Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಗೆಳೆಯರಾಗಿದ್ದವರೆ ಈಗ ಶತ್ರುಗಳು; 28ಕ್ಕೂ ಅಧಿಕ ಚಿಂಪಾಂಜಿ ಸಾವು
ದೇಶ

ಗೆಳೆಯರಾಗಿದ್ದವರೆ ಈಗ ಶತ್ರುಗಳು; 28ಕ್ಕೂ ಅಧಿಕ ಚಿಂಪಾಂಜಿ ಸಾವು

Share
2 Min Read
SHARE

ದಶಕಗಳ ಕಾಲ ಒಂದೇ ಕುಟುಂಬದಂತೆ ಬಾಳಿದ್ದ “ನ್ಗೊಗೊ” (Ngogo) ಚಿಂಪಾಂಜಿ ಸಮುದಾಯವು ಈಗ ಎರಡು ಬಣಗಳಾಗಿ ಸೀಳಿದ್ದು, ಪರಸ್ಪರ ಕೊಲೆ ಮಾಡುವ ಹಂತಕ್ಕೆ ತಲುಪಿದೆ. ಈ ಘಟನೆಯು ವಿಜ್ಞಾನಿಗಳಿಗೆ ಸಾಮಾಜಿಕ ಸಂಬಂಧಗಳು ಹೇಗೆ ಮುರಿದು ಬೀಳುತ್ತವೆ ಎಂಬ ಬಗ್ಗೆ ಬೆಚ್ಚಿಬೀಳಿಸುವ ಮಾಹಿತಿ ನೀಡುತ್ತಿದೆ.

ಸಂಶೋಧಕರ ಪ್ರಕಾರ, 2018ರಲ್ಲಿ ಬಹಿರಂಗವಾಗಿ ಆರಂಭವಾದ ಈ ಸಂಘರ್ಷದಲ್ಲಿ ಈವರೆಗೆ ಕನಿಷ್ಠ 28 ಚಿಂಪಾಂಜಿಗಳು ಹತ್ಯೆಯಾಗಿವೆ. ಇದರಲ್ಲಿ ಪುಟ್ಟ ಮರಿಗಳೂ ಸೇರಿವೆ ಎಂಬುದು ವಿಷಾದನೀಯ. ಇನ್ನು ಕೆಲವು ಚಿಂಪಾಂಜಿಗಳು ನಾಪತ್ತೆಯಾಗಿದ್ದು, ಅವುಗಳನ್ನು ಕೂಡ ಸಾಯಿಸಿರಬಹುದು ಎಂದು ಶಂಕಿಸಲಾಗಿದೆ.

ನ್ಯಾಷನಲ್ ಜಿಯೋಗ್ರಾಫಿಕ್ ವರದಿಯ ಪ್ರಕಾರ, ಈ ಸಮುದಾಯದಲ್ಲಿರುವ “ವೆಸ್ಟರ್ನ್” (ಪಶ್ಚಿಮ) ಎಂಬ ಸಣ್ಣ ಆದರೆ ಹೆಚ್ಚು ಆಕ್ರಮಣಕಾರಿ ಬಣವು ಈಗ ಸಂಘಟಿತವಾಗಿ ಗಸ್ತು ತಿರುಗುತ್ತಿದೆ. ಇವು ಸಾಲಾಗಿ ಸಾಗಿ “ಸೆಂಟ್ರಲ್” (ಮಧ್ಯ) ಎಂಬ ಬಣದ ಮೇಲೆ ಅನಿರೀಕ್ಷಿತ ದಾಳಿ ಮಾಡುತ್ತಿವೆ. ಒಮ್ಮೆ ಸಂಖ್ಯಾಬಲದಲ್ಲಿ ಪ್ರಬಲವಾಗಿದ್ದ ಸೆಂಟ್ರಲ್ ಬಣವು ಈಗ ವೆಸ್ಟರ್ನ್ ಬಣದ ಸತತ ದಾಳಿಯಿಂದಾಗಿ ತನ್ನ ಸದಸ್ಯರನ್ನು ಕಳೆದುಕೊಂಡು ಕ್ಷೀಣಿಸುತ್ತಿದೆ.

