newsics.com/ನ್ಯೂಸಿಕ್ಸ್
ಒಂದೆಡೆ ಹೆಚ್ಚುತ್ತಿರುವ ಅಡುಗೆ ಅನಿಲದ (ಸಿಲಿಂಡರ್) ಬೆಲೆ, ಮತ್ತೊಂದೆಡೆ ದಿನಬಳಕೆ ವಸ್ತುಗಳ ಜೊತೆಗೆ ತರಕಾರಿಗಳ ಬೆಲೆಯೂ ಒಮ್ಮೆಗೆ ಏರಿಕೆಯಾಗಿದೆ.
https://youtube.com/shorts/xzgXqaAsbcA?si=TkhVxPE1WLxdWyg8
ಅಡುಗೆ ಎಣ್ಣೆಗಳ ಬೆಲೆ ಗಗನಕ್ಕೇರುತ್ತಿದೆ. ಏಕಾಏಕಿ ಲೀಟರ್‌ಗೆ 30 ರೂಪಾಯಿವರೆಗೆ ಹೆಚ್ಚಾಗಿದೆ. ಕಳೆದ ಒಂದು ತಿಂಗಳಲ್ಲೇ ಒಂದು ಕಿಲೋ ಅಡುಗೆ ಎಣ್ಣೆಯ ಬೆಲೆ ಬರೋಬ್ಬರಿ ಶೇಕಡಾ 22 ರಷ್ಟು ಹೆಚ್ಚಾಗಿದೆ.
ಸನ್‌ಫ್ಲವರ್ ಆಯಿಲ್ ರೂ. 180 ರಿಂದ ರೂ. 200 ಕ್ಕೆ, ಪಾಮ್ ಆಯಿಲ್ ರೂ. 120 ರಿಂದ ರೂ. 145 ಕ್ಕೆ ಏರಿಕೆಯಾಗಿದೆ. ಇನ್ನು ಶೇಂಗಾ ಎಣ್ಣೆ (ಕಡಲೆಕಾಯಿ ಎಣ್ಣೆ) ದರ ಲೀಟರ್‌ಗೆ ರೂ. 15 ರಿಂದ ರೂ. 20 ರಷ್ಟು ಹೆಚ್ಚಾಗಿದೆ.
5 ಕಿಲೋ ಡಬ್ಬಿಯ ಬೆಲೆ ರೂ. 1000 ರಿಂದ ರೂ. 1150 ಕ್ಕೆ ಏರಿದರೆ, 15 ಕಿಲೋ ಟಿನ್ (ಹೋಲ್‌ಸೇಲ್) ಬೆಲೆ ರೂ. 2300 ರಿಂದ ರೂ. 2400 ರವರೆಗೆ ಹೆಚ್ಚಾಗಿದೆ. ಅದೇ ರೀತಿ ರೈಸ್ ಬ್ರಾನ್ ಎಣ್ಣೆಯ ಬೆಲೆ ಲೀಟರ್‌ಗೆ ರೂ. 150 ರಿಂದ ರೂ. 165 ಕ್ಕೆ ಏರಿಕೆಯಾಗಿದೆ. ವನಸ್ಪತಿ ಬೆಲೆ ಲೀಟರ್‌ಗೆ ರೂ. 130 ರಿಂದ ರೂ. 160 ಕ್ಕೆ ಹಾಗೂ ಸೋಯಾಬೀನ್ ಎಣ್ಣೆ ರೂ. 150 ರಿಂದ ರೂ. 170 ಕ್ಕೆ ತಲುಪಿದೆ. ಸಾಸಿವೆ ಎಣ್ಣೆ ರೂ. 130 ರಿಂದ ರೂ. 160 ಕ್ಕೆ ಏರಿದೆ.
ಅಡುಗೆ ಎಣ್ಣೆಗಳ ಬೆಲೆ ಹೀಗೆ ಹೆಚ್ಚುತ್ತಿರುವುದು ಸಾಮಾನ್ಯ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈಗಾಗಲೇ ಹೆಚ್ಚಾಗಿರುವ ಅಡುಗೆ ಅನಿಲದ ಬೆಲೆ ಮತ್ತು ದಿನದಿಂದ ದಿನಕ್ಕೆ ಏರುತ್ತಿರುವ ತರಕಾರಿಗಳ ಬೆಲೆಯ ನಡುವೆ ಅಡುಗೆ ಎಣ್ಣೆಯ ಬೆಲೆಯೂ ಹೆಚ್ಚಾಗಿರುವುದು ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.
https://www.newsics.com/2026/05/02/women-who-are-removing-their-uteruses-for-work/