newsics.com/ನ್ಯೂಸಿಕ್ಸ್
ಬೆಂಗಳೂರಿನ ಆಡುಗೋಡಿಯಲ್ಲಿ ಜಾರ್ಖಂಡ್ ಮೂಲದ ಟೆಕ್ಕಿ ಪೂಜಾ ದತ್ತಾ ನಿಗೂಢ ಸಾವಿನ ಪ್ರಕರಣ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಟೆಕ್ಕಿ ಪೂಜಾ ವರ್ಷಗಳ ಹಿಂದೆಯೇ ಕೆಲಸ ಬಿಟ್ಟಿದ್ರಂತೆ. ಹಾಗಾದ್ರೆ ಈಕೆ ಬಾಡಿಗೆ ಹೇಗೆ ಯಾರು ಕಟ್ತಿದ್ರು? ಒಂಟಿಯಾಗಿದ್ದ ಈಕೆ ಜೀವನ ಹೇಗೆ ಸಾಗ್ತಿತ್ತು ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ? ಈಕೆಯ ಮನೆಗೆ ಬಂದು ಹೋಗ್ತಿದ್ದವ ಯಾರು ಎನ್ನುವ ಬಗ್ಗೆ ಖಾಕಿ ನಡೆಸ್ತಿರುವಾಗಲೇ ಪೂಜಾಳದು ಕೊಲೆಯಲ್ಲ ಆತ್ಮಹತ್ಯೆ ಅನ್ನೋ ಅನುಮಾನ ಕೂಡ ದಟ್ಟವಾಗ್ತಿದೆ. ಸದ್ಯ, ಘಟನೆಯ ಪ್ರಾಥಮಿಕ ತನಿಖೆ ವೇಳೆ ಪೊಲೀಸರಿಗೆ ಹಲವು ಆಘಾತಕಾರಿ ಮಾಹಿತಿ ಲಭ್ಯವಾಗಿವೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಪೂಜಾ ದತ್ತಾ, ಸುಮಾರು ಒಂದು ವರ್ಷದ ಹಿಂದೆಯೇ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಅಂದಿನಿಂದ ಅವರು ಮೊಬೈಲ್ ಆಫ್ ಮಾಡಿಕೊಂಡಿದ್ದು, ಹಳೆಯ ಸಿಮ್ ಕಾರ್ಡ್ ಬದಲಿಸಿ ಹೊಸ ಸಿಮ್ ಬಳಸುತ್ತಿದ್ದರು.
ಪೂಜಾ ರೂಮ್ ತುಂಬೆಲ್ಲಾ ಚೀಟಿಗಳಿದ್ದು, ಕೆಲ ಬರಹ ಬರೆದು ಅರಿದು ಆಕೆಯೇ ಹರಿದು ಹಾಕಿದ್ದಳು ಎನ್ನಲಾಗ್ತಿದೆ. PEASE, EGO, TRUST, SATISFACTION, LOVE, SOLO LOVE, ಹೀಗೆಲ್ಲಾ ಬರೆದು ಗೋಡೆಗಳ ಮೇಲೂ ಪೂಜಾ ಅಂಟಿಸಿದ್ದಳಂತೆ. ಮೂರು ತಿಂಗಳಿಂದ ಯಾರ ಸಂಪರ್ಕದಲ್ಲೂ ಇಲ್ಲದ ಈಕೆ ಮನೆಯಲ್ಲಿ ಹೇಗಿದ್ದಳು ಅನ್ನೋದೇ ಅಚ್ಚರಿಯಾಗಿದೆ.
ಪೂಜಾ ದತ್ತಾ ಕಳೆದ ಒಂದು ವರ್ಷದಿಂದ ಕುಟುಂಬದವರು ಅಥವಾ ಸ್ನೇಹಿತರೊಂದಿಗೆ ಯಾವುದೇ ಸಂಪರ್ಕ ಹೊಂದಿರಲಿಲ್ಲ. ಮೂರು ತಿಂಗಳ ಹಿಂದೆ ಅವರ ಹೊಸ ಸಿಮ್‌ನ ವ್ಯಾಲಿಡಿಟಿ ಕೂಡ ಮುಗಿದಿದ್ದು, ಫೋನ್ ಸಂಪೂರ್ಣ ಸ್ಥಗಿತಗೊಂಡಿತ್ತು. ಅಕ್ಕಪಕ್ಕದ ನಿವಾಸಿಗಳೂ ಕೂಡ ಪೂಜಾ ಅವರನ್ನು ಕಳೆದ ಮೂರು ತಿಂಗಳಿನಿಂದ ನೋಡಿರಲಿಲ್ಲ ಎಂಬ ಮಾಹಿತಿ ಪ್ರಾಥಮಿಕ ತನಿಖೆ ವೇಳೆ ಪೊಲೀಸರಿಗೆ ಲಭ್ಯವಾಗಿದೆ.
