https://youtube.com/shorts/tAQS6h_SZWA?si=f1t_2CedcPuoHdto
Subscribe ನ್ಯೂಸಿಕ್ಸ್ ಕನ್ನಡ
newsics.com
ಖ್ಯಾತ ನಟ ದಳಪತಿ ವಿಜಯ್ ಅವರ ಸಂಸಾರದ ಜಗಳ ಈಗ ಕೋರ್ಟ್ ಮೆಟ್ಟಿಲೇರಿದೆ. ವಿಚ್ಛೇದನಕ್ಕೆ ಮನವಿ ಮಾಡಿ ವಿಜಯ್ ಪತ್ನಿ ಸಂಗೀತಾ ಅವರು ಅರ್ಜಿ ಸಲ್ಲಿಸಿದ್ದಾರೆ. ಡಿವೋರ್ಸ್ ಪಡೆಯಲು ಜನವರಿ 27ರಂದು ಅವರು ಕೌಟುಂಬಿಕ ಕೋರ್ಟ್ನಲ್ಲಿ ಅರ್ಜಿ ಹಾಕಿರುವುದು ಖಚಿತವಾಗಿದೆ.
ಈ ಬೆನ್ನಲ್ಲೇ ವಿಜಯ್ ಮತ್ತು ಸಂಗೀತಾ ದಂಪತಿಯ ಪುತ್ರ ಜೇಸನ್ ಸಂಜಯ್ ಬಗ್ಗೆ ಒಂದು ವಿಷಯ ಬಹಿರಂಗ ಆಗಿದೆ. ತಂದೆಯ ಇನ್ಸ್ಟಾಗ್ರಾಮ್ ಖಾತೆಯನ್ನು ಜೇಸನ್ ಸಂಜಯ್ ಅನ್ಫಾಲೋ ಮಾಡಿದ್ದಾರೆ.
ಇದು ಕುಟುಂಬದೊಳಗಿನ ಭಿನ್ನಾಭಿಪ್ರಾಯದ ಸೂಚನೆ ಇರಬಹುದೇ ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಲೈಕಾ ಪ್ರೊಡಕ್ಷನ್ಸ್ ಅಡಿಯಲ್ಲಿ ಸಂಜಯ್ ತಮ್ಮ ಚೊಚ್ಚಲ ಚಿತ್ರವನ್ನು ನಿರ್ದೇಶಿಸಲು ಸಜ್ಜಾಗುತ್ತಿದ್ದಾರೆ. ಈ ಹಂತದಲ್ಲಿ ಅವರು ತಂದೆಯಿಂದ ಅಂತರ ಕಾಯ್ದುಕೊಳ್ಳುತ್ತಿರುವುದು ಕುತೂಹಲ ಮೂಡಿಸಿದೆ.
ತಮ್ಮ ನೆಚ್ಚಿನ ನಟ ರಾಜಕೀಯಕ್ಕೆ (ಟಿವಿಕೆ ಪಕ್ಷದ ಮೂಲಕ) ಪ್ರವೇಶಿಸುತ್ತಿರುವ ಈ ಸಂದರ್ಭದಲ್ಲಿ ಕುಟುಂಬದಲ್ಲಿ ಇಂತಹ ಸಮಸ್ಯೆಗಳು ಎದುರಾಗಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಆದರೆ ವಿಜಯ್ ಆಗಲಿ ಅಥವಾ ಅವರ ಕುಟುಂಬದ ಸದಸ್ಯರಾಗಲಿ ಈ ವದಂತಿಗಳ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.