Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಸಿಎಸ್ ಶಾಲಿನಿ ರಜನೀಶ್‌ಗೆ ಕ್ಷಮೆ ಕೇಳಿದ ಸ್ನೇಹಮಯಿ ಕೃಷ್ಣ ;ದಾರಿ ತಪ್ಪಿಸಿದ ವಿನೋದ್ ಹೆಸರು ರಿವೀಲ್!
ಕರ್ನಾಟಕಪ್ರಮುಖ

ಸಿಎಸ್ ಶಾಲಿನಿ ರಜನೀಶ್‌ಗೆ ಕ್ಷಮೆ ಕೇಳಿದ ಸ್ನೇಹಮಯಿ ಕೃಷ್ಣ ;ದಾರಿ ತಪ್ಪಿಸಿದ ವಿನೋದ್ ಹೆಸರು ರಿವೀಲ್!

Share
2 Min Read
SHARE

https://youtube.com/shorts/meQfr5hOsT4?si=–SvccKUHgJJVjWK

Subscribe ನ್ಯೂಸಿಕ್ಸ್ ಕನ್ನಡ

newsics.com

ಮುಡಾ ಹಗರಣದ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ. ವಿಚಾರಣೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವಿರುದ್ಧ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ತಮ್ಮ ಬಂಧನದ ಕುರಿತಾದ ವದಂತಿಗಳಿಗೆ ತೆರೆ ಎಳೆದ ಸ್ನೇಹಮಯಿ ಕೃಷ್ಣ, ‘ಪೊಲೀಸರು ನನ್ನನ್ನು ಬಂಧಿಸಿಲ್ಲ, ಕೇವಲ ನೋಟಿಸ್ ನೀಡಿ ವಿಚಾರಣೆಗೆ ಕರೆದಿದ್ದರು. ನಿನ್ನೆಯಿಂದಲೂ ಪೊಲೀಸರು ನನ್ನನ್ನು ಚೆನ್ನಾಗಿ ನಡೆಸಿಕೊಂಡಿದ್ದಾರೆ. ತನಿಖೆಗೆ ನಾನು ಪೂರ್ಣ ಸಹಕಾರ ನೀಡಿದ್ದೇನೆ. ಯಾವುದೇ ನಕಲಿ ದಾಖಲೆಗಳನ್ನು ನಾನು ಸೃಷ್ಟಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರಕರಣದ ಅಸಲಿ ಸತ್ಯ ಬಿಚ್ಚಿಟ್ಟ ಅವರು, ‘ವಿನೋದ್ ಎಂಬ ವ್ಯಕ್ತಿ ನನ್ನನ್ನು ದಾರಿ ತಪ್ಪಿಸಿದ್ದಾನೆ. ಮುಡಾ ಮಾಜಿ ಆಯುಕ್ತ ನಟೇಶ್ ಮತ್ತು ವಿನೋದ್ ನಡುವೆ ಹಳೆಯ ಹಣಕಾಸಿನ ವ್ಯವಹಾರವಿತ್ತು. ನಟೇಶ್ ಅವರಿಗೆ ವಿನೋದ್ ಹಣ ನೀಡಬೇಕಿತ್ತು. ಆ ಹಣವನ್ನು ಕೇಳಬಾರದು ಎಂಬ ಕಾರಣಕ್ಕೆ ವಿನೋದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಹೆಸರನ್ನು ಬಳಸಿ ಸುಳ್ಳು ದಾಖಲೆಗಳನ್ನು ಮತ್ತು ಮಾಹಿತಿಯನ್ನು ನೀಡಿದ್ದ. ವಿನೋದ್ ಕೊಟ್ಟ ದಾಖಲೆಗಳನ್ನು ನಂಬಿ ನಾನು ದೊಡ್ಡ ತಪ್ಪು ಮಾಡಿದೆ. ಈ ವಿಚಾರದಲ್ಲಿ ಶಾಲಿನಿ ರಜನೀಶ್ ಅವರಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ’ ಎಂದರು.

ವಿನೋದ್ ನೀಡಿದ ದಾಖಲೆಗಳು ಸುಳ್ಳಾದರೂ, ಮುಡಾ ಮಾಜಿ ಆಯುಕ್ತ ನಟೇಶ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಮಾತ್ರ ಸತ್ಯ ಎಂದು ಕೃಷ್ಣ ಪುನರುಚ್ಚರಿಸಿದ್ದಾರೆ. ‘ವಿನೋದ್ ಮೊದಲು ಶಾಲಿನಿ ರಜನೀಶ್ ಅವರ ಹೆಸರನ್ನು ಹೇಳಿದ್ದ, ಈಗ ವಿಚಾರಣೆ ವೇಳೆ ಅವರು ಯಾರೋ ಪ್ರಭಾವಿ ವ್ಯಕ್ತಿ ಎಂದು ಮಾತು ಬದಲಿಸುತ್ತಿದ್ದಾನೆ. ಈ ಇಡೀ ಪ್ರಸಂಗದಲ್ಲಿ ವಿನೋದ್ ನನ್ನನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರಕರಣಕ್ಕೂ ತಮ್ಮ ಮುಡಾ ಹಗರಣದ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ತಿಳಿಸಿದ್ದಾರೆ. “ಇದು ವೈಯಕ್ತಿಕವಾಗಿ ನಡೆದ ಒಂದು ಪ್ರಮಾದ. ನಮ್ಮ ಮುಡಾ ಹಗರಣದ ಹೋರಾಟದ ಹಾದಿ ಬೇರೆಯೇ ಇದೆ. ಸಿಸಿಬಿ ಪೊಲೀಸರು ನನಗೆ ಫೆಬ್ರವರಿ 24 ರಂದು ಮತ್ತೊಮ್ಮೆ ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದಾರೆ. ಅಂದು ಕೂಡ ನಾನು ಹಾಜರಾಗಿ ಸತ್ಯಾಂಶಗಳನ್ನು ತಿಳಿಸುತ್ತೇನೆ” ಎಂದು ಅವರು ಮಾತು ಮುಗಿಸಿದರು.