ಇಂದು ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ತಡರಾತ್ರಿ ಜಾರ್ಖಂಡ್ನಿಂದ ಪೂಜಾ ಪೋಷಕರು ಆಗಮಿಸಿದ್ದಾರೆ. ಈಕೆ ಡಿಪ್ರೇಶನ್ನಿಂದ ಆತ್ಮಹತ್ಯೆ ಮಾಡಿಕೊಂಡಿರೋ ಅನುಮಾನವಿದೆ. ಆದ್ರೂ ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿರೋ ಪೊಲೀಸರು, ಮನೆ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.
ಟೆಕ್ಕಿ ಪೂಜಾ ದತ್ತ ಎಷ್ಟು ವರ್ಷಗಳಿಂದ ಈ ಮನೆಯಲ್ಲೇ ಇದ್ದರು, ಮನೆಗೆ ಯಾರಾದ್ರೂ ಬರ್ತಾ ಇದ್ರಾ? ಕೊನೆಯ ಬಾಡಿಗೆ ಯಾವತ್ತು ಕಟ್ಟಿದ್ದಾರೆ. ಆನ್ ಲೈನ್ ಅಥವಾ ಕ್ಯಾಶ್, ಯಾವ ರೀತಿ ಹಣ ಕೊಡ್ತಿದ್ರು ಎನ್ನುವ ಬಗ್ಗೆ ಕೂಡ ಮಾಲೀಕರನ್ನು ಪೊಲೀಸರು ತನಿಖೆಗೆ ಒಳಪಡಿಸಲಿದ್ದಾರೆ.
ಪೂಜಾ ಮೊಬೈಲ್ ನಂಬರ್ ನ ಒಂದು ವರ್ಷದ ಸಿಡಿಆರ್ ದಾಖಲೆಗಳನ್ನ ಪೊಲೀಸರು ಕೇಳಿದ್ದು, ಪೂಜಾ ಜೊತೆ ಯಾರೆಲ್ಲ ಸಂಪರ್ಕದಲ್ಲಿದ್ರು ಎಂದು ಪೊಲೀಸರು ತನಿಖೆ ನಡೆಸ್ತಿದ್ದಾರೆ. ವರ್ಷದ ಹಿಂದೆ ಕೆಲಸ ಬಿಟ್ಟಿದ್ದ ಪೂಜಾ ಬಳಿಕ ಕೆಲಸಕ್ಕೆ ಹೋಗ್ತಾ ಇರಲಿಲ್ಲ. ಹಾಗಾದ್ರೆ ಜೀವನಕ್ಕೆ ಹಣ ಎಲ್ಲಿಂದ ಬರ್ತಾ ಇತ್ತು. ಬಾಡಿಗೆ ಹೇಗೆ ಕಟ್ತಾ ಇದ್ದಳು ಅಂತಾನೂ ತನಿಖೆ ನಡೆದಿದೆ. ಪೂಜಾ ಅಕೌಂಟ್ ಡೀಟೆಲ್ಸ್ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ರು.
ಪೂಜಾ ಅಕೌಂಟ್ ಇರೋ ಬ್ಯಾಂಕ್ಗೂ ನೋಟಿಸ್ ನೀಡಲಾಗಿದ್ದು, ಕಳೆದ ಒಂದು ವರ್ಷದ ಹಣದ ವಹಿವಾಟು ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕ್ತಿದ್ದಾರೆ. ಇದರ ಜೊತೆಗೆ ಪೂಜಾ ಈ ಹಿಂದೆ ಕೆಲಸ ಮಾಡ್ತಾ ಇದ್ದ ಕಂಪನಿಯಲ್ಲಿ ಆಕೆ ಕೆಲಸ ಬಿಡಲು ಕಾರಣ ಏನು ಅನ್ನೋ ಬಗ್ಗೆ ತನಿಖೆ ನಡೆಯುತ್ತಿದ್ದು, ಶೀಘ್ರವೇ ಪೂಜಾ ಸಾವಿನ ರಹಸ್ಯ ಹೊರಬರಲಿದೆ.