ಮದುವೆಗೆ ಹೊರಡಬೇಕೆನ್ನುವಷ್ಟರಲ್ಲಿ ಸಂಪ್ಗೆ ಮಗು ಬಿದ್ದು ಸಾವು

newsics.com ಸಂಪ್ಗೆ ಬಿದ್ದು ಎರಡೂವರೆ ವರ್ಷದ ಮಗು ಸಾವನ್ನಪ್ಪಿರುವಂತಹ (death) ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ. ಅಣ್ಣಯ್ಯ ಮತ್ತು ಋತು ದಂಪತಿಯ ಎರಡೂವರೆ ವರ್ಷದ ಚಿರಾಗ್ ಮೃತ ಮಗು. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸದ್ಯ ಮೃತ ಮಗುವನ್ನು ನೆಲಮಂಗಲ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ನಡೆದಿದ್ದೇನು? ಬೆಂಗಳೂರು ಉತ್ತರ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಡರಹಳ್ಳಿಯ ನಿವಾಸಿಗಳಾದ ಅಣ್ಣಯ್ಯ ಮತ್ತು ಋತು ದಂಪತಿ ನಿನ್ನೆ ಮದುವೆ ಹಿನ್ನೆಲೆ ಕುಟುಂಬಸ್ಥರು ರೆಡಿಯಾಗುತ್ತಿದ್ದರು. … Continue reading ಮದುವೆಗೆ ಹೊರಡಬೇಕೆನ್ನುವಷ್ಟರಲ್ಲಿ ಸಂಪ್ಗೆ ಮಗು ಬಿದ್ದು ಸಾವು