Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಮುಂದಿನ 5 ವರ್ಷಗಳಲ್ಲಿ ಚಿನ್ನದ ಬೆಲೆ ಕುಸಿಯುತ್ತಾ? ತಜ್ಞರ ಶಾಕಿಂಗ್ ವರದಿ!
ಕರ್ನಾಟಕದೇಶಪ್ರಮುಖ

ಮುಂದಿನ 5 ವರ್ಷಗಳಲ್ಲಿ ಚಿನ್ನದ ಬೆಲೆ ಕುಸಿಯುತ್ತಾ? ತಜ್ಞರ ಶಾಕಿಂಗ್ ವರದಿ!

Share
2 Min Read
SHARE

https://youtube.com/shorts/7-1-Ue0Sh8o?si=IPl4cpVzjeJG3YdO

newsics.com

ಅಮೆರಿಕ ದಾಳಿ ನಿಲ್ಲಿಸಿದ್ದರೂ, ಇಸ್ರೇಲ್ ದಾಳಿ ಹಾಗೂ ಇರಾನ್ ಪ್ರತಿದಾಳಿ ಮುಂದುವರಿದಿರುವುದರಿಂದ ಜಾಗತಿಕ ಅನಿಶ್ಚಿತತೆಯ ಕಾರಣಕ್ಕೆ, ಚಿನ್ನ ಬೆಳ್ಳಿ ದರದಲ್ಲಿ ಭಾರಿ ಏರುಪೇರಾಗುತ್ತಿದೆ.

ಈ ಸಂದರ್ಭದಲ್ಲಿ ಫಂಡ್ಸ್ ಇಂಡಿಯಾ ಗ್ರೂಪ್ನ ಸಿಇಒ ಅಕ್ಷಯ್ ಸಬ್ರು ಮನಿ ಕಂಟ್ರೋಲ್‌ ನೊಂದಿಗೆ ಮಾತನಾಡಿದ್ದು ಚಿನ್ನದ ಬೆಲೆ ಬಗ್ಗೆ ಶಾಕಿಂಗ್ ಮಾಹಿತಿ ನೀಡಿದ್ದಾರೆ. ಯುದ್ಧದ ಸಮಯದಲ್ಲಿ ಭಾರತದಲ್ಲಿ ಬದಲಾಗುತ್ತಿರುವ ಹೂಡಿಕೆ ಪ್ರವೃತ್ತಿಗಳ ವಿಶ್ಲೇಷಣೆಯನ್ನು ನೀಡಿದ್ರು. ಹೂಡಿಕೆದಾರರು, ವಿಶೇಷವಾಗಿ ಸಣ್ಣ ನಗರಗಳಿಂದ ಬರುವ ಬೃಹತ್ ಒಳಹರಿವು ಮಾರುಕಟ್ಟೆಯ ಮುಖವನ್ನು ಬದಲಾಯಿಸುತ್ತಿದೆ ಎಂದಿದ್ದಾರೆ.

ಮಾರುಕಟ್ಟೆಯ ಏರಿಳಿತಗಳು ಪ್ರಯಾಣದಲ್ಲಿ ಮಹತ್ವದ ತಿರುವುಗಳಂತೆ. ಅವು ಹೂಡಿಕೆದಾರರಿಗೆ ಉತ್ತಮ ಕಂಪನಿಗಳ ಷೇರುಗಳನ್ನು ಕಡಿಮೆ ಬೆಲೆಗೆ ಖರೀದಿಸಲು ಅವಕಾಶವನ್ನು ಒದಗಿಸುತ್ತವೆ. ಸಣ್ಣ ಕಾರಣಗಳಿಂದ ರಾತ್ರೋರಾತ್ರಿ ಕಡಿಮೆಯಾಗುವುದಿಲ್ಲ ಎಂಬುದನ್ನು ಹೂಡಿಕೆದಾರರು ಅರಿತುಕೊಳ್ಳಬೇಕು ಎಂದು ಅಕ್ಷಯ್ ಸಪ್ರು ಹೇಳಿದರು.

ಮುಂದಿನ ಐದು ವರ್ಷಗಳಲ್ಲಿ ಚಿನ್ನದ ಮೌಲ್ಯ ಹೆಚ್ಚಿದ್ರೂ ಬೆಲೆಗಳಲ್ಲಿ ತ್ರೀವ ಕುಸಿತವಾಗಲಿದೆ ಎಂದು ತಜ್ಞರು ಹೇಳ್ತಿದ್ದಾರೆ. ಚಿನ್ನವನ್ನು ಹಂತ ಹಂತವಾಗಿ ಖರೀದಿಸುವ ಮೂಲಕ ಲಾಭ ಪಡೆಯಬಹುದು ಅಂತಾರೆ ತಜ್ಞರು.

ಬೆಲೆ ಏರಿಕೆ-ಇಳಿಕೆ ಪ್ರವೃತ್ತಿ ಮುಂದುವರಿದ್ರೆ, 2030ಕ್ಕೆ ದೇಶೀಯ ಚಿನ್ನದ ಬೆಲೆಗಳು 10 ಗ್ರಾಂಗೆ ರೂ. 1,68,000 ರಿಂದ ರೂ. 2,25,000 ವರೆಗೆ ತಲುಪಬಹುದು. ಜಾಗತಿಕ ಉದ್ವಿಗ್ನತೆ, ಕೇಂದ್ರ ಬ್ಯಾಂಕ್ ಖರೀದಿಗಳು, ಕರೆನ್ಸಿ ಚಂಚಲತೆ ಮತ್ತು ಹೂಡಿಕೆ ಪ್ರವೃತ್ತಿಗಳಂತಹ ಪ್ರಮುಖ ಆರ್ಥಿಕ ಅಂಶಗಳನ್ನು ಪರಿಗಣಿಸಿ ಈ ಅಂದಾಜನ್ನು ಮಾಡಲಾಗಿದೆ.

