ಹುಲಿಕಲ್ ಘಾಟಿ ಕುಸಿತ: ಮೂವರ ಸಾವು, ಕಾಮಗಾರಿ ವೇಳೆ ದುರಂತ

newsics.com ಶಿವಮೊಗ್ಗ : ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟಿಯಲ್ಲಿ ಗುರುವಾರ ಸಂಜೆ ಸಂಭವಿಸಿದ ಗುಡ್ಡ ಕುಸಿತದಲ್ಲಿ ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಹುಲಿಕಲ್ ಘಾಟಿಯ ಚಂಡಿಕಾಂಬಾ ದೇವಾಲಯದ ಸಮೀಪವಿರುವ ಹೇರ್ ಪಿನ್ ತಿರುವಿನಲ್ಲಿ ರಸ್ತೆ ಅಗಲೀಕರಣ ಮತ್ತು ತಡೆಗೋಡೆ (Revetment Wall) ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಗುರುವಾರ ಸಂಜೆ ಸುಮಾರು 6:30ರ ವೇಳೆಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಏಕಾಏಕಿ ಗುಡ್ಡದ ಮಣ್ಣು ಕುಸಿದು ಬಿದ್ದಿದೆ. ಈ ವೇಳೆ ಕೆಲಸ ಮಾಡುತ್ತಿದ್ದ ಏಳು ಮಂದಿ ಕಾರ್ಮಿಕರು … Continue reading ಹುಲಿಕಲ್ ಘಾಟಿ ಕುಸಿತ: ಮೂವರ ಸಾವು, ಕಾಮಗಾರಿ ವೇಳೆ ದುರಂತ