newsics.com
ಮೈಸೂರು: ಪ್ರಧಾನಿ ಆದಿಚುಂಚನಗಿರಿ ಮಠಕ್ಕೆ ದೇವಾಲಯ ಉದ್ಘಾಟನೆಗೆಂದು ಬಂದಿದ್ದಾಗ, ಎಚ್‌ಎ ಎಲ್ ಏರ್ಪೋರ್ಟ್ ನಲ್ಲಿ ಸಿಎಂ ಕಿವಿಯಲ್ಲಿ ಗುಸುಗುಸು ಮಾತನಾಡಿದ್ದರು. ಆ ಗುಟ್ಟು ಏನೆಂಬುದು ಎಂಬುದನ್ನು ಸಿಎಂ ಸಿದ್ದರಾಮಯ್ಯ ಇಂದು ಮೈಸೂರಲ್ಲಿ ರಟ್ಟು ಮಾಡಿದ್ದಾರೆ.
ಬೆಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಪ್ರಧಾನಿ ಮೋದಿ ಯಾವ ವಿಚಾರದ ಬಗ್ಗೆ ಮಾತಾಡಿದ್ರು ಎನ್ನುವ ಚರ್ಚೆ ಜೋರಾಗಿತ್ತು. ರಾಜಕೀಯ ಪಕ್ಷಗಳ ನಾಯಕರಲ್ಲೂ ತೀವ್ರ ಕುತೂಹಲ ಕೆರಳಿಸಿತ್ತು. ಇದೀಗ ಈ ಗುಟ್ಟನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗಪಡಿಸಿದ್ದಾರೆ.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ನಡುವೆ ಯಾವುದೇ ಗುಟ್ಟಾದ ಮಾತುಕತೆ ನಡೆದಿಲ್ಲ. ಮಹಿಳಾ ಮೀಸಲಾತಿ ಕುರಿತು ನನ್ನ ಅಭಿಪ್ರಾಯವನ್ನು ಪ್ರಧಾನಿ ಕೇಳಿದ್ರು, ನಾನು ಮಹಿಳಾ ಮೀಸಲಾತಿ ಪರವಾಗಿದ್ದೇನೆ ಅಂತಾ ಹೇಳಿದೆ ಅಷ್ಟೇ ಎಂದು ಸ್ಪಷ್ಟಪಡಿಸಿದ್ರು.
https://www.newsics.com/2026/04/20/nashik-tcs-female-employee-reveals-dark-experience/