3 ಬಾರಿ ಪಲ್ಟಿಯಾದ ಕಾರು; ಚಾಲಕ ಪ್ರಾಣಾಪಾಯದಿಂದ ಪಾರು!

newsics.com/ನ್ಯೂಸಿಕ್ಸ್ ಚಿಕ್ಕಮಗಳೂರು: ವೇಗವಾಗಿ ಚಲಿಸುತ್ತಿದ್ದ ಆಲ್ಟೋ ಕಾರೊಂದು ನಿಯಂತ್ರಣ ತಪ್ಪಿ ಟ್ರ್ಯಾಕ್ ಮೇಲೆಯೇ ಮೂರು ಬಾರಿ ಪಲ್ಟಿಯಾಗಿದ್ದು, ಚಾಲಕ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಈ ರೋಚಕ ರೇಸ್ ಹಮ್ಮಿಕೊಳ್ಳಲಾಗಿತ್ತು. ಮಲೆನಾಡಿನ ಮಣ್ಣಿನ ಹಾದಿಯಲ್ಲಿ ಎಂಜಿನ್‌ಗಳ ಗರ್ಜನೆ, ಧೂಳಿನ ನಡುವೆ ಚಾಲಕರು ತಮ್ಮ ಕೌಶಲ್ಯ ಪ್ರದರ್ಶಿಸುತ್ತಿದ್ದರು. ನೂರಾರು ಪ್ರೇಕ್ಷಕರು ಈ ಸಾಹಸವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಇದೇ ವೇಳೆ ಸ್ಪರ್ಧೆಯಲ್ಲಿದ್ದ ಆಲ್ಟೋ ಕಾರೊಂದು ತಿರುವಿನಲ್ಲಿ ಅತಿಯಾದ ವೇಗದಿಂದಾಗಿ ನಿಯಂತ್ರಣ ಕಳೆದುಕೊಂಡಿದೆ. … Continue reading 3 ಬಾರಿ ಪಲ್ಟಿಯಾದ ಕಾರು; ಚಾಲಕ ಪ್ರಾಣಾಪಾಯದಿಂದ ಪಾರು!