ ಸೂಚಿಸಿದೆ.
ಈ ಆದೇಶದಿಂದಾಗಿ ಆಂತರಿಕ ಗಾಯಗೊಂಡ ಸಂತ್ರಸ್ತರಿಗೂ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ, ಉಚಿತ ಶಿಕ್ಷಣ ಮತ್ತು ಮಾಸಿಕ ಭತ್ಯೆಯಂತಹ ವಿಕಲಚೇತನರಿಗೆ ಸಿಗುವ ಎಲ್ಲಾ ಸೌಲಭ್ಯಗಳು ದೊರೆಯಲಿವೆ.
ಆಸಿಡ್ ದಾಳಿಗೊಳಗಾದ ಸಂತ್ರಸ್ತರಿಗೆ ಸೂಕ್ತ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸುವಾಗ ಸುಪ್ರೀಂ ಕೋರ್ಟ್ ಈ ನಿರ್ದೇಶನ ನೀಡಿದೆ.