ಈ ಸಂಘರ್ಷದಲ್ಲಿ ಅತ್ಯಂತ ಆಘಾತಕಾರಿ ವಿಷಯವೆಂದರೆ, ಇದು ಅಪರಿಚಿತ ಗುಂಪುಗಳ ನಡುವಿನ ಕಾಳಗವಲ್ಲ. ಈ ಹಿಂದೆ ನ್ಗೊಗೊ ಸಮುದಾಯವು ಸುಮಾರು 200 ಸದಸ್ಯರಿರುವ ಒಂದೇ ಒಂದು ಕುಟುಂಬವಾಗಿತ್ತು. ದಶಕಗಳ ಕಾಲ ಒಟ್ಟಿಗೆ ಆಹಾರ ಹಂಚಿಕೊಂಡು, ಪರಸ್ಪರರ ಮೈ ಸವರಿಕೊಂಡು (Grooming) ಗಾಢವಾದ ಸಂಬಂಧ ಹೊಂದಿದ್ದ ಚಿಂಪಾಂಜಿಗಳೇ ಈಗ ಒಬ್ಬರನ್ನೊಬ್ಬರು ಕೊಲ್ಲುತ್ತಿವೆ. ಈ ಗೆಳೆತನ ಹಗೆತನವಾಗಿ ಬದಲಾದ ಪ್ರಕ್ರಿಯೆ ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಬಹಳ ನಿಧಾನವಾಗಿ ನಡೆದಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಕಣ್ಣೀರು ತರಿಸುವ ‘ಬಾಸಿ’ ಸಾವಿನ ಕಥೆ
2019ರಲ್ಲಿ ಸಂಭವಿಸಿದ ‘ಬಾಸಿ’ ಎಂಬ ಗಂಡು ಚಿಂಪಾಂಜಿಯ ಸಾವು ಈ ಯುದ್ಧದ ಕ್ರೌರ್ಯಕ್ಕೆ ಸಾಕ್ಷಿಯಾಗಿದೆ. ಬಾಸಿಯನ್ನು ಎದುರಾಳಿ ಬಣದ ಸದಸ್ಯರು ಸುತ್ತುವರಿದು ಮನಬಂದಂತೆ ದಾಳಿ ಮಾಡಿದರು. ಬಾಸಿಗೆ ಹೊಡೆದವರೆಲ್ಲಾ ಅವನು ಹುಟ್ಟಿದಾಗಿನಿಂದ ಜೊತೆಗಿದ್ದವರೇ ಆಗಿದ್ದರು! ತೀವ್ರವಾಗಿ ಗಾಯಗೊಂಡ ಬಾಸಿ ಸಾವನ್ನಪ್ಪುವಾಗ, ಅವನ ಹಳೆಯ ಗೆಳೆಯನೊಬ್ಬ ಅವನ ಪಕ್ಕದಲ್ಲೇ ಇದ್ದು, ಅವನು ನಡೆಯಲು ಸಹಾಯ ಮಾಡಲು ಪ್ರಯತ್ನಿಸಿದ ಮತ್ತು ಬಾಸಿ ಕೊನೆಯುಸಿರು ಎಳೆಯುವವರೆಗೂ ಅವನ ಜೊತೆಗೇ ಇದ್ದ ದೃಶ್ಯ ಸಂಶೋಧಕರ ಕಣ್ಣನ್ನು ಒದ್ದೆ ಮಾಡಿತ್ತು.

ಮನಸ್ತಾಪಕ್ಕೆ ಕಾರಣವೇನು?
ಈ ಯುದ್ಧಕ್ಕೆ ಸಾಮಾಜಿಕ ಅಸ್ಥಿರತೆ ಮತ್ತು ಹವಾಮಾನದ ಒತ್ತಡ ಕಾರಣವಿರಬಹುದು ಎಂದು ವಿಜ್ಞಾನಿಗಳು ನಂಬಿದ್ದಾರೆ. 2014ರ ಅವಧಿಯಲ್ಲಿ ಗುಂಪಿನಲ್ಲಿದ್ದ ಹಿರಿಯ ಮತ್ತು ಪ್ರಭಾವಿ ಚಿಂಪಾಂಜಿಗಳು ಅನಾರೋಗ್ಯದಿಂದ ಮೃತಪಟ್ಟವು. ಇವು ಇಡೀ ಗುಂಪನ್ನು ಬೆಸೆಯುವ ಶಕ್ತಿಯಾಗಿದ್ದವು. ಹೊಸ ‘ಆಲ್ಫಾ ಮೇಲ್’ (ನಾಯಕ) ಅಧಿಕಾರಕ್ಕೆ ಬಂದಾಗ ಹಳೆಯ ವ್ಯವಸ್ಥೆಯಲ್ಲಿ ಗೊಂದಲ ಉಂಟಾಯಿತು. ದಾಳಿ ಆರಂಭವಾಗುವ ಮೊದಲೇ ವಿಜ್ಞಾನಿಗಳು ಒಂದು ಬದಲಾವಣೆ ಗಮನಿಸಿದ್ದರು. ಚಿಂಪಾಂಜಿಗಳು ಹಳೆಯಂತೆ ಪರಸ್ಪರ ಬೆರೆಯುವುದನ್ನು ನಿಲ್ಲಿಸಿದ್ದವು. ಗುಂಪುಗಳ ನಡುವೆ ಸಂವಹನ ಕಡಿಮೆಯಾಗಿ ದೂರ ಉಳಿಯಲು ಆರಂಭಿಸಿದವು. ಆ ಅಂತರವೇ ಇಂದು ರಕ್ತಪಾತಕ್ಕೆ ದಾರಿಯಾಗಿದೆ.

