ವೃದ್ಧನ ಬರ್ಬರ ಹತ್ಯೆ ಮಾಡಿ ಸುಟ್ಟು ಹಾಕಿದ ದುಷ್ಕರ್ಮಿಗಳು

newsics.com ವಿಜಯಪುರ: ದುಷ್ಕರ್ಮಿಗಳು ವೃದ್ಧನ ಬರ್ಬರ ಹತ್ಯೆಗೈದು, ಸುಟ್ಟು ಹಾಕಿರುವ ಘಟನೆ ಜಿಲ್ಲೆಯ ಭೀಮಾತೀರದ ಇಂಡಿ ತಾಲೂಕಿನ ತೆನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗುರುಬಸಯ್ಯ ರೇವಯ್ಯ ಹಿರೇಮಠ (72) ಮೃತಪಟ್ಟ ವೃದ್ಧ ಎಂದು ತಿಳಿದು ಬಂದಿದೆ. ಗುರುಬಸಯ್ಯ ಈತನಿಗೆ ಹತ್ಯೆಗೈದು ಮುಖಕ್ಕೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿಯಾಗಿದ್ದು, ಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರ್ಥಿಕ ಬಿಕ್ಕಟ್ಟು; ಬಂಗಾರದ ಮಾರಾಟಕ್ಕೆ ಮುಂದಾದ … Continue reading ವೃದ್ಧನ ಬರ್ಬರ ಹತ್ಯೆ ಮಾಡಿ ಸುಟ್ಟು ಹಾಕಿದ ದುಷ್ಕರ್ಮಿಗಳು