ರಸಗುಲ್ಲ ತಿಂದನೆಂದು ಬಾಲಕನನ್ನು ಉರಿಯುವ ತಂದೂರಿ ಒಲೆಗೆ ಎಸೆದ ಪಾಪಿ!

ರಸಗುಲ್ಲ ತಿಂದ ಎಂಬ ಕಾರಣಕ್ಕೆ ಅಡುಗೆ ಕೆಲಸದವನೊಬ್ಬ ಬಾಲಕನನ್ನು ಉರಿಯುವ ತಂದೂರಿ ಒಲೆಗೆ ಎಸೆದಿರುವ  ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯ ಈ ಕ್ರೂರ ಕೃತ್ಯದಿಂದಾಗಿ 11 ವರ್ಷದ ಬಾಲಕ ತೀವ್ರವಾಗಿ ಸುಟ್ಟುಹೋಗಿದ್ದು, ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಗೋಂಡಾ ಜಿಲ್ಲೆಯ ದುರ್ಜನ್‌ಪುರ ಮೂಲದ ಚಮನ್ ತನ್ನ ಅಜ್ಜಿಯ ಜೊತೆ ಬಸ್ತಿ ಜಿಲ್ಲೆಯ ಮಲೌಲಿ ಗೋಸಾಯಿ ಗ್ರಾಮದಲ್ಲಿ ನಡೆಯುತ್ತಿದ್ದ ಸಂಬಂಧಿಕರ ಮದುವೆಗೆ ತೆರಳಿದ್ದ. ಊಟದ ಕೌಂಟರ್‌ನಲ್ಲಿ ಬಾಲಕ ಪದೇ ಪದೇ ರಸಗುಲ್ಲ ಪಡೆಯುತ್ತಿದ್ದುದನ್ನು ಕಂಡು … Continue reading ರಸಗುಲ್ಲ ತಿಂದನೆಂದು ಬಾಲಕನನ್ನು ಉರಿಯುವ ತಂದೂರಿ ಒಲೆಗೆ ಎಸೆದ ಪಾಪಿ!