TAGGED:Former friends now enemies; over 28 chimpanzees die
Share This Article
Facebook Twitter Copy Link Print
Previous Article ದೋಸೆ ತಿಂದು ಮಕ್ಕಳು ಸಾವನಪ್ಪಿದ್ದ ಪ್ರಕರಣಕ್ಕೆ ಟ್ವಿಸ್ಟ್​!
Next Article ಮದುವೆ ನಿರಾಕರಿಸಿದ್ದಕ್ಕೆ ಯುವತಿಗೆ ‘ಹೆಚ್‌ಐವಿ’ ರಕ್ತ ಚುಚ್ಚಿದ ಕಿರಾತಕ: ಆಗಿದ್ದೇನು?

Popular Posts

Gold Ornaments ನಿಮ್ಮ ಹಳೆಯ ಚಿನ್ನದ ಆಭರಣಗಳು ಮತ್ತೆ ಹೊಸದರಂತೆ ಹೊಳೆಯಬೇಕೇ? ಇಲ್ಲಿದೆ ಸೂಪರ್ ಟಿಪ್ಸ್

2 Min Read

Home Decor ನಿಮ್ಮ ಮನೆಯಲ್ಲೂ ಮಳೆಗಾಲದ ಇರುವೆ-ನೊಣಗಳ ಕಾಟವೇ? ಇಲ್ಲಿದೆ ಸಿಂಪಲ್ ‘ಕಿಚನ್ ಕ್ಲೀನಿಂಗ್’ ಹ್ಯಾಕ್ಸ್

1 Min Read

Ration news ಇನ್ಮುಂದೆ ಬೆಳಗಿನಿಂದ ರಾತ್ರಿವರೆಗೂ ಸಿಗುತ್ತೆ ಪಡಿತರ! ನ್ಯಾಯಬೆಲೆ ಅಂಗಡಿಗಳಿಗೆ ಸರ್ಕಾರದ ಸೂಚನೆ ಏನು?

1 Min Read

Malvan launched ಕಾರವಾರದಲ್ಲಿ ಐಎನ್‌ಎಸ್ ಮಾಲ್ವಣ್ ಲೋಕಾರ್ಪಣೆ, ಹೇಗಿದೆ ಯುದ್ಧನೌಕೆ?

1 Min Read

You Might Also Like

ಪ್ರಮುಖದೇಶ

DMRC Alert 16 ಪ್ರಮುಖ ಮೆಟ್ರೋ ನಿಲ್ದಾಣಗಳು ಮುಂದಿನ ಆದೇಶದವರೆಗೆ ಬಂದ್

1 Min Read
ಪ್ರಮುಖದೇಶ

Flood ಮೇಘಸ್ಫೋಟಕ್ಕೆ ಭೀಕರ ಪ್ರವಾಹ; ಒಂದೇ ದಿನ 21 ಬಲಿ, ಸಂಕಷ್ಟದಲ್ಲಿ 5.64 ಲಕ್ಷ ಜನ

2 Min Read
ಪ್ರಮುಖದೇಶ

NHAI Local Pass ಇನ್ಮುಂದೆ ಕಚೇರಿಗೆ ಅಲೆಯಬೇಕಿಲ್ಲ; ಮೊಬೈಲ್‌ನಲ್ಲೇ ಸಿಗಲಿದೆ NHAI ಡಿಜಿಟಲ್ ಲೋಕಲ್ ಟೋಲ್ ಪಾಸ್

3 Min Read
ಪ್ರಮುಖCrimeದೇಶ

Jammu Kashmir ಭೀಕರ ಉಗ್ರರ ದಾಳಿ; ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಹುತಾತ್ಮ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?