ಲೋಕಾ ಬಲೆಗೆ ಶಿರಹಟ್ಟಿ ಶಾಸಕ: ಚಂದ್ರು‌‌ ಲಮಾಣಿ ಸೇರಿ ಇಬ್ಬರು ಪಿಎಗಳ ಬಂಧನ

TAGGED:Snehamahi Krishna apologizes to CS Shalini Rajneesh; Vinod's name revealedwho led him astray!
Share This Article
Facebook Twitter Copy Link Print
Previous Article ಲೋಕಾ ಬಲೆಗೆ ಶಿರಹಟ್ಟಿ ಶಾಸಕ: ಚಂದ್ರು‌‌ ಲಮಾಣಿ ಸೇರಿ ಇಬ್ಬರು ಪಿಎಗಳ ಬಂಧನ
Next Article ನಕಲಿ ಪತ್ರಕರ್ತರ ಮೊಬೈಲ್‌ನಲ್ಲಿ ಮಹಿಳಾ ಅಧಿಕಾರಿಗಳ 100ಕ್ಕೂ ಹೆಚ್ಚು ಬೆ*ತ್ತಲೆ ವಿಡಿಯೋ ಪತ್ತೆ

Popular Posts

ಸನ್ನಿ ಡಿಯೋಲ್ ನಟನೆಯ ಲಾಹೋರ್ 1947 ಚಿತ್ರದ ಟೈಟಲ್ ಬದಲಾವಣೆ

1 Min Read

ನೇಪಾಳದಿಂದಲೂ ಭಾರತದ ಮಾವಿನಹಣ್ಣಿಗೆ ನಿರ್ಬಂಧ

1 Min Read

Janhvi Kapoor ಪೆದ್ದಿ ಸಕ್ಸಸ್ ಮೀಟ್‌ಗೆ ಜಾನ್ವಿ ಕಪೂರ್ ಗೈರು : ಕಾರಣವೇನು?

1 Min Read

ಟ್ರೆಕಿಂಗ್ ಹೋಗಿದ್ದ ಯುವತಿ ನಾಪತ್ತೆ :ಶೋಧಕ್ಕೆ 120 ಜನರು, ಡ್ರೋನ್​ಗಳು

1 Min Read

You Might Also Like

ಕರ್ನಾಟಕಪ್ರಮುಖ

ಪತಿಯೊಂದಿಗೆ ಜಗಳವಾಡಿ ತವರಿಗೆ ಹೊರಟಿದ್ದ ಮಹಿಳೆ ಮೇಲೆ ಗ್ಯಾಂಗ್ ರೇಪ್

1 Min Read
ದೇಶಪ್ರಮುಖಮನರಂಜನೆ

ಬೆಳ್ಳಿ ಲೋಟದಲ್ಲಿ ನೀರು ಕುಡಿದ್ರೆ ಸಿಗುತ್ತಂತೆ ಹತ್ತಾರು ಪ್ರಯೋಜನ; ಟಾಪ್​ ಸೀಕ್ರೆಟ್​ ರಿವೀಲ್ ಮಾಡಿದ ಕಂಗನಾ!

2 Min Read
ಲೈಫ್‌ಸ್ಟೈಲ್ಆರೋಗ್ಯಪ್ರಮುಖ

ಒಣ ತುಳಸಿ ಗಿಡವಿದ್ದರೆ ತಪ್ಪಿಯೂ ಎಸೆಯಬೇಡಿ.! ಈ ಕೆಲಸ ಮಾಡಿ ಸಾಕು ಎಲ್ಲವೂ ಒಳ್ಳೆಯದೇ ಆಗುತ್ತೆ.!

3 Min Read
ದೇಶಪ್ರಮುಖ

India arms policy ಭಾರತದ ಶಸ್ತ್ರಾಸ್ತ್ರ ನೀತಿಯಲ್ಲಿ ಮಹತ್ವದ ಬದಲಾವಣೆ: ಇದೇ ಮೊದಲ ಬಾರಿ 12 ಸಿಡಿತಲೆ ಪರಮಾಣು ನಿಯೋಜನೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?