newsics.com
ಟೆಹರಾನ್: ಒಮಾನ್ ಕೊಲ್ಲಿಯಲ್ಲಿ ಚೀನಾದಿಂದ ಇರಾನ್‌ಗೆ ಬರುತ್ತಿದ್ದ ಹಡಗಿನ ಮೇಲೆ ಅಮೆರಿಕ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಈ ಮೂಲಕ ಅಮೆರಿಕ ಕದನ ವಿರಾಮ ಉಲ್ಲಂಘಿಸಿದೆ ಎಂದು ಇರಾನ್ ಆರೋಪಿಸಿದೆ.
ಅಮೆರಿಕ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್‌ನ ಜಂಟಿ ಮಿಲಿಟರಿ ಕಮಾಂಡ್ ಆಗಿರುವ ‘ಖಾತಮ್ ಅಲ್-ಅನ್ಬಿಯಾ’ ಎಚ್ಚರಿಕೆ ನೀಡಿದೆ.
‘ಅಮೆರಿಕ ಸೇನೆಯ ಈ ಸಶಸ್ತ್ರ ಕಡಲ್ಗಳ್ಳತನದ ವಿರುದ್ಧ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಸಶಸ್ತ್ರ ಪಡೆಗಳು ಶೀಘ್ರವೇ ಪ್ರತಿಕ್ರಿಯಿಸಲಿದ್ದು, ಪ್ರತೀಕಾರ ತೀರಿಸಿಕೊಳ್ಳುತ್ತೇವೆ’ ಎಂದು ಖಾತಮ್ ಅಲ್-ಅನ್ಬಿಯಾ ವಕ್ತಾರರು ತಿಳಿಸಿದ್ದಾರೆ.
ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರದ ಮೇಲೆ ಇರಾನ್ ವಿಧಿಸಿರುವ ನಿರ್ಬಂಧ ಸೋಮವಾರವೂ ಮುಂದುವರಿದಿದೆ. ಜಲಸಂಧಿ ದಾಟಲು ಯತ್ನಿಸಿದ ಹಡಗುಗಳಿಗೆ ಎಚ್ಚರಿಕೆ ನೀಡಿ ವಾಪಸ್ ಕಳುಹಿಸಲಾಗುತ್ತಿದೆ.
https://www.newsics.com/2026/04/20/private-plane-crashes-in-chhattisgarh-many-feared-dead/