ಇತ್ತೀಚೆಗೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಗಗನಕ್ಕೇರಿವೆ. ಆದ್ರೆ, ಚಿನ್ನದ ಏರಿಕೆ ಹಂತ ಪೂರ್ಣಗೊಳಿದೆ ಎಂದು ಅಕ್ಷಯ್ ಸಪ್ರು ಹೇಳ್ತಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಚಿನ್ನವು ಹಿಂದಿನಂತೆ ಹೆಚ್ಚಿನ ಲಾಭವನ್ನ ನೀಡದಿರಬಹುದು. ನಿಮ್ಮ ಹೂಡಿಕೆ ಬಂಡವಾಳದಲ್ಲಿ ಈಗಾಗಲೇ ಶೇಕಡಾ 5 ರಿಂದ 10 ರಷ್ಟು ಚಿನ್ನವಿದ್ದರೆ, ಅದನ್ನು ಬದಲಾಯಿಸುವ ಅಗತ್ಯವಿಲ್ಲ. ದೊಡ್ಡ ಪ್ರಮಾಣದಲ್ಲಿ ಚಿನ್ನದಲ್ಲಿ ಹೂಡಿಕೆ ಮಾಡುವ ಮೊದಲು ನೀವು ಯೋಚಿಸಬೇಕು. SIP ಮೂಲಕ ಸ್ವಲ್ಪ ಸ್ವಲ್ಪವೇ ಖರೀದಿಸುವುದು ಉತ್ತಮ. ಮತ್ತೊಂದೆಡೆ, ಬೆಳ್ಳಿಯ ಬೆಲೆಗಳು ತೀವ್ರವಾಗಿ ಏರಿಳಿತಗೊಳ್ಳುವುದರಿಂದ, ಸಾಮಾನ್ಯ ಹೂಡಿಕೆದಾರರು ಅದರಿಂದ ದೂರವಿರುವುದು ಉತ್ತಮ” ಎಂದು ಸಪ್ರು ಸೂಚಿಸುತ್ತಾರೆ.

ಕಳೆದ ಏಳು ವರ್ಷಗಳ ಅಂಕಿಅಂಶಗಳನ್ನು ನಾವು ನೋಡಿದ್ರೆ, ಈ ತಂತ್ರವು ನಿಫ್ಟಿ 50 ನಂತಹ ಸೂಚ್ಯಂಕಗಳಿಗಿಂತ 3 ರಿಂದ 5 ಪ್ರತಿಶತದಷ್ಟು ಹೆಚ್ಚಿನ ಆದಾಯವನ್ನು ನೀಡಿದೆ. ಮಾರುಕಟ್ಟೆಯಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ಬೆನ್ನಟ್ಟುವ ಬದಲು ನಾವು ಈ ಶಿಸ್ತುಬದ್ಧ ವಿಧಾನವನ್ನು ಫಾಲೋ ಮಾಡಿದ್ರೆ ಉತ್ತಮ.

https://www.newsics.com/2026/03/28/bay-of-bengal-depression-thunderstorms-forecast-in-the-state/

TAGGED:Will the price of gold fall in the next 5 years?
Share This Article
Facebook Twitter Copy Link Print
Previous Article ಬಂಗಾಳಕೊಲ್ಲಿ ವಾಯುಭಾರ ಕುಸಿತ : ರಾಜ್ಯದಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ
Next Article ವಿವಾಹಿತ ಪುರುಷ ಮಹಿಳೆಯೊಂದಿಗೆ ಲಿವ್-ಇನ್ ಸಂಬಂಧದಲ್ಲಿರುವುದು ಕಾನೂನಿನ ಅಡಿಯಲ್ಲಿ ಅಪರಾಧವಲ್ಲ : ಹೈಕೋರ್ಟ್ ತೀರ್ಪು

Popular Posts

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read

ಹೃದಯ ಸಂಬಂಧಿ ಕಾಯಿಲೆಗೆ ಮುಖ್ಯ ಕಾರಣವೇನು?; ಯಾವಾಗ ಪರೀಕ್ಷೆ ಮಾಡಿಸಿಕೊಳ್ಳಬೇಕು?

1 Min Read

You Might Also Like

ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read
ಪ್ರಮುಖ

ಮನೆಗೆಲಸ ಮಾಡುತ್ತಲೇ ಗಂಟೆಗೆ ₹250 ಗಳಿಸಬಹುದು; ಈ ಟ್ರಿಕ್ ಟ್ರೈ ಮಾಡಿ

2 Min Read
ಪ್ರಮುಖಮನರಂಜನೆ

ನಟ ದರ್ಶನ್ ಪತ್ನಿ, ವಿಜಯಲಕ್ಷ್ಮಿ ಬಾಸ್ ಚಿತ್ರದ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿದ್ದು ಯಾಕೆ?

2 Min Read
ಪ್ರಮುಖ

ಅಯೋಧ್ಯೆಯ ರಾಮ ಮಂದಿರ ದೇಣಿಗೆ ವಿವಾದ ; 1250 ಚಿನ್ನ, ವಜ್ರಗಳಿಂದ ಅಲಂಕರಿಸಿದ ಇಟ್ಟಿಗೆಗಳು ನಾಪತ್ತೆ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?